"ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ" ಕಣ್ಮರೆ ಆಗುತ್ತಿರುವ ಬೋರ್ಡುಗಳು...!
ಮೊನ್ನೆ ನಮ್ಮ ಮನೆಗೆ ಯಾರೋ ಅತಿಥಿಗಳು ಬಂದಿದ್ದರು. ಅವರ ಜೊತೆ ಒಂದು ಸಣ್ಣ ಮಗು ಕೂಡ ಬಂದಿತ್ತು. "ಏನ್ ಪುಟ್ಟ, ಎಷ್ಟನೇ ಕ್ಲಾಸು" ಅಂತಾ ಕೇಳಿದೆ."ಎಲ್.ಕೆ.ಜಿ,ಅಂಕಲ್" ಅಂತಾ ಹೇಳ್ತು. ಇಷ್ಟು ಸಣ್ಣ ಪ್ರಾಯದಲ್ಲೇ ಅಂಕಲ್ ಮಾಡ್ತಲಾ ಅನ್ನೋ ಬೇಜಾರಲ್ಲೇ, "ಒಂದು ಹಾಡು ಹೇಳು ನೋಡೋಣ"ಅಂತಾ ಕೇಳಿದೆ. ಅದಕ್ಕೇ "ರೈನ್,ರೈನ್ ಗೋ ಅವೇ"ಅಂತಾ ಶುರುಮಾಡಿ "ಟ್ವಿಂಕಲ್,ಟ್ವಿಂಕಲ್ ಲಿಟ್ಲ ಸ್ಟಾರ್" ಹೇಳಿ ನಿಲಿಸ್ತು. ನಾವು ಸಣ್ಣವರಿದ್ದಾಗ "ಹೊಯ್ಯೋ,ಹೊಯ್ಯೋ ಮಳೆರಾಯ ಮಾವಿನ ತೋಪಿಗೆ ನೀರಿಲ್ಲಾ"ಅಂತಾ ಮಳೆಯನ್ನು ಕರೆಯುತ್ತಾ ಇದ್ವಿ,ಆದ್ರೆ ಇವಾಗಿನ ಮಕ್ಕಳ "ರೈನ್,ರೈನ್ ಗೋ ಅವೇ" ಪದ್ಯ ಕೇಳಿ ಮಳೆರಾಯ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣ ಸಿಗ್ತಾ ಇಲ್ಲಾ. "ಬಂದ,ಬಂದ ಸಂತಮ್ಮಣ್ಣ", "ತಿರುಕನೋರ್ವ ನೂರಮುಂದೆ,ಮುರುಕು ಧರ್ಮಶಾಲೆಯಲ್ಲಿ ಓರಗಿರುತ್ತಲ್ಲೊಂದ ಕನಸ ಕಂಡನಂತೆಯೇ", "ಧರಣಿ ಮಂಡಲ ಮಧ್ಯದೊಳಗೆ,ಮೆರೆವುತ್ತಿಹ ಕರ್ನಾಟ ದೇಶದಿ",ಎನ್ನುವ ಪಾಠಗಳನ್ನು ನಾವು ಓದುತ್ತಿರಬೇಕಾದ್ರೆ, ನಮ್ಮ ತಂದೆ ತಾಯಿಗಳು ಅವರ ಶಾಲಾ ಜೀವನವನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಇವೆಲ್ಲಾ ಮೆರೆದಿದ್ದು 20 ನೇಯ ಶತಮಾನದಲ್ಲಿ. 21ನೇಯ ಶತಮಾನದ ಆರಂಭದಲ್ಲೇ ಇಂಗ್ಲೀಷ್ ಮೀಡಿಯಂಗಳ ಅಟ್ಟಹಾಸದೆದುರು ಸರ್ಕಾರಿ ಹಾಗೂ ಖಾಸಗಿ ಅನುದ