Posts

Showing posts from April, 2017

"ತಂದೆ ಎನ್ನುವ ಪದವಿ" ಗಂಡು ಮಕ್ಕಳ ಕಣ್ಣಲ್ಲಿ...!!

Image
                  "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ" ಎನ್ನುವ ಮಾತಿಗನುಸಾರವಾಗಿ, ನಮ್ಮ ಸಮಾಜದಲ್ಲಿ ತಾಯಿಗೆ ಒಂದು ಉತ್ತಮವಾದ ಸ್ಥಾನಮಾನವನ್ನು ಕಲ್ಪಿಸಿದ್ದೇವೆ. ಆದರೆ ತಂದೆಗೆ ತಾಯಿಯಷ್ಟು ಮಹತ್ವವನ್ನು ನಮ್ಮ ಸಮಾಜ ಕೊಟ್ಟಂತೆ ಕಾಣುತ್ತಿಲ್ಲಾ. ಅದರಲ್ಲೂ ಗಂಡು ಮಕ್ಕಳಿಗೆ ತಂದೆ ಒಬ್ಬ ವಿಲನ್. ತಂದೆ ಅನ್ನುವುದು ಒಂದು ಅಧಿಕಾರ,ಅದೊಂದು ಪದವಿ,ಅದೊಂದು ಜವಾಬ್ಧಾರಿ. ಒಂದು ಒಳ್ಳೆಯ ಗಂಡು ಮಗನಾಗಿ ತಂದೆ ಬಗ್ಗೆ ಹೇಳುವ ಒಂದು ಸಣ್ಣ ಪ್ರಯತ್ನ.           ತಂದೆ ಎನ್ನುವ ಪದ,ಮಗುವಿನ ಜನನದೊಂದಿಗೆ ಜನ್ಮ ತಾಳುತ್ತೆ. ಅದರ ಜೊತೆ ಒಂದು ಜೀವದ ಜವಾಬ್ಧಾರಿಯೂ ಆ ಪದವಿಯ ಮೇಲೆ ಬೀಳುತ್ತೆ. ಆ ಕ್ಷಣದಲ್ಲಿ ತಂದೆಗೆ ಮಗನಾಗಿದ್ದವನು ತನ್ನ ಮಗುವಿಗೆ ತಂದೆ ಆಗುತ್ತಾನೆ. ಇಷ್ಟು ದಿನಗಳ ಕಾಲ ತಾನು ನಿಂತು ವೀಕ್ಷಿಸುತ್ತಿದ್ದಂತಹ ಸ್ಥಾನದಲ್ಲಿ ಕೂರುವ ಸರದಿ ಇವನದ್ದಾಗಿರುತ್ತದೆ. ಅದರಲ್ಲೂ ಹೆಣ್ಣು ಮಗು ಹುಟ್ಟಿತು ಅಂತಾ ಬೇಜಾರು ಮಾಡಿಕೊಳ್ಳುವವರು ಒಂದು ಕಡೆ ಆದರೆ, "ಮಗು ಯಾವುದಾದರೂ ಆಗಲಿ, ಹೆಂಡತಿ ಮಗು ಚೆನ್ನಾಗಿದ್ದರೆ ಸಾಕು" ಅಂತಾ ಸಂತೋಷ ಪಡುವವರು ಒಂದು ಕಡೆ. ಹಾಗೆಯೇ  "ನನಗೆ ತಂದೆ ಆಗುವ ಭಾಗ್ಯ ಯಾವಾಗ ಕರುಣಿಸುತ್ತಿಯಪ್ಪ" ಅಂತಾ ದೇವರ ಬಳಿ ಬೇಡಿಕೊಳ್ಳುವವರೂ ಒಂದು ಕಡೆ.          "ಬೇಜವ್ಧಾರಿ ಹುಡುಗ,ಸಮಯಕ್ಕೆ ಸರಿಯಾಗಿ ಮನೆಗೆ ಬರುವುದಿಲ್ಲಾ", ಅಂತೆಲ್ಲಾ ಬೈಯಿಸಿಕೊಳ್ಳ

ಸಣ್ಣ ಸಣ್ಣ ವಿಷಯದಲ್ಲಿರುವ ದೊಡ್ಡ ದೊಡ್ಡ ಸಂತೋಷಗಳು...

Image
                    ಒಂದು ಶುಕ್ರವಾರ ಸಂಜೆ,ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಇಬ್ಬರು ಯುವಕರು ಎದುರು ಬದುರು ಕೂತು ಹೋಗ್ತಾ ಇರ್ತಾರೆ. ಒಬ್ಬ ತಾನು ದೊಡ್ಡ ಸಂಗೀತ ನಿರ್ದೇಶಕ ಆಗಬೇಕು ಅಂತಾ, ಇದ್ದ ಕೆಲಸವನ್ನು ಬಿಟ್ಟು, ಮನೆಯವರ ಮಾತು ಕೇಳದೇ, ಆ ರೈಲಿನಲ್ಲಿ ಬೆಂಗಳೂರಿನ ದಾರಿ ಹಿಡಿದವನಾದರೆ. ಇನೊಬ್ಬ ಮೈಸೂರಿನಲ್ಲಿ ಕೆಲಸದಲ್ಲಿದ್ದುಕೊಂಡು, ತನ್ನ ದಿನದ ಕೆಲಸವನ್ನೆಲ್ಲಾ ಮುಗಿಸಿ, ವಾರಾಂತ್ಯವನ್ನು ತನ್ನ ಮನೆಯವರೊಂದಿಗೆ ಕಳೆಯಲು ಹೊರಟಿರುತ್ತಾನೆ. ಹೀಗೆ ಇಬ್ಬರು ಮಾತನಾಡಿಕೊಂಡು ಪರಿಚಯ ಮಾಡಿಕೊಳ್ಳುತ್ತಾರೆ. ಕೆಲಸದಲ್ಲಿರುವ ಹುಡುಗ ಸಂಗೀತ ನಿರ್ದೇಶಕನಾಗಬೇಕು ಅಂತಾ ಹೊರಟವನ ಬಳಿ ಕೇಳುತ್ತಾನೆ "ಯಾಕೆ ನೀವು ಅಷ್ಟು ಒಳ್ಳೇಯ ಕೆಲಸ ಬಿಟ್ಟು, ಈ ದಾರಿ ಹಿಡಿದಿದ್ದೀರಿ" ಅಂತಾ. ಅದಕ್ಕೆ ಅವನು "ನನಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಎತ್ತರದ ಹಂತಕ್ಕೆ ಹೋಗಬೇಕು, ಸಾವಿರಾರು ಜನರ ಮನಸ್ಸು ಗೆಲ್ಲಬೇಕು, ನನ್ನ ಸಂಗೀತಕ್ಕೆ ಜನ ಹುಚ್ಚೆದ್ದು ಕುಣಿಯಬೇಕು, ಅನ್ನೋ ಆಸೆ ಇದೆ, ಅದಕ್ಕೋಸ್ಕರ ಈ ಪಯಣ" ಅಂತಾನೆ. ಹಾಗೆಯೇ ಅವನು ಕೆಲಸದಲ್ಲಿರುವ ಹುಡುಗನಿಗೆ ಮರು ಪ್ರಶ್ನೆ ಹಾಕುತ್ತಾನೆ "ನಿಮಗೆ ಇದೇ ತರಹ ಯಾವುದೇ ಗುರಿಗಳು ಇಲ್ಲವಾ" ಅಂತಾ. ಅದಕ್ಕೆ ಅವನು "ನನಗೂ ಇದೇ,ಈಗ ಇರುವ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋಗಬೇಕು, ನನ್ನ ತಂಗಿಗೆ ಒಳ್ಳೇಯ ಹುಡುಗನನ್ನು ನೋಡಿ ಮದುವೆ ಮಾಡಬೇಕು, ನ

ಸಾಫ್ಟವೇರ್ ತವರೂರಲ್ಲಿ ನಿರುದ್ಯೋಗಿ ಕನ್ನಡಿಗ...

Image
                  ಸಾಫ್ಟವೇರ್ ಕ್ರಾಂತಿ ಭಾರತದಲ್ಲಿ ಪಾದಾರ್ಪಣೆಗೊಂಡ ಬಳಿಕ ಐಟಿ ಕ್ಷೇತ್ರದ ರಾಜಧಾನಿ ಹೊಣೆ ವಹಿಸಿಕೊಂಡಿದ್ದು ನಮ್ಮ ಕರ್ನಾಟಕದ ಬೆಂದಕಾಳೂರು A/s ಬೆಂಗಳೂರು. ಕೆಲವೇ ವರ್ಷಗಳಲ್ಲಿ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಹೆಸರನ್ನು ಕೇಳುವಂತೆ ಮಾಡಿದ್ದು ಇದೇ ಬೆಂಗಳೂರು. ಇಲ್ಲಿನ ವಾತಾವರಣ,ಸೌಲಭ್ಯಗಳ ಪೂರೈಕೆ,ಐಟಿ ಕ್ಷೇತ್ರಕ್ಕೆ ಕರ್ನಾಟಕ ಸರ್ಕಾರ ನೀಡುತ್ತಿರುವ ಸಹಕಾರದಿಂದ ಬಹುಬೇಗ ಅನೇಕ ಕಂಪೆನಿಗಳಿಗೆ ಬೆಂಗಳೂರನ್ನು ತಮ್ಮ ಪ್ರಮುಖ ಕಾರ್ಯಕ್ಷೇತ್ರ ಮಾಡಿಕೊಳ್ಳಲು ಸಹಕಾರಿಯಾಯಿತು. ಇತ್ತಿಚಿನ ವರದಿ ಪ್ರಕಾರ ಭಾರತದಲ್ಲಿರುವ ಒಟ್ಟು ಐಟಿ ಕಂಪೆನಿಗಳಲ್ಲಿ 35% ಕಂಪೆನಿಗಳು ಬೆಂಗಳೂರಿನಲ್ಲಿವೆ. ಸಣ್ಣ ಪುಟ್ಟ ಕಂಪೆನಿಗಳು ಸೇರಿ ಒಟ್ಟು 5000 ಕಂಪೆನಿಗಳು ಬೆಂಗಳೂರು ಒಂದರಲ್ಲೆ ಇವೆ ಅನ್ನುವುದು ಇತ್ತಿಚಿನ ಅಂಕಿ ಅಂಶ. ಐಟಿ ದಿಗ್ಗಜಗಳಾದ ಇನ್ಫೋಸಿಸ್,ವಿಪ್ರೋ,ಮೈಂಡ್ ಟ್ರೀ,ಎಂಪಸಿಸ್ ಇನ್ನೂ ಮುಂತಾದವುಗಳಿಗೆ ಬೆಂಗಳೂರು ಪ್ರಧಾನ ಕಛೇರಿ ಆದರೆ, ವಿದೇಶಿ ಕಂಪೆನಿಗಳಾದ ಇನಟೆಲ್,ಟೆಕ್ಸಾಸ್ಇನ್ಸಟ್ರುಮೆಂಟ್ಸ್,ಬೋಷ್,ಯಾಹೂ,ಸಾಪ್ ಲಾಬ್ಸ್ ಅಂತಹವುಗಳಿಗೆ ಭಾರತದ ಪ್ರಧಾನ ಕಛೇರಿ ಬೆಂಗಳೂರು. ಇಷ್ಟೇ ಅಲ್ಲದೇ ಕೆಲವು ಕಂಪೆನಿಗಳು ಬೆಂಗಳೂರು ಮಾತ್ರವಲ್ಲದೇ ಮೈಸೂರು, ಹುಬ್ಬಳ್ಳಿ,ಮಂಗಳೂರಿನಲ್ಲೂ ಕಾರ್ಯ ನಿರ್ವಹಿಸುತ್ತಿವೆ.           ಈ ಕಂಪೆನಿಗಳು ಬಳಸುತ್ತಿರುವುದು ನಮ್ಮ ನಾಡಿನ ನೀರು,ವಿದ್ಯುತ್,ನೆಲ ಹಾಗೂ ಇನ್ನು ಅನೇಕ ಸ

ಕನಸಿನೂರಿನ ರಾಜಕುಮಾರಿ ಕಣ್ಣೆದುರು ಬಂದ ಸಮಯ...

Image
                  ಸಾಫ್ಟವೇರ್ ಅನ್ನೋ ಜಗತ್ತು ಆರಂಭವಾದ ಮೇಲೆ, ವಾರಾಂತ್ಯ ಅನ್ನೋ ಪದ ತುಂಬಾ ಮಹತ್ವ ಪಡೆದುಕೊಂಡಿತು. ಮದುವೆ,ನಿಶ್ಚಿತಾರ್ಥ,ನಾಮಕರಣದಂತಹ ಸಮಾರಂಭಗಳಿಂದ ದೂರವಿದ್ದಂತಹ ಯುವಜನತೆ, ಸಾಫ್ಟವೇರ್ ವೃತ್ತಿಯ ಹಿಂಬಾಲಕರಾದ ಮೇಲೆ ಹೆಚ್ಚೆಚ್ಚು ಇಂತಹ ಸಮಾರಂಭಗಳಲ್ಲಿ ಕಾಣಸಿಗುತ್ತಿದ್ದಾರೆ. ಅವರಿಗೆ ಕೆಲಸದ ಜಂಜಡಗಳಿಂದ ಇಂತಹ ಕಾರ್ಯಕ್ರಮಗಳು ವಿರಾಮ ನೀಡುತ್ತಿವೆ.           ನಾನೂ ಒಬ್ಬ ಸಾಫ್ಟವೇರ್ ಇಂಜಿನಿಯರ್. ಪ್ರಥಮ್ ಅಂತಾ ನನ್ನ ಅಪ್ಪ ಅಮ್ಮ ಹೆಸರಿಟ್ಟಿದ್ದಾರೆ. ಆಕಸ್ಮಿಕಗಳು,ನಾವು ಎಣಿಸದೇ ಇರುವ ಘಟನೆಗಳು ನನ್ನ ಜೀವನದಲ್ಲೂ ನಡೆಯುತ್ತೆ ಅಂತಾ ನಾನು ಯೋಚಿಸಲೇ ಇರಲಿಲ್ಲ. ದೇವನೆಂದರೆ ಅವನೇ, ನಾವು ಐದು ರೀತಿಯಲ್ಲಿ ಚಿಂತಿಸಿದರೆ ಆರನೇ ರೀತಿಯಲ್ಲಿ ಅವನು ನಮ್ಮನು ಕರೆದುಕೊಂಡು ಹೋಗುತ್ತಾನೆ. ನನ್ನ ಅಮ್ಮನ ಮನೆಯಲ್ಲಿ ವಾರಾಂತ್ಯ ಸತ್ಯನಾರಾಯಣ ಕಥೆ ಪೂಜೆ ಇಟ್ಟುಕೊಂಡಿದ್ದರು. ನನಗೂ ಹೊಸ ವಾತಾವರಣ ಖುಷಿಕೊಡುತ್ತೆ ಅಂತಾ ಶುಕ್ರವಾರ ರಾತ್ರಿ ಹೊರಟು ನಿಂತೆ. ನನ್ನ ಅಮ್ಮನ ಮನೆ ಉಡುಪಿ ಜಿಲ್ಲೆಯ ಮಾಬುಕಳ ಅನ್ನೋ ಸಣ್ಣ ಗ್ರಾಮ. ಈ ಊರಿನ ಹೆಸರು ಕೇಳಿದ ತಕ್ಷಣ ನನ್ನ ಜೀವನದಲ್ಲಿ ನಡೆದ ಒಂದು ಘಟನೆ ನೆನಪಾಯಿತು-- ಅದು ನನ್ನ ಮನೆಯಲ್ಲಿ ನನ್ನ ಮದುವೆ ಪ್ರಸ್ತಾಪ ನಡೆಯುತ್ತಿದ್ದ ಸಮಯ. ನಾನು ಸಾಫ್ಟವೇರ್ ಇಂಜಿನಿಯರ್ ಆದ್ರೂ ಹುಡುಗಿ ತುಂಬಾ ಓದಿರಬೇಕು,ಕೆಲಸಕ್ಕೆ ಹೋಗಬೇಕು ಪಟ್ಟಣದವಳೇ ಆಗಿರಬೇಕು ಅನ್ನೋ ನಿಭಂಧನೆಗಳೇನು ಇರಲಿಲ್

ನೀ ಬರದ ಹಾದಿಯಲಿ ಒಬ್ಬನೇ ಸಾಗಿರುವೆ...

Image
                    ನಮಸ್ಕಾರ ನನ್ನ ಹೆಸರು ಸುಹಾಸ್ ಅಂತಾ ನಾನು ಹೇಳಲಿಕ್ಕೆ ಹೊರಟಿರೋದು ನನ್ನ ಲೈಫ್ ಅಲ್ಲಿ ಹೀಗೆ ಬಂದು ಹಾಗೆ ಹೋದ ಒಂದು ಸಣ್ಣದಾದ, ಸುಂದರವಾದ ಲವ್ ಸ್ಟೋರಿ ಅಲ್ಲಾ ಅಲ್ಲಾ ಲೈಫ್ ಸ್ಟೋರಿ. ಅವತ್ಯಾಕೋ ಆಫೀಸಿನಲ್ಲಿ ಕೈ ತುಂಬಾ ಕೆಲಸಗಳು ಇದ್ರು ಮಾಡಲಿಕ್ಕೆ ಮನಸ್ಸು ಇರಲಿಲ್ಲಾ. ಮನಸ್ಸಿನಲ್ಲಿ ಏನೋ ತಳ-ಮಳ,ಇನ್ನೂ ಕಾಲ ಮಿಂಚಿಲ್ಲ ಅನ್ನೋ ಭಾವನೆ. ಸಂಜೆ ಆಗೋ ತನಕ ಕಾದು,ಮನಸ್ಸನು ಸ್ವಲ್ಪ ಶಾಂತ ಮಾಡಿಕೊಳ್ಳೋಣ ಆಂತಾ ಸಮುದ್ರದ ಕಡೆಗೆ ಹೋದೆ. ಯಾಕಂದ್ರೇ ನಾಳೆ ನನ್ನ ಹುಡುಗಿ ಮದುವೆ ಆದ್ರೆ ಹುಡುಗ ಮಾತ್ರ ನಾನಲ್ಲ.           ನಾನು ಮತ್ತು ಅವಳು ಒಂದೇ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇರೋದು. ಸ್ನೇಹ ಮೊದಲಿನಿಂದಲೂ ಇಬ್ಬರ ನಡುವೆ ಇತ್ತು. ಆದ್ರೆ ಅದು ಪ್ರೀತಿಗೆ ತಿರುಗಿದ್ದೇ ಒಂದು ಅದ್ಭುತ. ಶುಕ್ರವಾರ ಸಂಜೆ ಅಮ್ಮನ ನೆನಪಾಗುತ್ತೆ ಅಂತಾ ಮನೆಗೆ ಹೋಗ್ತಾ ಇದ್ದವಳು. ತಿರುಗಿ ಬರುತ್ತಾ ಇದ್ದಿದ್ದು ಸೋಮವಾರ ಬೆಳಗ್ಗೆ. ಅವಳು ಬರುತ್ತಿದ್ದ ರೈಲು ಬೆಳ್ಳಂಬೆಳ್ಳಗೆ 4 ಗಂಟೆಗೆ ಸ್ಟೇಷನ್ಗೆ ಬರುತ್ತಾ ಇತ್ತು. ಪಾಪ ಅವ್ಳೊಬ್ಬಳಿಗೆ ಅವಳ ಪಿಜಿಗೆ ಹೋಗಲಿಕ್ಕೆ ಭಯ. ಹಾಗಾಗಿ ನನಗೆ ಹಿಂದಿನ ದಿನವೇ ಪೋನ್ ಮಾಡಿ ಸ್ಟೇಷನ್ಗೆ ಬರಲಿಕ್ಕೆ ಸಂಕೋಚ ಆದ್ರು ಹೇಳ್ತಾ ಇದ್ಲು. ನಾನು ಬೆಳ್ಳಗೆ 3 ಗಂಟೆಗೆ ಎದ್ದು ಹೋಗ್ತಾ ಇದ್ದೆ. ನನ್ನ ಜೊತೆ ಒಂದು ಬೀದಿ ನಾಯಿ ಕೂಡ ಬರುತ್ತಿತ್ತು ಅದಕ್ಕೆ ಬಿಸ್ಕೆಟ್. ಹಾಕ್ಕೊಂಡು ಇರುತ್ತಿದ್ದೆ. ಟ್ರೈನ್ ಬಂದ

ಕಲರ್ ಪುಲ್ ಕನಸು...

Image
                  ಮಕ್ಕಳೇ ಕನಸು ಕಾಣೀ ಅಂತಾ ಹೇಳಿದವರು ಭಾರತ ರತ್ನ ಅಬ್ದುಲ್ ಕಲಾಂ ಅವರು. ಕನಸು ಯಾರು ನೋಡಲ್ಲಾ ಹೇಳಿ, ಪ್ರತಿಯೊಬ್ಬರು ಕನಸು ಕಾಣ್ತಾರೆ. ಭಿಕ್ಷುಕನಿಗೆ ಹಣವಂತನಾಗುವ ಕನಸು. ಹಣವಂತನಿಗೆ ಇನ್ನೂ ಹೆಚ್ಚು ಹಣಗಳಿಸುವ ಕನಸು. ಮಕ್ಕಳಿದ್ದಾಗ ಆಟಿಕೆಯ ಕನಸು. ಶಾಲಾ ಕಾಲೇಜು ದಿನಗಳಲ್ಲಿ ಉತ್ತಮ ಅಂಕಗಳಿಸುವ ಕನಸು. ಹಾಗೆಯೇ ಕನಸಿನ ಹುಡುಗಿ/ಹುಡುಗನ ಕನಸು. ಕಾಲೇಜು ಮುಗಿದ ಮೇಲೆ ಒಳ್ಳೆಯ ಉದ್ಯೋಗದ ಕನಸು. ಉದ್ಯೋಗ ದೊರಕಿದ ಮೇಲೆ ಮದುವೆ,ಮನೆ,ಕಾರಿನ ಕನಸು. ಆಮೇಲೆ ತಮಗೆ ಹುಟ್ಟುವ ಮಕ್ಕಳ ಭವಿಷ್ಯದ ಕನಸು. ಹೀಗೆ ಕನಸುಗಳಿಗೆ ಮಿತಿ ಇಲ್ಲ. ಯಾಕಂದ್ರೆ ಕನಸು ಕಾಣಲಿಕ್ಕೆ ದುಡ್ಡು ಕೊಡಬೇಕಿಲ್ಲ ನೋಡಿ.           ಯೌವನದಲ್ಲಿ ಹುಟ್ಟುವ ಕನಸುಗಳು ತುಂಬಾ ಸುಂದರವಾಗಿರುತ್ತೆ. ಯಾವುದೇ ತಲೆ ಬಿಸಿ ಇಲ್ಲದೇ ಜವಾಬ್ದಾರಿಗಳಿಲ್ಲದೇ ನಮ್ಮ ಕನಸಿನ ಲೋಕದಲ್ಲಿ ವಿಹರಿಸುತ್ತಾ ಇರಬಹುದು. ಈ ಕಾಲದಲ್ಲಿ ಬೀಳುವ ಕನಸುಗಳು ನಮ್ಮ ಜೀವನವನ್ನು ಸಹಾ ರೂಪಿಸುತ್ತವೆ. ಒಂದು ಉತ್ತಮ ಭವಿಷ್ಯದ ಕನಸನ್ನು ಕಂಡು ಅದನ್ನು ಈಡೇರಿಸಿಕೊಳ್ಳಲಿಕ್ಕೆ ಭದ್ರ ಬುನಾದಿ ಹಾಕಲು ಯೌವನ ಸಕಾಲ. ಯೌವನದಲ್ಲಿ ಮುಖ್ಯವಾಗಿ ಎರಡು ತರಹದ ಕನಸುಗಳನ್ನು ಎಲ್ಲರೂ ನೋಡ್ತಾರೆ. ಒಂದು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಇನ್ನೊಂದು ತಮ್ಮ ಲೈಪ್ ಪಾರ್ಟನರ್ ಬಗ್ಗೆ. ಒಂದು ಎತ್ತರದ ಸ್ಥಾನಕ್ಕೆ ಹೋಗಬೇಕು,ತುಂಬಾ ಹಣ ಮಾಡಬೇಕು,ಕೀರ್ತಿಗಳಿಸಬೇಕು ಅನ್ನೋದು ಒಂದು ರೀತಿ ಆದರೆ. ಮದುವೆ

ಪರೀಕ್ಷೆ ಅನ್ನೋ ಭೂತಕ್ಕೆ ಅವರವರ ಮಂತ್ರವಾದ...!!!

Image
          ಒಂದು ಶಾಲಾ ಆವರಣದ ಗಣಪತಿ ದೇವಸ್ಥಾನ. ಅವತ್ತು ಬೆಳ್ಳಂಬೆಳ್ಳಗೆ ಹುಡುಗಿಯರನ್ನು ನೋಡಲಿಕ್ಕೆ ದೇವಸ್ಥಾನಕ್ಕೆ ಬರುವವರು ಸಹ ದೇವರನ್ನು ನೋಡಲಿಕ್ಕೆ ಬಂದಿದ್ದರು. ಯಾಕೆಂದರೆ ಆ ದಿನದಿಂದ ಪರೀಕ್ಷೆ ಆರಂಭವಾಗುವುದಿತ್ತು. ಎಲ್ಲರೂ ಬೇಡಿಕೊಂಡು ಹೋದ ಮೇಲೆ ಗಣಪತಿ ಮತ್ತು ಮೂಷಿಕನ ನಡುವೆ ಒಂದು ಸಣ್ಣ ಸಂವಾದ. ಮೂಷಿಕ: ಅಯ್ಯಾ ಗಣರಾಯ.........ಎಲ್ಲರೂ ನಾನಾ ಬೇಡಿಕೆಗಳನ್ನು ನಿನ್ನ ಮುಂದಿಟ್ಟರು. ಕೆಲವರು ಉತ್ತೀರ್ಣನಾದರೆ ಸಾಕು ಅಂದರೆ ಇನ್ನೂ ಕೆಲವರು ನೂರಕ್ಕೆ ನೂರು ಬೇಕೆಂದು ಕೇಳಿಕೊಂಡರು ಇವರೆಲ್ಲರ ಬೇಡಿಕೆಗಳನ್ನು ಹೇಗೆ ನೆರವೇರಿಸುತ್ತಿಯ. ಗಣಪತಿ: ಇವರೆಲ್ಲರ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಇರುವುದು ಒಂದೇ ಮಾರ್ಗ ಅದುವೇ ಪ್ರಶ್ನೆಪತ್ರಿಕೆಯನ್ನು ಸುಲಭವಾಗಿ ನೀಡುವುದು. ಮೂಷಿಕ: ಪ್ರಶ್ನೆ ಪತ್ರಿಕೆಯನ್ನು ಸುಲಭವಾಗಿ ನೀಡಿದರೂ,ಕೆಲವರು ಅನುತ್ತೀರ್ಣರಾಗಲು ಕಾರಣವೇನು. ಗಣಪತಿ: ಪ್ರಶ್ನೆ ಪತ್ರಿಕೆಗಳು ಎಲ್ಲರಿಗೂ ಸಮಾನವಾಗಿದ್ದರೂ ಅಂಕಗಳು ಅವರವರ ವಿಷಯ ಜ್ಞಾನ,ಅರ್ಥೈಸುವಿಕೆ,ಪರಿಶ್ರಮದ ಮೇಲೆ ನಿರ್ಧರಿತವಾಗಿರುತ್ತವೆ. ಒಳ್ಳೆಯ ರೀತಿಯಲ್ಲಿ ಪೂರ್ವ ತಯಾರಿ ಮಾಡಿದವನು ಒಳ್ಳೆಯ ಅಂಕಗಳನ್ನು ಪಡೆಯುತ್ತಾನೆ. ಏನನ್ನೂ ಮಾಡದವನಿಗೆ ಪ್ರಶ್ನೆ ಪತ್ರಿಕೆ ಸುಲಭ ಬಂದಿರುವುದೇ ತಿಳಿಯುವುದಿಲ್ಲ. ಜ್ಞಾನ ಸಂಪಾದನೆಗೆ ಮೆದುಳನ್ನು ನಾನು ನೀಡಿರುವಾಗ ಅದನ್ನು ಉಪಯೋಗಿಸದೇ ಕೇವಲ ನನ್ನ ಪಾದವನ್ನು ಹಿಡಿದುಕೊಂಡವನಿಗೆ ನಾನೇನು ಮಾಡಲು ಸ

ನಮಗೂ ಇದೇ ತರಹದ ಗೆಳೆಯರಿದ್ರು...!!!

Image
          ಜುಮುಗುಡುವ ಡಿಸೆಂಬರ್ ಚಳಿಯಲ್ಲಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳೋಣ ಅಂತಾ. ತಡರಾತ್ರಿ ನಾನು ಮತ್ತು ನನ್ನ ಫ್ರೇಂಡ್ ಸಮುದ್ರದಂಡೆಗೆ ಹೋಗಿದ್ವಿ. ಬಿಸಿ ಜಾಸ್ತಿಯಾಗಿ ಮನೆಗೆ ಹೋಗೊಣ ಅಂತಾ ನೋಡಿದ್ರೆ,ಗಾಡಿಯಲ್ಲಿ ಪೆಟ್ರೋಲ್ ಮುಗಿದುಹೋಗಿತ್ತು. ಅಮವಾಸ್ಯೆ ಕತ್ತಲು ಬೇರೆ. ಕೂಗಿ ಕರೆದರೂ ಹಾ ಅನ್ನಲಿಕ್ಕೆ ಜನ ಇರಲಿಲ್ಲಾ. ಅಂತಹಾ ಸಮಯದಲ್ಲಿ ಸಹಾಯಕ್ಕೆ ಬಂದಿದ್ದು ನಮ್ಮ ಫ್ರೇಂಡ್. ಅವನು ಹೇಗಿದನ್ನೋ,ಯಾವ ಪರಿಸ್ಥಿಯಲ್ಲಿ ಇದನ್ನೋ ಗೊತ್ತಿಲ್ಲಾ. ಆದ್ರೆ ನಮ್ಮ ಒಂದು ಪೋನ್ ಕಾಲ್ಗೆ ಪೆಟ್ರೋಲ್ ತಂದು ನಮ್ಮನು ಮನೆ ಸೇರಿಸ್ದಾ.           ಫ್ರೇಂಡ್‍ಶಿಪ್ ಬೇರೆಯವರನ್ನು ನಮ್ಮವರನ್ನಾಗಿ ಮಾಡುತ್ತೆ. ಸ್ನೇಹಕ್ಕೆ ಬಡವ-ಶ್ರೀಮಂತ,ಮೇಲು ಜಾತಿ- ಕೀಳು ಜಾತಿ,ಬುದ್ದಿವಂತ-ದಡ್ಡ,ದೊಡ್ಡವರು- ಚಿಕ್ಕವರು ಅನ್ನೋ ಬಾರ್ಡರ್ ಇರೋದಿಲ್ಲಾ. ಮಳೆಗಾಲದಲ್ಲಿ ದೋಣಿ ಬಿಡುವಾಗ ಜೊತೆಯಲ್ಲಿದ್ದವನು, ತರಗತಿಯಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದಾಗ ಜೊತೆಯಲ್ಲಿ ನಿಂತವನು, ಸೈಕಲ್‍ನಲ್ಲಿ ಡಬಲ್ ರೈಡ್ ಮಾಡಿದವನು, ಮಾವಿನ ಮರಕ್ಕೆ ಕಲ್ಲು ಹೊಡೆಯುವಾಗ ಜೊತೆಯಲ್ಲಿದ್ದವನು, ಇನ್ನೊಬ್ಬನಿಗೆ ಹೊಡೆಯುವಾಗ ಕೈ ಸೇರಿಸಿದವನು, ಹುಡುಗಿಯರಿಗೆ ಲೈನ್ ಹೊಡೆಯುವಾಗ ಸಾಥ್ ಕೊಟ್ಟವನು, ಜಾತ್ರೆಯಲ್ಲಿ ಜೊತೆಯಲ್ಲಿ ಸುತ್ತಿದವನು, ಕ್ಲಾಸಿಗೆ ಬಂಕ್ ಮಾಡುವಾಗ ಹಿಂದೆ ಬಂದವನು, ಪರೀಕ್ಷೇಯಲ್ಲಿ ದಾರಿ ತೋರದಾಗ ದಾರಿ ತೋರಿಸಿದವನು, ಹೋಮ್‍ವರ್ಕ ಕಾಫಿ ಹೊಡೆಯಲು ಕೊಟ್ಟವನು. ಪ್

ಮಂಜಿನ ಹುಡುಗಿ

Image
          ಉಡುಪಿ ಜಿಲ್ಲೆಯ, ಸೋಮೆಶ್ವರ ಮತ್ತು ಹೆಬ್ರಿ ನಡುವೆ ಬರುವ ಬಿಳ್ವೆ ಎಂಬ ಗ್ರಾಮದಲ್ಲಿ ನಮ್ಮ ಕಥಾನಾಯಕ, ಅವನ ತಂದೆ,ತಾಯಿ,ಚಿಕ್ಕಪ್ಪ,ಚಿಕ್ಕಮ್ಮ,ಮತ್ತು ಅವರ ಸಣ್ಣ ಮಗ,ಹಾಗೂ ಅವಾಗವಾಗ ಮನೆಗೆ ಬಂದು ಹೋಗುವ  ಮಾವನೊಂದಿಗೆ ವಾಸವಾಗಿರುತ್ತಾನೆ. ಹೆಬ್ರಿ ಡಿಗ್ರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿಯಾದ ಇವನಿಗೆ ಸಂಪ್ರದಾಯಸ್ತ ಕುಟುಂಬವಾದ್ದರಿಂದ ಹುಡುಗಿಯರ ವಿಷಯದಲ್ಲಿ ಸ್ವಲ್ಪ ನಿಧಾನಿ. ಕಾಲೇಜಿನಲ್ಲಿ ಗೆಳೆಯರು ಇವನಿಗೆ ಗಾಂಧಿ ಅಂತಾ ಹೀಯಾಳಿಸುತ್ತಿದ್ದರು. ಆದರೆ ಇವನಿಗೆ ತನ್ನದೇ ಆದ ಒಂದು ಕನಸಿತ್ತು. ತನ್ನ ಹುಡುಗಿ ಇದೇ ತರಹ ಇರಬೇಕು ಅನ್ನೋ ಕಲ್ಪನೆ ಇತ್ತು. ಆ ಕಲ್ಪನೆಯಲ್ಲಿ ಜೀವಿಸುತ್ತಿದ್ದ.           ಹೀಗಿರಬೇಕಾದ್ರೆ ಒಂದು ದಿನಾ ಅವನ ಬಾಳಲ್ಲಿ ಒಬ್ಬಳು ಹುಡುಗಿ ಪ್ರವೇಶ ಆಗ್ತಾಳೆ. ಅವನು ಕಾಲೇಜು ಮುಗಿಸಿಕೊಂಡು ಬರಬೇಕಾದ್ರೆ ಒಂದು ಹುಡುಗಿ ಅವನ ಮನೆ ದಾರಿಯಿಂದ ಬರೋದನ್ನು ನೋಡ್ತಾನೆ. ಅವಳು, ಅವನ ಕನಸಿನ ಹುಡುಗಿ ತರಾನೆ ಇರ್ತಾಳೆ. ಮರುದಿನಾ ಮತೇ  ಅದೇ ಜಾಗದಲ್ಲಿ ಅವಳನ್ನು ನೋಡ್ತಾನೆ. ಹೀಗೆ ಒಂದುವಾರ ನಡೆಯುತ್ತೆ. ಒಂದು ಭಾನುವಾರ ಕಾದು ಕೂತು ನೋಡಿದಾಗ ಅವಳು ಅವನ ಪಕ್ಕದ ಮನೆಯಿಂದ ಹೊರಗೆ ಬಂದು ಗದ್ದೆ ಅಂಚಿನಲ್ಲಿ ಹೋಗೊದನ್ನು ನೋಡ್ತಾನೆ. ಅವಳನ್ನು ಹಿಂಬಾಲಿಸಿಕೊಂಡು ಹೋದಾಗ ಅವಳು ಸಂಗೀತ ಮೇಷ್ಟ್ರ ಮನೆಗೆ ಸಂಗೀತ ಕಲಿಯಲಿಕ್ಕೆ ಹೋಗ್ತಾ ಇರ್ತಾಳೆ. ದಿನಾ ಇವನು ಅವಳಿಗೆ ಎದುರಾದಾಗ ಅವಳು ನೋಡೊ ನೋಟ ಇ

ಯಾವ ಮೋಹನ ಮುರಳಿ ಕರೆಯಿತೋ...

Image
          ಭವ್ಯ ಭಾರತದ,ಕರ್ನಾಟಕ ರಾಜ್ಯದ,ಮಲೆನಾಡ ತಪ್ಪಲಿನಲ್ಲಿ "ಬೆಳಗನೂರು" ಎಂಬ ಒಂದು ಊರು. ಹೆಸರಿನಲ್ಲಿ ಬೆಳಕಿದ್ರೂ ಈ ಊರಿನಲ್ಲಿ ವಿದ್ಯುತ್ ಸಂಪರ್ಕ ಇನ್ನೂ ಕಾಲಿಡಲಿಲ್ಲ. ಇಂತಹ ಗ್ರಾಮದಲ್ಲಿ ಸಂಪತ್ ಎನ್ನುವ ಹುಡುಗ ತನ್ನ ಕುಟುಂಬದೊಂದಿಗೆ ವಾಸವಾಗಿರುತ್ತಾನೆ. ಪಿಯುಸಿ ತನಕ ಊರಿನಲ್ಲೇ ಕಲಿತು, ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ದೂರದ ಬೆಂಗಳೂರಿಗೆ ತೆರಳುತ್ತಾನೆ. ಬೆಂಗಳೂರಿನಲ್ಲಿ ಆಧುನಿಕ ಜೀವನದ ಪರಿಚಯವಾಗುತ್ತದೆ. ತುಂಬಾ ಮುಂದುವರಿದ ಆ ಜೀವನ ಶೈಲಿಯ ಮುಂದೆ ವಿದ್ಯುತ್,ದೂರದರ್ಶನ,ಕಂಪ್ಯೂಟರ್,ಮೊಬೈಲ್,ಇಂಟರ್ನೆಟ್,ವಾಹನ ವ್ಯವಸ್ಥೆ ಇಲ್ಲದ ಅವನ ಊರು ಬೇಡವೆನಿಸುತ್ತದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸದ ನಂತರ ವಿದೇಶಿ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು.  ಮನೆಯವರ ವಿರೋಧದ ನಡುವೆಯೂ ವಿದೇಶಿ ವಿಮಾನವೇರುತ್ತಾನೆ.           ಸಕಲ ಸಂಪದ್ಬರಿತವಾದ ಆ ದೇಶ ಮೊದಮೊದಲಿಗೆ ಮೃಷ್ಟಾನ್ನ ಭೋಜನವನ್ನು ಉಣ ಬಡಿಸುತ್ತೆ. ಅವರು ನೀಡುವ ಡೋಲರ್ ರೂಪದ ಸಂಬಳ, ಇಲ್ಲಿನ ಸಂಬಳಕ್ಕಿಂತ ಮಿಗಿಲೆನಿಸುತ್ತೆ. ಹೀಗೇ ಐದು ವರ್ಷಗಳು ಉರುಳುತ್ತೆ. ಅಲ್ಲಿನ ಗ್ರೀನ್‍ಕಾರ್ಡ ಅವನಿಗೆ ದೊರೆಯುತ್ತೆ. ಅಲ್ಲೇ ತನ್ನ ಜೀವನವನ್ನು ಮುಂದುವರಿಸಲಿಕ್ಕೆ ನಿರ್ಧಾರ ಮಾಡ್ತಾನೆ.          ಹೀಗೇ ದಿನ ಕಳಿತ್ತಿರಬೇಕಾದ್ರೆ ಒಂದು ದಿನಾ ಫೇಸ್‍ಬುಕ್‍ನಲ್ಲಿ ಅವನ ಗೆಳೆಯ ಹಾಕಿದ ಪೋಟೋಗಳನ್ನು ನೋಡ್ತಾನೆ. ಅದರಲ್ಲಿ ಅವನ ಊರಿಗೆ ವಿದ್ಯುತ್ ಬಂದಿರ

ಸಾಮಾಜಿಕ ಜೀವನದ ಪಾಸ್‍ವರ್ಡ ಮರೆತ ಯುವಜನತೆ...!!!

Image
          ತಂತ್ರಜ್ಞಾನದ ಅಭಿವೃದ್ಧಿ ಅನ್ನುವುದು ಒಂದು ನೋಟದಲ್ಲಿ ಒಳ್ಳೆಯದಾದರೆ. ಇನ್ನೊಂದು ನೋಟದಲ್ಲಿ ಮಾರಕ. ಕೆಲವು ವೇಗವಾಗಿ ಹಾಗೂ ದೊಡ್ಡದಾಗಿ ಬೆಳೆದಿರುವ ತಂತ್ರಜ್ಞಾನಗಳಲ್ಲಿ ಮೊಬೈಲ್ ತಂತ್ರಜ್ಞಾನ ಸಹ ಒಂದು. ಮೊಬೈಲ್ ಪೋನ್ ಪ್ರಪಂಚದಲ್ಲಿ ಅಂಡ್ರಾಯ್ಡ್ ಟಚ್‍ಸ್ಕ್ರೀನ್ ಮೊಬೈಲ್‍ಗಳ ಆಗಮನ ಇತ್ತಿಚೆಗೆ ಆಗಿದ್ದಾದರೂ, ಅದು ಚಾಚಿರುವ ನಾಲಗೆ ತುಂಬಾ ವಿಸ್ತಾರವಾದದ್ದು. ಪ್ರಾಥಮಿಕ ಶಾಲೆಗೆ ಹೊಗೋ ಮಕ್ಕಳಿಂದ ಹಿಡಿದು ಕೋಲು ಹಿಡಿದುಕೊಂಡು ನಡೆಯೋ ಮುದಕರು ತನಕ ಎಲ್ಲರನ್ನು ತಲೆಕೆಡಿಸಿರೋ ಪ್ರಸಿದ್ಧ ಸೊಷಿಯಲ್ ನೆಟವರ್ಕಿಂಗ್ ಸೈಟ್‍ಗಳಲ್ಲಿ ಫೇಸ್ಬುಕ್,ವಾಟ್ಸಆಫ್,ಸ್ಕೈಪ್,ಹೈಕ್ ಮುಂತಾದವುಗಳು ಪ್ರಸಿದ್ದವಾದವು. ಒಬ್ಬ ಮನುಷ್ಯ ಬೆಳಗ್ಗೆ ಏಳುವುದಕ್ಕಿಂತ ಮುಂಚೆ ಮತ್ತು ರಾತ್ರಿ ಮಲಗಿ ಆದ ಮೇಲೂ ಎಚ್ಚರದಿಂದ ಇರುತ್ತಾನೆ ಎಂದರೆ ಅವನು ಗ್ಯಾರೆಂಟಿ ಇವುಗಳಲ್ಲಿ ಯಾವುದಾದರೊಂದು ಸೈಟ್‍ಗಳ ಸದಸ್ಯನಾಗಿರುತ್ತಾನೆ ಅಂತ ಅರ್ಥ. ಪಕ್ಕದ ಮನೆಯಲ್ಲಿ ಗಲಾಟೆ ಆಗ್ತಾ ಇದ್ರೆ,ನಮ್ಮ ಮನೆಯಲ್ಲೂ ಇಂಥಹದ್ದೊಂದು ನಡೆಯಬಹುದು ಅಂಥಾ ವಿಚಾರ ಮಾಡುವ ಬದಲು, ಅದನ್ನು ಧಾರಾವಾಹಿ ತರಹ ನೋಡೋ ನಮ್ಮ ಜನರಿಗೆ ಹೇಳಿ ಮಾಡಿಸಿದ್ದು ಈ ಸೈಟ್‍ಗಳು. ಗೊತ್ತಿರುವ ಫ್ರೇಂಡ್ ದಿನಾ ಮೆಸೇಜ್ ಮಾಡ್ತಾ ಇದ್ರೂ ಒಂದು ಮೆಸೇಜ್ಗೂ ರೀಪ್ಲೆ ಕೊಡೊದಿಲ್ಲಾ ಆದ್ರೆ ಗೋತ್ತಿಲ್ಲದೇ ಇರೋ ನಂಬರಿಂದ ಒಂದು ಮೆಸೇಜ್ ಬಂದ್ರೆ ಸಾಕು,ಯಾರು ನೀವೂ? ಯಾವ ಊರು? ನನ್ನ ಪರಿಚಯ ಉಂಟಾ? ಅಂತಾ ನೂರಾರು ಮೆಸ

ಆನ್‍ಲೈನ್ ಲವ್ ಸ್ಟೋರಿಯಲ್ಲೊಂದು ಸೈಲೆಂಟ್ ಬ್ರೇಕಪ್......!!!

Image
          ಸಾಮಾಜಿಕ ಜಾಲತಾಣಗಳು ಆರಂಭವಾದ ಮೇಲೆ ಪ್ರೀತಿ ಮಾಡುವವರ ದಾರಿ ಸುಗಮವಾದಂತಾಗಿದೆ. ಮಾತಿಲ್ಲದೆ,ಕತೆ ಇಲ್ಲದೆ,ಕಣ್ಣಿನಲ್ಲಿ ನೋಡದೇ,ಕೈ ಬೆರಳ ತುದಿಯಲ್ಲಿ ಪ್ರೇಮಾಂಕುರವಾಗುತ್ತೆ. ಕೇವಲ ಪೋಟೋ ನೋಡಿ ಅದೆಷ್ಟೋ ಜನ ತಮ್ಮ ಪ್ರೀತಿಯನ್ನು ಇನ್ನೊಬ್ಬರಿಗೆ ಧಾರೆ ಎರೆಯುತ್ತಾರೆ. ಕೆಲವರು ಟೈಮ್‍ಪಾಸ್‍ಗಾಗಿ ಮಾಡಿದರೇ. ಇನ್ನೂ ಕೆಲವರು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಅವಾಂತರಗಳು ಆಗಿದ್ದೂ ಇದೆ.           ನಾನು ಹೇಳಲಿಕ್ಕೆ ಹೊರಟ ಕತೆಯಲ್ಲೂ ಹೀಗೆ, ತಾನು ಮದುವೆ ಆಗೋ ಹುಡುಗಿ ಹೀಗೇ ಇರಬೇಕು ಅಂತಾ ಕನಸು ಕಾಣ್ತಾ ಇರೋ ಹುಡುಗ ಆಕಾಶ್.  ಹುಡುಗ ಹೇಗಿದ್ರೂ ಪರವಾಗಿಲ್ಲ ಹೊಂದಿಕೊಂಡು ಹೋಗ್ತಿನಿ ಅಂತಾ ಹೇಳೋ ಹುಡುಗಿ ಭೂಮಿಕಾ. ಈ ಆಕಾಶ ಭೂಮಿ ಪರಿಚಯ ಆಗಲಿಕ್ಕೆ ಸಹಾಯ ಮಾಡಿದ್ದು ಫೇಸ್ಬುಕ್ ಅನ್ನೋ ಗಾಳಿ ಮಾಧ್ಯಮ. ತನ್ನ ಕನಸಿನ ಕನ್ಯೆಯ ಬೇಟೆಯಲ್ಲಿದ್ದ ನಮ್ಮ ಹುಡುಗ ಫೇಸ್ಬುಕ್‍ನಲ್ಲಿ ಅವಳಿಗಾಗಿ ಬಾಣ ಬೀಸಿದ್ದ. ಹೀಗೆ ಒಂದು ದಿನಾ ಭೂಮಿಕಾಳಿಗೂ ಫ್ರೇಂಡ್ ರಿಕ್ವೆಸ್ಟ್ ಕಳಿಸಿಯೇ ಬಿಟ್ಟ. ಭೂಮಿಕ ಸಹ ಯಾರು ಲವರ್ ಇಲ್ಲದೇ ಪ್ರೀತಿಯಲ್ಲಿ ಬೀಳಲಿಕ್ಕೆ ತುದಿಗಾಲಿನಲ್ಲಿ ನಿಂತಿದ್ಲು. ಆಕಾಶ್ ಪೋಟೋ ನೋಡಿ ಇವಳಿಗೆ ಪ್ರಥಮ ನೋಟದಲ್ಲೆ ಪ್ರೇಮಾಂಕುರವಾಯಿತು. ತಡಮಾಡದೇ ಪ್ರೀತಿಯ ಮೊದಲ ಮೆಟ್ಟಿಲಾದ ಸ್ನೇಹವನ್ನು ಆಕಾಶನಿಗೆ ಧಾರೆ ಎರೆದುಬಿಟ್ಟಳು. ನಮ್ಮ ಹುಡುಗನಿಗೆ ಎಲ್ಲಿಲದ ಸಂತೋಷ. ಆದ್ರೆ ಹುಡುಗಿ ಪೋಟೋ ಹಾಕಲಿಲ್ವಲ್ಲಾ ಹೇಗಿದಾಳೋ ಏನೋ

ಮುಸ್ಸಂಜೆಯಲ್ಲಿ ಮೊಹಬ್ಬತ್ 2 (ಮಂಜಿನೂರಿನಲ್ಲೊಂದು ಲವ್ ಸ್ಟೋರಿ)

Image
          ಶೆಟ್ರ ಅಂಗಡಿಯಲ್ಲಿ ಇನ್ನೂ ಯಾವುದಾದರೂ ಹುಡುಗಿ ಬೆಂಕಿಪಟ್ಟಣ ಬಿಟ್ಟು ಹೋಗ್ತಾಳಾ ಅಂತಾ ಕಾದು ಕಾದು ಸಾಕಾಯ್ತು. ಪಟ್ಟಣದ ಜಂಜಡಗಳಿಂದ ರೋಸಿ ಹೋಗಿದ್ದ ಮನಸ್ಸಿಗೆ ಸ್ವಲ್ಪ ಮುದ ಕೊಡೋಣ ಅಂತ ಹೊಗಿದ್ದೇ ನನ್ನ ತಾತನ ಊರು, ಮಲೆನಾಡಿನ ಹೆಬ್ಬಾಗಿಲು ಅಂತ ಪ್ರಸಿದ್ಧವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ಸದಾ ಮಂಜು ಮುಸುಕಿರುವ ದಾರಿ, ಒಂಟಿ ಮನೆ,ಎಲ್ಲಿ ನೋಡಿದರೂ ಹಸಿರು,ಹೊರಗೆ ಹೋಗಲಾರದಷ್ಟು ಸುರಿವ ಜಡಿ ಮಳೆ,ಮೈ ಕೊರೆವ ಚಳಿ,ಮಲೆನಾಡ ಊಟ ಇವೆಲ್ಲವುಗಳನ್ನು ಸವಿಯುತ್ತಾ ಮನಸ್ಸು ಮಳೆ ಬಂದು ನಿಂತಿರುವ ಹೊಳೆ ತರಹ ಪ್ರಶಾಂತವಾಗಿತ್ತು. ಮನೆಗೆ ಬಂದು ಒಂದುವಾರ ಆದರೂ ಮನೆಬಿಟ್ಟು ಹೊರಗೇ ಹೋಗಿರಲಿಲ್ಲ. ಅಜ್ಜಿ ಮಾಡಿಕೊಟ್ಟ ತಿಂಡಿಗಳನ್ನು ತಿನ್ನುತ್ತಾ,ಒಲೆ ಮುಂದೆ ಚಳಿ ಕಾಯಿಸಿಕೊಂಡು,ಮಾವಿನ ಹಣ್ಣು,ಹಲಸಿನ ಹಣ್ಣು ಸವಿಯುತ್ತಾ ಅಲ್ಲೇ ಇದ್ದು ಬಿಟ್ಟಿದ್ದೆ.           ಆದ್ರೆ ಅವತ್ತ್ಯಾಕೋ ಮನಸ್ಸಿಗೆ ಬೇಜಾನ್ ಬೇಜಾರ್ ಹೊಡಿತ್ತಿತ್ತು. ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಅಂತಾ,ಮುಸ್ಸಂಜೆಯಲ್ಲಿ ಅಜ್ಜನ ಕೊಡೆ ಹಿಡಿದುಕೊಂಡು ಆ ಮಳೆಯಲ್ಲೇ ನೆಡೆದುಕೊಂಡು ಹೋದೆ. ಏನಾದರೂ ಕೆಲಸ ಮಾಡೋ ಮೊದಲು ದೇವರಿಗೆ ನಮಸ್ಕಾರ ಮಾಡಬೇಕಂತೆ. ಅದಕ್ಕೆ ದೇವರನ್ನು ಸ್ವಲ್ಪ ಮಾತನಾಡಿಸೋಣ ಅಂತಾ ಆ ಊರಿನ ದೇವಾಲಯಕ್ಕೆ ನಡೆದೇ ಬಿಟ್ಟೆ. ಆದ್ರೆ ದೇವರನ್ನು ನೋಡಲಿಕ್ಕೆ ಹೋದ ನನಗೆ ದೇವಸ್ಥಾನದಲ್ಲಿ ದೇವತೆ ದರ್ಶನ ಆಗಿತ್ತು. ಹುಡುಕಿ ಎಣಿಸಿದರೂ ನೂರು ಜನ ಸಿಕ್ಕದ

ಮುಸ್ಸಂಜೆಯಲ್ಲಿ ಮೊಹಬ್ಬತ್

Image
          ಪ್ರೀತಿ ಬೇಕಾದಾಗ ಬರೋದಿಲ್ಲಾ, ಬೇಡ ಅಂದಾಗ ಹೊಗೋದಿಲ್ಲಾ. ಅದು ಒಂತರಾ ಮಳೆ ತರಹ, ಆ ಮಳೆಯಲ್ಲಿ ನೆನದಷ್ಟು ಸುಖ ಜಾಸ್ತಿ. ದಿನಾ ಸಂಜೆ ವಾಕಿಂಗ್ ಹೋಗಿ,ಬರುವಾಗ ಹಾಲು ತರೋದು ನನ್ನ ನಿತ್ಯದ ದಿನಚರಿಗಳಲ್ಲಿ ಒಂದು. ತಂಪಾದ ಗಾಳಿ, ಮುಳುಗೋ ಸೂರ್ಯನ ಮಂದ ಬೆಳಕು, ಸಾಲಾಗಿ ಹಾರುತ್ತಾ ಗೂಡು ಸೇರೋ ಹಕ್ಕಿಗಳು ಇವುಗಳನ್ನು ಸವಿಯುತ್ತಾ. ಫ್ರೇಂಡ್ಸ್ ಯಾರಾದ್ರೂ ಸಿಕ್ಕಿದ್ರೆ ಒಂದೆರಡು ಮಾತಾಡಿಕೊಂಡು ಮನೆ ಸೇರಿದ್ರೆ. ಏನೋ ಒಂದು ರಿಫ್ರೇಶ್ ಆದ ಅನುಭವ.           ಹೀಗೆ ನಡಿತಾ ಇರಬೇಕಾದ್ರೆ ಒಂದು ದಿನಾ ಒಂದು ವಿಸ್ಮಯ ನಡಿತು. ಸುಮ್ಮನೆ ಟೈಮ್‍ಪಾಸ್‍ಗಾಗಿ ಮಾಡೋ ಲವ್‍ನಲ್ಲಿ ಆಸಕ್ತಿ ಇಲ್ಲದ ನನಗೆ. ನನ್ನ ಲವ್‍ಸ್ಟೋರಿ ಇದೇ ತರಹ ಇರಬೇಕು. ನನ್ನ ಹುಡುಗಿ ಹೀಗೆ ಇರಬೇಕು ಅನೋ ಕಲ್ಪನೆ ಇತ್ತು. ಹೀಗೆ ವಾಕಿಂಗ್ ಹೋಗ್ತಾ ಇರಬೇಕಾದ್ರೆ ಒಂದು ಮನೆ ಮಹಡಿ ಮೇಲೆ ಒಂದು ಹುಡುಗಿಯನ್ನು ನೋಡದೆ ನನ್ನ ಕಲ್ಪನೆಯಲ್ಲಿ ಹುಡುಗಿ ಹೇಗಿರಬೇಕಂತಾ ಇತೋ ಅದೇ ತರಹ ಅವಳಿದ್ಲು. ಅವಳು ಅದೇನ್ನನೋ ಓದುತ್ತಾ ಆ ಕಡೆಯಿಂದ ಈ ಕಡೆ ಓಡಾಡ್ತ ಇದ್ಲು. ನನ್ನ ಕಡೆ ಕುಡಿನೋಟವನ್ನು ಬೀರಿ,ಮುಂಗುರುಳನ್ನು ಸರಿಸಿದ್ಲು,ಅಷ್ಟು ಸಾಕಾಗಿತ್ತು, ಹಾರ್ಟ ಹೊಂಡ ತೋಡಿ ಕಾಯ್ತಾ ಇತ್ತು, ಅವಳು ಬಂದು ದೂಕಿದ್ಲು ಅಷ್ಟೇ. ಅವತ್ತು ರಾತ್ರಿ ಮಲಗಿದಾಗ ನಿದ್ದೇ ಬರೋತನಕ ಅವಳದ್ದೇ ಧ್ಯಾನ. "ಅಲ್ಲಾ ದಿನಾ ಅದೇ ದಾರಿಯಾಗಿ ಹೋಗ್ತಿದ್ದೆ ಎಲ್ಲಿದ್ಲು ಇಷ್ಟು ದಿನಾ ಆ ಚೆಲುವೆ ' ಅ

ಲವ್ ಎಟ್ ಫಸ್ಟ್ ಸೈಟ್ ಅನ್ನೋ ಅಟ್ರಾಕ್ಷನ್...!!!

Image
          ಪ್ರೀತಿ ಎಂದರೆ ಹಾಗೇ ಅದು ಹುಟ್ಟೋದು ಗೊತ್ತಾಗುವುದಿಲ್ಲ,ಕೊನೆ ಆಗೋದು ಗೊತ್ತಾಗುವುದಿಲ್ಲ. ಈ ಪ್ರೀತಿ ಯಾರ ಮೇಲೆ,ಹೇಗೆ,ಯಾವಾಗ ಹುಟ್ಟುತ್ತೇ ಅಂತಾ ಯಾರಿಗೂ ಹೇಳಲಿಕ್ಕೆ ಆಗುದಿಲ್ಲಾ. ಅವರವರ ದೃಷ್ಟಿಕೋನದಲ್ಲಿ ಪ್ರೀತಿಯನ್ನು ಬೇರೇ ಬೇರೇ ತರಹ ನೋಡ್ತಾರೆ. ಕೆಲವರು ಮನಸ್ಸು ನೋಡಿ ಲವ್ ಮಾಡಿದರೆ,ಇನ್ನೂ ಕೆಲವರು ಮುಖ ನೋಡಿ ಲವ್ ಮಾಡ್ತಾರೆ, ಕೆಲವರು ಗುಣ ನೋಡಿ ಲವ್ ಮಾಡಿದರೇ, ಪೊಕೆಟ್ ಅಥವಾ  ಅಪ್ಪನ ಆಸ್ತಿ ನೋಡಿ ಲವ್ ಮಾಡೋದು ಒಂದು ಕಡೆಯಿಂದ ನಡಿತಾ ಇದೆ. ಸುಮ್ಮನೆ ನಡೆದುಕೊಂಡು ಹೋಗ್ತಾ ಇರ್ತೀವಿ ಒಂದು ಹುಡುಗಿ/ಹುಡುಗ ನನ್ನು ನೋಡ್ತಿವಿ ತುಂಬಾ ಇಷ್ಟ ಆಗ್ತಾರೆ ಲವ್ ಆಗುತ್ತೆ. ಅಥವಾ ಯಾರಾದರು ಒಬ್ಬರು ನಮಗೆ ಹೆಲ್ಪ ಮಾಡ್ತಾರೆ ಅಥವಾ ಅವರು ಮಾಡುವ ಕೆಲಸ ನಮಗಿಷ್ಟ ಆಗುತ್ತೆ ಲವ್ ಆಗುತ್ತೆ. ಉದಾಹರಣೆಗೆ ಯಾರಾದರೂ ಒಳ್ಳೇ ಡ್ಯಾನ್ಸ ಮಾಡಿದಾಗ, ಹಾಡು ಹಾಡಿದಾಗ ಇತ್ಯಾದಿ.            ಲವ್‍ನಲ್ಲಿ ಅನೇಕ ವಿಧಗಳಿವೆ,ಲವ್ ಎಟ್ ಫಸ್ಟ್ ಸೈಟ್,ನೋಡದೇ ಲವ್ ಮಾಡೋದು,ಒನ್ ವೇ ಲವ್ ಹೀಗೆ ಅನೇಕ. ಅದರಲ್ಲಿ ಇತ್ತೀಚೆಗೆ ತುಂಬಾ ಕೇಳಿ ಬರ್ತಾ ಇರೋದು ಲವ್ ಎಟ್ ಫಸ್ಟ್ ಸೈಟ್. ಅಂದರೆ ಒಂದು ಹುಡುಗಿ/ಹುಡುಗ ನ ಮೊದಲ ನೋಟದಲ್ಲೇ ಲವ್ ಆಗೋದು. ನನ್ನ ಪ್ರಕಾರ ಈ ಲವ್ ಎಟ್ ಫಸ್ಟ್ ಸೈಟ್‍ಗೂ,ಅಟ್ರಾಕ್ಷನಗೂ ಏನೂ ವ್ಯತ್ಯಾಸ ಇಲ್ಲ. ಒಂದು ಹುಡುಗ/ಹುಡುಗಿ ಯನ್ನು ನೋಡಿ ಅವಳು/ಅವನ ನ್ನು ಎಣಿಸಿಕೊಂಡು ಕನಸುಕಂಡು. ಓನ್ ಫೈನ್ ಢೇ ಫಿಲ್ಮಿಸ್ಟೈಲ್ ನಲ್ಲ

ಯಶಸ್ವೀ ಪ್ರೇಮ ಕಥೆಗಳೇಕೆ ವಿರಳ.....!!?

Image
          ಪ್ರೀತಿ ಎಂದರೆ ಹಾಗೇ ಬರಡಾದ ಮನಸ್ಸಿಗೆ ನೀರಿನ ಸಿಂಚನ ಕೋಟಿ ಕೋಟಿ ಜನರ ನಡುವೆ ಒಂದು ಸಂಬಂಧವನ್ನು ಬೆಸೆದಿದ್ದು ಈ ಪ್ರೀತಿ ಎಂಬ ಎರಡಕ್ಷರದ ಪದ. ಪ್ರೀತಿಯಲ್ಲಿ ನಾನಾ ವಿಧಗಳಿವೆ ತಂದೆ ತಾಯಿ ಮತ್ತು ಮಕ್ಕಳ ನಡುವಿನ ಪ್ರೀತಿ ಹುಡುಗ, ಹುಡುಗಿಯ ನಡುವಿನ ಪ್ರೀತಿ, ಪ್ರಾಣಿಗಳ ಮತ್ತು ಮನುಷ್ಯರ ನಡುವಿನ ಪ್ರೀತಿ ಹೀಗೆ ಅನೇಕ ಆದರೂ ಈ ಲೋಕಕ್ಕೆ ಪ್ರೀತಿ ಎಂದಾಕ್ಷಣ ನೆನಪಾಗುವುದು ಹುಡುಗ ಹುಡುಗಿ ನಡುವೆ ಬರುವ ಪ್ರೀತಿ. ಇಂತಹ ಪ್ರೇಮಕಥೆಗಳು ಕಾಲೇಜು ಲೈಫ್‍ನಲ್ಲಿ ತುಂಬಾ ಸಿಗುತ್ತದೆ. ನಾನು ಕಲಿತಿದ್ದು ಇಂಜಿನಿಯರಿಂಗ್ ಕಾಲೇಜಿನಲ್ಲಿ “ನೋಡು ಮಗ ಅವಳು ನನಗೆ ಲೈನ್  ಕೊಡ್ತ ಇದ್ದಾಳೆ” .”ಎನೋ ಗೊತ್ತಿಲ್ಲ ಮಚ್ಚಾ ಅವಳ ಜೋತೆ ದಿನಕ್ಕೊಂದು ಸರಿ ಮಾತಾಡದಿದ್ದರೇ ಆಗೋದೆ ಇಲ್ಲಾ”. “ನನ್ನ ಹಕ್ಕಿಗೆ ಬೇರೆಯವನು ಕಾಳ್ ಹಾಕ್ತಾ ಇದ್ದಾನೆ ಮಚ್ಚಾ”. ಇಂತಹ ಮಾತುಗಳನ್ನು ನನ್ನ ಪ್ರೇಂಡ್ಸ್ ಆಡೋದು ಕೇಳಿದ್ದೇನೆ.           ಈಗಿನ ಕಾಲದಲ್ಲಿ ಕಾಲೇಜಿಗೆ ಸೇರಿ ರ್ಯಾಂಕ್ ಬರದಿದ್ದರೂ ಪರವಾಗಿಲ್ಲ ಆದ್ರೆ ಲವ್ ಮಾಡೋದು ಕಡ್ಡಾಯವಾದ ಹಾಗೆ ಆಗಿಬಿಟ್ಟಿದೆ. ಪ್ರೀತಿಗೆ ತನ್ನದೇ ಆದ ಒಂದು ಸುಂದರವಾದ ಅರ್ಥ ಇದೆ. ಆದರೆ ಈಗಿನ ಪ್ರೇಮಿಗಳನ್ನು ನೋಡಿದ್ರೆ ಯಾರಿಗೂ ಇದರರ್ಥ ತಿಳಿದಿರೋ ಹಾಗೆ ಕಾಣ್ತಾ ಇಲ್ಲಾ. ಒಂದು ಮಾತು ತಿಳಿದುಕೊಳ್ಳಿ ಗೆಳೆಯರೇ ಪ್ರೀತಿ ಮಾಡೋದಲ್ಲ ಪ್ರೀತಿ ಆಗೋದು. ಮೆಟ್ರೋ ಅಷ್ಟೇ ಫಾಸ್ಟ್  ಆಗಿರೋ ಈ ಸಾಫ್ಟ್ವೇರ್  ಯುಗದಲ್ಲಿ, ಮುಂಗಾ