Posts

Showing posts from September, 2017

ಅವಳ್ಯಾಕೆ ನಗಲಿಲ್ಲಾ, ನನ್ನ ಮುಖ ನೋಡಿ...!?

Image
          ಇಂಜಿನಿಯರಿಂಗ್ ಓದುತ್ತಿದ್ದ ದಿನಗಳವು, ಫಿಸಿಕ್ಸ್ ಮತ್ತು ಕೆಮೆಸ್ಟ್ರಿ ಸೈಕಲ್ ಸರಿಯಾಗಿ ತುಳಿದು EC ಬ್ರಾಂಚ್ಗೆ ಎಂಟ್ರಿ ಆಗಿತ್ತು. ನಾನೊಬ್ಬ ಕಾರ್ನರ್ ಹುಡುಗ, ನನ್ನಷ್ಟಕ್ಕೆ  ನಾನು ಕಾಲೇಜಿಗೆ ಬರ್ತಾ ಇದ್ದೆ ಕಾರ್ನರ್ ಸೀಟ್ ನಲ್ಲಿ ಕುರ್ತಾ ಇದ್ದೇ , ಲೆಕ್ಚರ್ಸ್ ಗಳ ಪಾಠ ಇಷ್ಟ ಆದ್ರೆ ಕೇಳ್ತಾ ಇದ್ದೆ, ಇಲ್ಲದಿದ್ದರೆ ನನ್ನ ಕಲ್ಪನಾ ಲೋಕದಲ್ಲಿ ನನನ್ನು ನಾನು ಕಳೆದುಕೊಂಡು ಹಾಸ್ಟೆಲಿಗೆ ಹೋಗಿ ಬಿದ್ದುಕೊಳ್ಳುತ್ತ ಇದ್ದೇ. ಹನುಮಂತನ ವಂಶದವರು ನಾವು ಹಾಗಾಗಿ ಕಾಲೇಜು ಆರಂಭವಾಗಿ ಎರಡು ಸೆಂ ಕಳೆದ್ರು ಹುಡುಗರನ್ನು ಬಿಟ್ಟು ,ಹುಡುಗಿಯರ ಹತ್ರ ಅಷ್ಟಾಗಿ ಮಾತಾಡೋದು ಇರಲಿ, ಹುಡುಗಿಯರ ಕಡೆ ನೋಡೋದು ಕಮ್ಮಿ ಇತ್ತು . ಹುಟ್ಟಿನಿಂದ ಬಾಯ್ಸ್ ಸ್ಕೂಲ್ ನಲ್ಲಿ ಕಲಿತಿದ್ದಕ್ಕೆನೋ, ಗೊತ್ತಿಲ್ಲ ಹುಡುಗಿಯರ ಹತ್ತಿರ ಮಾತನಾಡಲಿಕ್ಕೆ ಸ್ವಲ್ಪ ಮುಜುಗರ ಜಾಸ್ತಿ .           ಹೀಗೆ ನಡೆತಿರಬೇಕಾದರೆ ಒಂದು ದಿನ ಮೇಡಂ ಕೇಳಿದ ಪ್ರಶ್ನೆಗೆ ಉತ್ತರ ಹೇಳಲಿಕ್ಕೆ, ಹುಡುಗಿಯರ ಕಡೆಯಿಂದ ಒಬ್ಬಳು ಎದ್ದು ನಿಂತ್ಲು . ಯಾರು ನೋಡೋಣ ಅಂತ ತಿರುಗಿದೆ, ಕತ್ತು ಉಳುಕಿತೋ ಏನೋ ಗೊತ್ತಿಲ್ಲ, ಹೇಳಿಕೇಳಿ ಕಾರ್ನರ್ ಸೀಟ್ ನೋಡಿ ನನ್ನ ಮಗಂದು ಈ ಕಡೆ ತಿರುಗಲೇ ಇಲ್ಲ, ನೋಡಿಕೊಂಡೇ ಕುಳಿತುಕೊಂಡೆ. ಅವತ್ತು ರಾತ್ರಿ ಯಾಕೋ ಜಾಸ್ತಿನೇ ನಿದ್ದೆ ಬರಲಿಲ್ಲ. ಮುಂದಿನ ದಿನದಿಂದ ಕಾಲೇಜಿಗೆ ಹೋಗಲಿಕ್ಕೆ ಯಾಕೋ ಜಾಸ್ತಿ ಖುಷಿ.  ಹೇಗೆ ಹೇಗೋ ಹೋಗ್ತಾ ಇದ್ದವನು ಸ್ವಲ್