ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)
ಎಲ್ ಕಣ್ ಹಾಯ್ಸರೂ ನೀರೇ ತುಂಬ್ಕಂಡಿಪ್ಪು ಸಮುದ್ರದಿಂದ ಕೂಗಳತಿ ದೂರದಲಿಪ್ಪು ಊರ್ ನಮ್ದೇ. ಊರ್ ಅಂದ್ ಮ್ಯಾಲೆ ದೇವಸ್ಥಾನ. ದೈದ್ ಮನಿ ಸಾಮಾನ್ಯ, ಹಂಗೆ ನಮ್ ಊರಂಗು ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವ್ಸ್ಥಾನ ಇತ್. ದೇವ್ಸ್ಥಾನದ ಸುತ್ತ ತೆಂಗಿನ್ ತೋಟವೆ, ಬದಿಯಂಗ್ ಪುಷ್ಕರಣಿ, ಪುಷ್ಕರಣಿ ದಂಡೆಂಗೆ ನಾಗನ್ ಬನ. ದೇವ್ಸ್ಥಾನದ ಸುತ್ತ ತೋಟ ಆರ್ಮೆಲೆ ಹಚ್ಚ ಹಸಿರಾದ ಗೆದ್ದಿ, ಗೆದ್ದಿ ಅಂಚಂಗೆ ನೆಡ್ಕಂಡ್ ಹೊರೆ ಮೊದಲ್ ಸಿಕ್ಕುದೆ ದೇವ್ಸ್ಥಾನದ ಭಟ್ರು ಅಡಿಗಳ ಮನಿ, ಅಡಿಗಳ ಹೆಂಡ್ತಿ ಕಮಲಮ್ಮ ತುಂಬ ದೈವ ಭಕ್ತ್ರೆ. ದಿನಾ ಬೈಸರಿ ಹೊತ್ತಿಗೆ ಗೆದ್ದಿ ಅಂಚಂಗೆ ನೆಡ್ಕಬಂದು, ನಾಗನ್ ಬನಕ್ಕೆ ದೀಪ ಇಟ್ಟಿಕ್ ಹೊತಿದಿರ್. ಅಡಿಗಳ ಮನೆಗೆ ಕೈ ಕಾಲ್ ಗೆಲ್ಲಾ ಆಳೇ. ಮನಿ ತುಂಬಾ ದೆನ, ಹೋರಿ, ಎಮ್ಮಿ, ಒಂದ್ ನಾಯಿ, ಎರಡ್ ಬೆಕ್ಕು ಎಲ್ಲಾ ಇತ್ತ್. ಗೆದ್ದಿ ಕೆಲ್ಸ, ತೋಟದ್ ಕೆಲ್ಸ ಅಂದೇಳಿ, ಮನಿಗ್ ಎಸ್ಟೋತಿಗೂ ಕೆಲ್ಸ್ದೋರ್. ಅವ್ರಿಗೆ ಚಾ, ತಿಂಡಿ ಮಾಡ್ಕಂಡ್, ಮನಿ ಕಂಡ್ ಕಂಬುದ್ ಅಡಿಗಳ ಹೆಂಡ್ತಿ.
ದೇವ್ಸ್ಥಾನದ ಕೆಲ್ಸ
ಮುಗ್ಸಿ, ಮನಿಗ್ ಬಂದ್ ಉಂಡ್ಕಂಡ್, ಒಂದ್ಗಳ್ಗಿ ಮನಿಕಂಡ್
ಎದ್ರೆ, ಮನಿ ತುಂಬಾ ಜನವೇ, ಎಂತಕ್ ಗೊತಿತಾ..? ಅಡಿಗಳ ಹತ್ರ ಜಾತ್ಕ ತೊರ್ಸುಕ್. “ಅವರ್ ಹೇಳದ್ ಹೆಳ್ದಂಗ್ ಆತ್” ಅಂದೇಳಿ, ನಮ್ ಊರಿನವ್ರಲ್ದೇ, ಘಟದ್ ಮೇಲಿನೋರು “ಒಂದ್ಗಳಿಗಿ ಅಡಿಗ್ರ
ಹತ್ರ ಕೆಂಬ” ಅಂದ್ ಬೆಳ್ಗಯ್ಕಾರ್ ಮನಿ ಬಾಗಲಾಗ್ ಕೂತ್ಕಂತ್ ಇದ್ದಿರ್. ಅವ್ರಿಗ್ ಚಾ , ತಿಂಡಿ ಮಾಡುದ್ ಕಮಲಮ್ಮನ ತಲೀಗ್ ಬಿಳ್ತೀದಿತ್. ಏನೇ ಆದ್ರೂ “ಅತಿಥಿ
ದೇವೋ ಭವ” ಅಂದೇಳಿ, ಬಂದೋರಿಗ್ ಒಂಚೂರು ಬೇಜಾರ್ ಆಯ್ದಿದಂಗೆ
ಕಂಡ್ಕಂತಿದಿರ್ ನಮ್ಮ ಕಮಲಮ್ಮ.
ಒಂದಿನ ಹಾಡಿ ಮನಿ ಶೆಟ್ರು
ಮಗಿನ್ ಕರ್ಕಂಡ್ ಬೆಳ್ಗಯ್ಕಾರ್ ಅಡಿಗರ ಮನಿ ಬಾಗಲಾಗ್ ಇದ್ದಿರ್. ಅಡಿಗರ್ “ನಂಗೆ ದೇವ್ಸ್ಥಾನಕ್ಕೆ
ತಡ ಅಯ್ತ್” ಅಂದ್ರು, “ಹಿಂಗ್ ಆನ್ಬೇಡಿ ಭಟ್ರೆ, ಒಂದ್ಗಳಿಗೆ, ನಿನ್ನೆ ರಾತ್ರಿ ಇಡೀ ನಿದ್ದಿ ಇಲ್ಲಾ. ಗಂಡ್ ಎಂತೋ ಕಂಡ್ಕಂಡ ಹೆದ್ರಕಂಡಿತ್, ಮೊನ್ನಿ ಗೆದ್ದಿ ಬಯಲಾಗ್ ಆಟ ಅಡ್ಕಂಡ್ ಬಪ್ಪೋತಿಗೆ ತಡ ಅಯ್ತ್, ಆವತಿನ್ ರಾತ್ರಿಯಿಂದ ಚಳಿ ಜ್ವರ, ನಿನ್ನೆ ರಾತ್ರಿ ಒಂದ್ -
ಎರಡ್ ಎಲ್ಲಾ ಹ್ಯಾಸ್ಗೆಗೆ ಮಾಡ್ಕಂಡಿದ. ಅದು ಅವತ್ತು ಅಮಾಸಿ ಬೇರೆ,
ಎಂತಾರು ಗಾಳಿ ಗೀಳಿ ಮೇಟ್ಕಂಡಿತ ಕಾಣಿ ಭಟ್ರೆ.” ಅಡಿಗಳಿಗೆ ಬ್ಯಾರೆ ದಾರಿ ಇಲ್ಲಾ, ಊರಿನರ್ ಬೇರೆ, ಗಂಡ್ ಬಾರೀ ಹೆದ್ರಕಂಡಿತ್ ಅಂತಿದ್ರ, “ತಡ ಆರೆ ಅಯ್ಲಿ, ಒಂದ್ಗಳಿಗಿ ಕಂಡ್ಕಂಡ್ ಹೋಪ” ಅನ್ಕಂಡ್ “
ಏಯ್ ಕಮಲ, ಅಲ್ ಮೇಜಿನ್ ಮೇಲ್ ನನ್ ಕವಡೆ ಇತ್ ಕಾಣ್, ತಕಬ” ಅಂದೇಳಿ ಜಾತ್ಕ ಕಂಡ್ರ್. “ಎಂತ ಇಲ್ದೇ, ಗಂಡಿನ್
ಮನೆಗೆ ರಾಹು ಬಂದ್ ಕೂತ್ಕನ್ಡಿರ್, ಕೇತು ದೃಷ್ಟಿ ಬ್ಯಾರೆ ಇತ್. ಅಮಾಸಿ
, ಹುಣ್ಮಿಗೆ ಬೈಸರಿ ಹೊತ್ತಿಗೆ, ಮದ್ಯಾಂದ್
ಹೊತ್ತಿಗೆ ಹೊರಗ್ ಬಳುಕ್ ಬಿಡ್ಬೇಡಿ. ನಾಳೆಯಿಂದ್ ಏಳು ದಿನ ಗಣಪತಿಗೆ ಕಡ್ಲೆ ತಂದ್ ಕೊಡಿ, ನೈವೇದ್ಯ ಮಾಡಿ ಕೊಡ್ತೆ ಎಲ್ಲಾ ಸಮಾ ಆತ್ “ ಅಂದೇಳಿ ಕಳ್ಸಿರ್.
ಆಡಿಗಳ ಮನಿಗೆ ಕೆಲ್ಸಕ್
ಬಪ್ಪೋಳು ಗೊಯಿ ಹಾಡಿ ಬಾಬಿ, ಇವಳದ್ ಒಡ್ಡೋಲಗ ಬಪ್ಪುದ್ ಅಡಿಗಳ್ ಮನಿ ಬಿಟ್ರ
ಮ್ಯಾಲೆ. ಮನಿ ಕೆಲ್ಸ ಎಲ್ಲಾ “ಹರ್ಕಿ ಬಲಿ, ಮರಂದ್ ಜಾಗಂಟಿ” ಮಾಡಿ, ಊರ್ ಮೇಲ್ ಇಪ್ಪು ವಿಷ್ಯ ಎಲ್ಲಾ ಕಮಲಮ್ಮ ಹತ್ರ ಪಂಚಾಯ್ತಿ ಮಾಡುದ್ ಇವಳ್ ಮುಖ್ಯ
ಕೆಲ್ಸ. “ ಹೊಯಿ ಅಮ್ಮ ದೀಪ ಹಚ್ಚುಕ್ಕೆ ಹೋಪತಿಗೆ
ಸ್ವಲ್ಪ ಜಾಗ್ರತಿ, ಗೆದ್ದಿ ಬದೆಗೆ ಬೈಸರಿ ಆಪೊತ್ತಿಗೆ ಏನೋ ಸೌಂಡ್ ಆತ್
ಅಂಬ್ರ್, ನನ್ನ ಮಗ ನಿನ್ನೆ ಕೆಲ್ಸ ಮುಗ್ಸಿ ಬಪ್ಪೊತ್ತಿಗೆ ಸ್ವಲ್ಪ ತಡ
ಅಯ್ತೆ, ಏನೋ ಬರ ಬರ ಆನ್ಕಂಡ್ ಹಿಂದ್ ಹಿಂದೆ ಬಂದಂಗಾಯ್ತ್ ಅಂತ್
ಹೆದರ್ಕಂಡಿದ”. “ಹೌದಾ ಬಾಬಿ, ಇವತ್ ಆ ಹಾಡಿಮನಿ ಶೆಟ್ರ್ ಅವರ್ ಗಂಡಿನ್
ಕರ್ಕಂಡ್ ಬಂದಿರ್ ” ಅಂತಾ ಮಾತ್ ಮುಂದುವರಿತ್.
ದಿನಾ ಅದೇ ದಾರಿಯಂಗ್
ಹೊತಿದ್ ಕಮಲಮ್ಮಂಗೆ ಅವತ್ಯಾಕೋ ಪುಕ ಪುಕ. ಬೆಳಿಗ್ಗೆ ಬಂದ ಶೆಟ್ರ್ ಗಂಡಿನ್ ಸ್ಥಿತಿ,
ಹಂಗೆ ಬಾಬಿ ಹೇಳಿದ್ ಮಾತಿಂದ ಹೆದರಿಕೆ ಮನಿ ಮಾಡಿತ್. ಹೆಂಗೋ ದೇವ್ರನ್ ಎಣಸ್ಕಂಡ್ ಅವತ್ ದೀಪ
ಹಚ್ಚಿಕಿ ಬಂದ್ರ್. ರಾತ್ರಿ ಗಂಡನ್ ಹತ್ರ “ನಾ ನಾಳೆಯಿಂದ ದೀಪ ಹಚ್ಚುಕೆ ಬತ್ತಿಲ್ಲಾ, ನೀವೇ ಸಂಜೆ ಪೂಜೆ ಮುಗ್ಸ್ಕಂಡ್ ಬಪ್ಪೊತ್ತಿಗೆ ಹಚ್ಚಿ ಬನ್ನಿ, ಆ ಗೆದ್ದಿ ಅಂಚಂಗೇನೋ ಶಬ್ದ ಆತ್ ಆಂಬ್ರ. ಆತಿಲ್ಯ..?”. ಅದಕ್ಕೆ
ಅಡಿಗ್ರು “ ಮತೆಂತ ಅತಿಲ್ಯ, ಧೈರ್ಯ ಮಾಡ್ಕಂಡ್ ದೇವ್ರನ್ ಎಣ್ಸ್ಕಂಡ್
ಬಾ, ಎಂತ ಆತು ಇಲ್ಲಾ” ಅಂತಾ ತಿರ್ಗಿ ಮನ್ಕಂಡ್ರು. ಅವತ್ಯಾಕೋ
ಕಮಲಮ್ಮಂಗೆ ತುಂಬಾ ಹೊತ್ತಿನೊರಿಗೆ ನಿದ್ದಿ ಬರ್ಲಾ. ಅವರ ಮನಿ ನಾಯಿ
ಮತ್ ಬೆಕ್ಕು ಗೆದ್ದಿ ಬದಿ ಕಂಡ್ಕಂಡ್ ಒಂದೇ ಸಮನಿ ಕೂಗ್ತಾ ಇದ್ದೊ.
ಮರ್ದಿನ ಬೆಳಗ್ಗೆ
ಅಂಗಳಕ್ಕೆ ನೀರ್ ಹಾಕಿ, ತುಳಸಿ ಪೂಜೆ ಮಾಡಿ,
ಬೆಕ್ಕಿಗೆ ಹಾಲ್ ಇಟ್ಕಂಡ್ ಕರದ್ರೆ, ಒಂದ್ ಮಾತ್ರ ಬಂತ್ ಇನ್ನೊಂದ್
ಎಸ್ಟ್ ಕರದ್ರು ಬರ್ಲಾ. ಅಡಿಗ್ರ್ ಹತ್ರ ಹೇಳುಕ್ ಹೊರೆ “ ನಂಗ್ ತಡ ಅಯ್ತ್ , ನಾನ್ ಬತ್ತೆ ” ಅಂತ ಹೊರಟೆ ಹೋರ್ ಅವತ್ ದೇವಸ್ತಾನಕ್ಕೆ ಹಾಡಿ ಮನಿ ಶೆಟ್ರ್ ಕಡ್ಲಿ
ತಕಂಡ್ ಬಂದಿರ್. ಪೂಜೆ ಆಯಿ ಪ್ರಸಾದ ಕೈಯಂಗೆ ಹಿಡ್ಕಂಡ್ ಕೇಂಡ್ರ್ “ ಭಟ್ರೆ ಹಿಂಗೆಲ್ಲ ಮಾಡ್ರೆ
ಗಂಡ್ ಸಮ ಆತ್ತೇ”. ಭಟ್ರಿಗೆ ಎಂತ ಹೇಳುದ್ ತೊಚ್ಲ. “ ಎಲ್ಲ ಸರಿ ಆತ್ ಹೊಯಿಬನ್ನಿ” ಅಂದ್ರ್.
ಕಮಲಮ್ಮ ದಿನಾ ವಿಷ್ಣು ಸಹಸ್ರನಾಮ ಹೆಳ್ಕಂಡ್ ಹೊಯಿ ದೀಪ ಇಟ್ಟಿಕೆ ಬತ್ತಿದಿರ್. ಒಂದ್ ಬೆಕ್
ಇಲ್ದೇ, ಇನ್ನೊಂದ್ ಜೋರ್ ಕೂಗ್ತ್ ಇದ್ದಿತ್.
ಹಿಂಗೆ ಆರ್ ದಿನಾ ಕಳದ್
ಹೊಯ್ತ್. ಶೆಟ್ರ್ ದಿನಾ ದೇವಸ್ಥಾನಕ್ ಬಪ್ಪುದ್ ಭಟ್ರೆ “ ಗಂಡ್ ಹುಷಾರಾತ್ತ “
ಕೆಂಬುದ್, ಬಾಬಿ ಹೊಸ ಹೊಸ ಕತಿ ಕಮಲಮ್ಮನ ಕೆಮಿಗ್ ತುಂಬುದ್ ಆತ್ತೇ
ಇದ್ದಿತ್. ಆರನೇ ದಿನಾ ರಾತ್ರಿ ಗೆದ್ದಿ ಬದೆಗೆ ದೊಡ್ಡ ಊಳಿಡುವ ಸದ್. ಕಮಲಮ್ಮ ಸ್ವಲ್ಪ ಧೈರ್ಯ
ಮಾಡ್ಕಂಡ್ ಕಿಟ್ಕೆಗೆ ಇಣಕ್ರೆ, ತುಂಬಾ ಜನ ಕೈಯಗೆ ದೊಂದಿ ಹಿಡ್ಕಂಡ್
ಹೊಪುದ್ ಕಾಂತ್. ಅವತ್ ರಾತ್ರಿ ಇಡೀ ಅವ್ರಿಗ್ ನಿದ್ದಿ ಬರ್ಲಾ. ಹಂಗಾಯಿ ಬೆಳಗ್ ಎಳುವೊತಿಗೆ
ಸ್ವಲ್ಪ ತಡ ಅಯ್ತ್. ಅಡಿಗ್ರ್, ಹೆಂಡ್ತಿಗೆ ಹುಷಾರ್ ಇಲ್ಲಾ ಆನ್ಕಂಡ್
ಮನೆಗೆ ಇದ್ದಿರ್. ಹೆಂಡ್ತಿ ಏಳುಕು ಅಡಿಗ್ರು “ ಎಂತ ಅಯ್ತ್ ಹೆಂಗ್ಸೆ,
ಮೈ ಸಮ ಇತ್ತಲ್ಲ”, ಅದಕ್ಕೆ ಕಮಲಮ್ಮ “ಹಾ ಹ ಸಮ ಇದ್ದೇ , ಎಂತ ಅಯ್ಲ “ ಆನ್ಕಂಡ್ ಬಚ್ಚಲ್ ಮನಿ ಕಡಿ ಹೋರ್. ಮುಖ ಎಲ್ಲಾ ತೊಳ್ಕಂಡ್ ಬಂದ್ಮೇಲೆ, ಅಡಿಗ್ರು “ ಕಮಲಾ , ಅಲ್ ಕಾಣ್ ದೂರ್ದಂಗೆ ಆ ಬಾಬಿ ನಮ್ಮನಿ
ಗುಂಬ್ಳನ್ನ ಹಿಡ್ಕಂಡ್ ಬತ್ತತ್ ಕಾಣ್, ನೀ ಹೇಳ್ತಾ ಇದ್ಯಲ್ಲ ಮೊನ್ನೆ
ಇಂದ ಮನಿಗ್ ಬರ್ಲಾ ಅಂದೇಳಿ ”. ಬಾಬಿ ಬಂದ್ “ ಹೌದ್ ಇದೊಂದ್ ಮನ್ನಿಯಿಂದ ಹೆಗ್ಣ ನುಂಗ್ಕಂಡ್
ನಮ್ಮನಿ ಮಾಳಗಿ ಮೇಲ್ ಮನಿಕಂಡಿತ್, ನಿಮ್ಮ್ ಮನಿದ್ ಆನ್ಕಂಡ್ ಎತ್ಕಂಡ್
ಬಂದೆ “. ಅಷ್ಟೋತಿಗಾಗಲೇ ಆಚೀ, ಇಚೀ ಮನಿಯವ್ರೆಲ್ಲ ಬಂದ್ರು “ ಭಟ್ರೆ
ನಿನ್ನೆ ರಾತ್ರಿ ಕೆಂಬುದ್ ಬ್ಯಾಡ ಗೆದ್ದಿ ಬದೆಗೆ ನರಿ ಮರ್ರೆ, ಏಸ್ಟ್
ದಿನಾ ಅಯ್ತೆನೋ ಎಲ್ಲಿಂದೋ ಬಂದ್ ಸೇರ್ಕಂಡಿದೋ, ನಿನ್ನೆ ರಾತ್ರಿ ಯಾರೋ
ಕಂಡೋರ್ ಹೆಳ್ರ್, ಎಲ್ಲಾ ಒಟ್ಟಾಯಿ ಬೆರ್ಸಿತ್. ನಿಮ್ಮನ್ ಎಬ್ಸುವ
ಕಾಂತ್, ಪಾಪ ಭಟ್ರು ಬೆಳಿಗ್ಗೆ ಬೇಗ ಏಳ್ತ್ರ,
ಜೋರ್ ನಿದ್ದೆ ಇರಕ್ ಅಂತ್ ಸುಮ್ನಾಯ್ತ್ “.
ಅದಕ್ಕೆ ಕಮಲಮ್ಮ “ ರಾತ್ರಿ ದೊಂದಿ ಹಿಡ್ಕಂಡ್ ಹೊದ್ ನೀವೆಯಾ..? “. “ ಹೌದೇ , ಕಾಟ್ ನರಿಗಳ್ ,
ಎಲ್ಲಾ ದೂರ್ ದೂರಿಗೆ ಒಡ್ಸಿ ಬಂದಿತ್ ”. ಅದಕ್ಕೆ ಅಡಿಗ್ರು “ ಕಂಡ್ಯ ಮೊನ್ನೆ ಗೆದ್ದಿ ಬದಿಯಂಗೆ
ಎಂತೋ ಸದ್ ಅತಿತ್ ಅಂತಿದ್ಯಲ್ಲ, ಇದೆ ಇರಕ್,
ಸುಮ್ನೆ ನೀನೊಂದು ಹೆದರ್ಕಂಡದ್ ” ಅದಕ್ಕೆ ಬಾಬಿ “ ನಾನು ಅದೇ ಅಮ್ಮಂಗೇ ಹೇಳುಕ್ ಬಂದದ್” .
ಅಡಿಗ್ರು “ ಸುಮನಾಯ್ಕನ್ತ್ಯ, ನೀನೆ ಇದ್ ಬದದ್ದೇಲಾ ಅವಳಿಗೆ ಹೇಳುದ್, ಅದ್ಕೆ ಹೇಳುದ್ ಬ್ಯಾಡದಿದ್ದೇಲಾ ಮಂಡಿಗ್ ಹಾಯ್ಕಂಬಕ್ ಆಗ ಅಂದೇಳಿ, ಇರ್ಲಿ ನಾ ಒಂದ್ಗಳ್ಗಿ ದೇವಸ್ಥಾನದ್ ಬದಿಗ್ ಹೊಯ್ ಬತ್ತೇ ಅಂತಾ ಹೋರ್.
ಅವತ್ ಕಡ್ಲಿ ತಂದ್ ಶೆಟ್ರ್
ಮುಖದಲ್ಲಿ ಸಂತೋಷ ಇದ್ದಿತ್. “ ಭಟ್ರೆ ಗಂಡ್ ಬೆಟ್ಟ್ ಕಟ್ಟಿ ಮ್ಯಾಚ್ ಆಡಿ,
ದುಡ್ಡೆಲ್ಲಾ ಕಳ್ಕಂಡ್ ಮನೆಗ್ ಹೆಳ್ರೆ ಹೊಡಿತ್ರ್ ಆನ್ಕಂಡ್ ಹೆದ್ರಕಂಡಿತ್, ಇವನೊಟ್ಟಿಗ್ ಹೊದ್ ನೆರ್ಮನಿ ಗಂಡಿಗ್ ನಾಕ್ ಬಿಟ್ಟೋ ಎಲ್ಲಾ ಬಾಯಿ ಬಿಟ್ಟ. ಕೂರ್ಸಿ
ಬುದ್ದಿ ಹೇಳಿ ಸರಿ ಮಾಡಿತ್. ನೀವ್ ಹೇಳ್ದಂಗೆ ಏಳನೇ ದಿನಕ್ಕೆ ಎಲ್ಲಾ ಸರಿ ಅಯ್ತ್ “. ಅದಕ್ಕೆ
ಅಡಿಗ್ರು ಹೇಳಿರ್ “ನಂಬ್ಕಿಯೇ ದ್ಯಾವ್ರು”.
- ಬರ್ವೆ
Comments
Post a Comment