ಮಂಜಿನ ಹುಡುಗಿ


          ಉಡುಪಿ ಜಿಲ್ಲೆಯ, ಸೋಮೆಶ್ವರ ಮತ್ತು ಹೆಬ್ರಿ ನಡುವೆ ಬರುವ ಬಿಳ್ವೆ ಎಂಬ ಗ್ರಾಮದಲ್ಲಿ ನಮ್ಮ ಕಥಾನಾಯಕ, ಅವನ ತಂದೆ,ತಾಯಿ,ಚಿಕ್ಕಪ್ಪ,ಚಿಕ್ಕಮ್ಮ,ಮತ್ತು ಅವರ ಸಣ್ಣ ಮಗ,ಹಾಗೂ ಅವಾಗವಾಗ ಮನೆಗೆ ಬಂದು ಹೋಗುವ  ಮಾವನೊಂದಿಗೆ ವಾಸವಾಗಿರುತ್ತಾನೆ. ಹೆಬ್ರಿ ಡಿಗ್ರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿಯಾದ ಇವನಿಗೆ ಸಂಪ್ರದಾಯಸ್ತ ಕುಟುಂಬವಾದ್ದರಿಂದ ಹುಡುಗಿಯರ ವಿಷಯದಲ್ಲಿ ಸ್ವಲ್ಪ ನಿಧಾನಿ. ಕಾಲೇಜಿನಲ್ಲಿ ಗೆಳೆಯರು ಇವನಿಗೆ ಗಾಂಧಿ ಅಂತಾ ಹೀಯಾಳಿಸುತ್ತಿದ್ದರು. ಆದರೆ ಇವನಿಗೆ ತನ್ನದೇ ಆದ ಒಂದು ಕನಸಿತ್ತು. ತನ್ನ ಹುಡುಗಿ ಇದೇ ತರಹ ಇರಬೇಕು ಅನ್ನೋ ಕಲ್ಪನೆ ಇತ್ತು. ಆ ಕಲ್ಪನೆಯಲ್ಲಿ ಜೀವಿಸುತ್ತಿದ್ದ.

          ಹೀಗಿರಬೇಕಾದ್ರೆ ಒಂದು ದಿನಾ ಅವನ ಬಾಳಲ್ಲಿ ಒಬ್ಬಳು ಹುಡುಗಿ ಪ್ರವೇಶ ಆಗ್ತಾಳೆ. ಅವನು ಕಾಲೇಜು ಮುಗಿಸಿಕೊಂಡು ಬರಬೇಕಾದ್ರೆ ಒಂದು ಹುಡುಗಿ ಅವನ ಮನೆ ದಾರಿಯಿಂದ ಬರೋದನ್ನು ನೋಡ್ತಾನೆ. ಅವಳು, ಅವನ ಕನಸಿನ ಹುಡುಗಿ ತರಾನೆ ಇರ್ತಾಳೆ. ಮರುದಿನಾ ಮತೇ  ಅದೇ ಜಾಗದಲ್ಲಿ ಅವಳನ್ನು ನೋಡ್ತಾನೆ. ಹೀಗೆ ಒಂದುವಾರ ನಡೆಯುತ್ತೆ. ಒಂದು ಭಾನುವಾರ ಕಾದು ಕೂತು ನೋಡಿದಾಗ ಅವಳು ಅವನ ಪಕ್ಕದ ಮನೆಯಿಂದ ಹೊರಗೆ ಬಂದು ಗದ್ದೆ ಅಂಚಿನಲ್ಲಿ ಹೋಗೊದನ್ನು ನೋಡ್ತಾನೆ. ಅವಳನ್ನು ಹಿಂಬಾಲಿಸಿಕೊಂಡು ಹೋದಾಗ ಅವಳು ಸಂಗೀತ ಮೇಷ್ಟ್ರ ಮನೆಗೆ ಸಂಗೀತ ಕಲಿಯಲಿಕ್ಕೆ ಹೋಗ್ತಾ ಇರ್ತಾಳೆ. ದಿನಾ ಇವನು ಅವಳಿಗೆ ಎದುರಾದಾಗ ಅವಳು ನೋಡೊ ನೋಟ ಇವನನ್ನು ಅವಳ ಹಿಂಬಾಲಕನನ್ನಾಗಿ ಮಾಡಿ ಬಿಡುತ್ತೆ.  ದೀಪೊತ್ಸವದ ದಿನಾ ಅವಳ ಸಂಗೀತ ಕಾರ್ಯಕ್ರಮ ದೇವಸ್ಥಾನದಲ್ಲಿ ನಡಿತಿದ್ದಾಗ, ಅವಳ ಧ್ವನಿಗೆ ಇವನು ಮಾರು ಹೋಗ್ತಾನೆ. ಅವಳ ಮನೆಯಲ್ಲಿ ಸತ್ಯನಾರಾಯಣ ಕಥೆ ಕಾರ್ಯಕ್ರಮ ಇದ್ದಾಗ ಅವಳು ಅವಳ ಅಜ್ಜನ ಜೊತೆ ಇವರ ಮನೆಗೆ ಆಮಂತ್ರಿಸಲು ಬಂದಾಗ ಇವನು ಅವಳ ಎದುರು ಪೋಸ್ ಕೊಡಲಿಕ್ಕೆ ಹೋಗಿ ಇವನ ಮಾವನಿಂದ ಮುಖಭಂಗ ಆಗುತ್ತೆ. ಹೆಬ್ರಿಯಿಂದ ಸೋಮೆಶ್ವರಕ್ಕೆ ಬರುವ ಬಸ್ಸಿನಲ್ಲಿ ಅವಳಿದ್ದಾಗ ಅವಳ ಮುಂದೆ ಹೀರೋ ಆಗಲಿಕ್ಕೆ  ಪುಟ್ ಬೋರ್ಡನಲ್ಲಿ ನಿಂತುಕೊಂಡು, ಪೋಲಿಸ್ ಹತ್ರಾ ಬೈಯಿಸಿಕೊಳ್ಳುತ್ತಾನೆ. ಇವನು ಅವಳನ್ನು ಎಷ್ಟು ಇಂಪ್ರೇಸ್ ಮಾಡಲಿಕ್ಕೆ ಹೋದ್ರು ಫೈಲ್ ಆಗ್ತಾ ಇರ್ತಾನೆ.

          ಹೀಗಿರಬೇಕಾದ್ರೆ ಒಂದು ದಿನಾ ಇವನು ಕಾಲೇಜು ಮುಗಿಸಿಕೊಂಡು ಬರಬೇಕಾದ್ರೆ ಅವಳ ಸೈಕಲ್ ಚೈನ್ ಬಿಚ್ಚಿಕೊಂಡಿರುತ್ತೆ. ಅದನ್ನು ಹಾಕಿಕೊಟ್ಟು ಅವಳಿಗೆ ಹತ್ರಾ ಆಗ್ತಾನೆ. ಅವಳ ಬಗ್ಗೆ ಕೇಳಿದಾಗ ಅವಳು "ನಾನು ನಿಮ್ಮ ಪಕ್ಕದ ಮನೆ ರಾಮಕೃಷ್ಣ ಹೆಗ್ಗಡೆ ಯವರ ಏಕಮಾತ್ರ ಪುತ್ರಿ ಪವಿತ್ರ ಅನ್ನುವವರ ಮಗಳು. ಅವಳು 22 ವರ್ಷದ ಹಿಂದೆ ಬೇರೆ ಜಾತಿಯವನ ಜೊತೆ ಮನೆಬಿಟ್ಟು ಹೋಗಿರುತ್ತಾಳೆ". ಇವಳು, ಇವಳ ಅಜ್ಜನನ್ನು ನೋಡಬೇಕೆಂಬ ಆಸೆಯಿಂದ ಅಜ್ಜನ ಇನ್ನೊಂದು ಮೊಮ್ಮಗಳನ್ನು  ಗುರುತು ಮಾಡಿಕೊಂಡು, ಅವಳ ಫ್ರೇಂಡ್ ಅಂತಾ ಮನೆ ಸೇರಿರುತ್ತಾಳೆ. ಈ ವಿಷಯವನ್ನು ಇವನ ಹತ್ರಾ ಬಿಟ್ಟು ಬೇರೆ ಯಾರ ಹತ್ರನೂ ಹೇಳಿರುದಿಲ್ಲಾ. ಇವನು, ಇವಳ ವಿಷಯವನ್ನು ಹಾಗೂ ತಾನು ಲವ್ ಮಾಡ್ತಿರೊ ವಿಷಯವನ್ನು ಇವನ ಅಮ್ಮನ ಹತ್ರಾ ಹೇಳ್ತಾನೆ.  ಅಮ್ಮ ತುಂಬಾ ಖುಷಿ ಆಗ್ತಾಳೆ. ಒಂದು ದಿನಾ ಇವನ ಮನೆ ಎದ್ರು ಅವಳು ನಡೆದುಕೊಂಡು ಹೋಗಬೇಕಾದ್ರೆ, ಏನೂ ತಿಳಿಯದ ಇವನ ಚಿಕ್ಕಪ್ಪನ ಮಗ ತಮಾಷೆಗೆ "ಅಣ್ಣ ನಿಮ್ಮನ್ನು ಪ್ರೀತಿ ಮಾಡ್ತಾ ಇದ್ದಾನೆ" ಅಂತಾ ಹೇಳ್ತಾನೆ. ಅವಳು ನಗಾಡಿಕೊಂಡು ಹೋದಾಗ ಇವನಿಗೆ ಪ್ರೀತಿ ಇನ್ನೂ ಜಾಸ್ತಿಯಾಗುತ್ತೆ.

          ಹೀಗಿರಬೇಕಾದ್ರೆ ರಾಮಕೃಷ್ಣ ಹೆಗ್ಗಡೆಯವರ ಮನೆಯಲ್ಲಿ ಅನಿಷ್ಟಗಳು ಸಂಭವಿಸುತ್ತವೆ. ಏನೂ ಮಾಡಿದರೂ ಲಾಸ್ ಆಗುತ್ತೆ. ಇದಕ್ಕೆ ದರ್ಶಿನ ಕೇಳಿದಾಗ ಗೊತ್ತಾಗಿದ್ದು, 22 ವರ್ಷಗಳ ಹಿಂದೆ ಓಡಿ ಹೋದ ಪವಿತ್ರನ ಮಗಳು ಈ ಮನೆಯಲ್ಲಿ ವಾಸವಾಗಿರೋದು. ಮನೆ ಅಪವಿತ್ರಗೊಂಡಿದೆ ಎಂದು. ಅವಳನ್ನು ಈ ಮನೆಯಿಂದ ಓಡಿಸಬೇಕಂದು ದೇವರ ಆಣತಿ ಆದಾಗ. ಮನೆಯವರಿಗೆ ವಿಷಯ ತಿಳಿದು ಅವಳನ್ನು ಮನೆಯಿಂದ ಕಳಿಸೊ ತೀರ್ಮಾನ ತೆಗೆದುಕೊಳ್ಳುತಾರೆ. ನಮ್ಮ ಕಥಾನಾಯಕ ಅವಳಿಗೆ ತುಂಬಾ ಹತ್ತಿರವಾದ್ದರಿಂದ ಅವನು, ಅವಳು ಹೋಗೊ ತನಕ ಅವಳ ಕಣ್ಣಿಗೆ ಕಾಣಬಾರದೆಂದು ನಾಯಕನ ತಾಯಿ ಜೊತೆ ಪಕ್ಕದ ಮನೆಯವರು ಮಾತು ತಗೊಳ್ಳುತ್ತಾರೆ. ಇದನ್ನು ಹುಡುಗನ ತಾಯಿ ಹುಡುಗನ ಬಳಿ ಹೇಳಿದಾಗ ಭಾರವಾದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೆ. ಒಂದು ಮನೆತನದ ಸುಖಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡ್ತಾನೆ. ಇವನೂ  ಪ್ರೀತಿ ಹೇಳಿಕೊಳ್ಳುವುದಿಲ್ಲಾ , ಅವಳೂ ಹೇಳಿಕೊಳ್ಳುವುದಿಲ್ಲಾ.

ಆದರೆ ಇಬ್ಬರಲ್ಲೂ ಅಗಾದವಾದ ಪ್ರೀತಿ ಇರುತ್ತೇ.........

-ಬರ್ವೆ 


Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)