Posts

ಮದುವೆ ಯಾಕಾಗಬೇಕು...!?

Image
  "ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಃ "   ಎನ್ನುವ ಮಾತಿನಂತೆ   ನಮ್ಮ ಜೀವನದಲ್ಲಿ ಏನೇ ಒಂದು ಒಳ್ಳೆಯ ಘಟನೆ ನಡೆಯಬೇಕಿದ್ದರೂ ಋಣ ಬೇಕಂತೆ.   ಆದರೆ ಬದಲಾದ   ಕಾಲಘಟ್ಟದಲ್ಲಿ ಋಣಕ್ಕಿಂತ ಮಿಗಿಲಾಗಿ ವ್ಯಕ್ತಿಯ ವೈಯಕ್ತಿಕ ಭಾವನೆಗಳಿಂದ , ಇಷ್ಟ-ಕಷ್ಟಗಳಿಂದ , ಅಭಿಪ್ರಾಯಗಳಿಂದ , ನಿರ್ಧಾರಗಳಿಂದ ಮೇಲೆ ಹೇಳಿದ ಎಲ್ಲವೂ ಅಲ್ಲದಿದ್ದರೂ ಮದುವೆ ವಿಚಾರ ನಿರ್ಧರಿತವಾಗುವುದು ಕಂಡುಬರುತ್ತದೆ. ಮುಂಚೆ ಒಂದು ಕಾಲ ಇತ್ತು , ಮದುವೆ ವಯಸ್ಸಿಗೆ ಬಂದಾಗ ಮದುವೆಯ ಕನಸುಗಳು ಬೀಳುತ್ತಿದ್ದವು , ಸಮಾರಂಭಗಳಲ್ಲಿ ಸಂಬಂಧಿಕರು ಯಾರಾದರೂ “ನಿನ್ನ ಮದುವೆ ಯಾವಾಗ.. ? ” ಅಂತ ಕೇಳಿದಾಗ ಮುಖ ಕೆಂಪಾಗಿ , ಮನಸ್ಸು ಲಡ್ಡು ತಿಂತಿತ್ತು. ಆದರೆ ಇತ್ತೀಚೆಗೆ ಮನೆಯಲ್ಲಿ ಮದುವೆಯ ಮಾತನಾಡಿದರೆ ಹುಡುಗ ಹುಡುಗಿಯರ ಮುಖ ಸಣ್ಣಗಾಗುತ್ತದೆ. ಕೆಲವು ವಿದ್ಯಮಾನಗಳಿಂದ ಪ್ರಭಾವಿತನಾಗಿ , ಸ್ವಮನಸ್ಕ ವಯೋಮಾನದವರ ಮದುವೆ ಬಗೆಗಿನ ತೀರ್ಮಾನವನ್ನು ಆಲಿಸಿ , ಈ ಲೇಖನವನ್ನು ಬರೆಯುವ ಮನಸ್ಸು ಆಯಿತು.   ಒಂದು ಎಂಟು ಒಂಬತ್ತು ವರ್ಷದ ಹಿಂದೆ 2016ರ ಆಸು ಪಾಸು , ನಾನು ನನ್ನ   ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ ಜೀವನವನ್ನು ಆರಂಭಿಸಿದ ಕಾಲ. ನಮ್ಮ ಸಂಬಂಧಿಕರೊಬ್ಬರು   ಅವರ ಮಗನ ಮದುವೆ ಆಹ್ವಾನಕ್ಕೆ   ಎಂದು ನಮ್ಮ ಮನೆಗೆ ಬಂದಿದ್ದರು.   ಅವರ ಮಗ ವಯಸ್ಸಿನಲ್ಲಿ ನನಗಿಂತ ನಾಲ್ಕು ವರ್ಷ ದೊಡ್ಡವನಿದ್ದ ಅಷ್ಟೇ.   ನನಗೆ ಇನ್ನು ನಾಲ್ಕು ವರ್ಷದಲ್ಲಿ , ನಾನೂ   ಅ

ಪ್ರಮೇಯ... (ಕರೆಯೇ ಕೋಗಿಲೆ ಮಾಧವನ ...)

Image
 ಪ್ರಮೇಯ... (ಕರೆಯೇ ಕೋಗಿಲೆ ಮಾಧವನ ...) ಪಾಠ - ೧ ಪ್ರತಿಸಾರಿ ಬೆಟ್ಟ ಹತ್ತಬೇಕಾದರೂ ಅನ್ಸೋದು "ಅಯ್ಯೋ ಎಷ್ಟು ಮೆಟ್ಟಿಲು ಇದೆ.. ಯಾವಾಗ ಮುಗಿಯುತ್ತೆ..?" ಅಂತ. ಆದರೆ ಇವತ್ತ್ಯಾಕೋ ಬೆಟ್ಟ ಹತ್ತಿದ್ದು ಗೊತ್ತಾಗಲಿಲ್ಲ. ಇವತ್ತಿನ ದಿನದ ಅವಸರದಲ್ಲಿ  ನಿನ್ನೆ ರಾತ್ರಿಯನ್ನು ಕಳೆದುಕೊಂಡಿದ್ದೆ. ಫಿಂಗರ್ ಕ್ರಾಸ್ಸ್ಡ್ ಸ್ಥಿತಿ ಅಂದ್ರೆ ಏನು ಅಂತ ನಿನ್ನೆ ಗೊತ್ತಾಯ್ತು. ಕಾಯೋದ್ರಲ್ಲಿ ಇರುವ ಸುಖ ನನಗೆ ಖುಷಿ ನೀಡಿತ್ತು. ಜೀವನ ಅಂದ್ರೆ ಬರೀ ದುಃಖಗಳನ್ನು ಕಂಡವಳಿಗೆ ಅವತ್ತು ಏನೋ ಸುಖದ ಮುನ್ಸೂಚನೆ ನೀಡಿತ್ತು. ಕಣ್ಮುಚ್ಚಿ ದೇವರಮುಂದೆ ನಿಂತುಕೊಂಡು "ಒಳ್ಳೇದ್ ಮಾಡಪ್ಪ" ಅಂತ ಕೇಳ್ಕೊಂಡೆ... ಕ್ಷಣಕ್ಷಣಕ್ಕೂ ಎದೆಬಡಿತ ಜೋರಾಗುತ್ತಿತ್ತು. ಆದರೆ ನನಗೆ ಕಾಡ್ತಾ ಇದ್ದಿದ್ದು ಒಂದೇ ಪ್ರಶ್ನೆ ಅವನು ಬರ್ತಾನಾ..?  ಅವತ್ತು ಜೋರ್ ಮಳೆ. ಸಂಜೆ ಹೊತ್ತಿನ ಲಾಸ್ಟ್ ಪಿರೆಡ್ ನಾನು ಪಾಠ ಮಾಡಬೇಕಿತ್ತು. ಬೇರೆ ಟೀಚರ್ಗಳು "7ನೇ ಕ್ಲಾಸ್ ಮಕ್ಕಳು ಬಹಳ ಲೂಟಿ, ಪಾಠ ಮಾಡಕ್ಕೆ ಬಿಡಲ್ಲ, ಕೋತಿಗಳು" ಅಂತ ಬೈತಾ ಇದ್ರು. ಆದರೆ ನನ್ನ ತರಗತಿಯಲ್ಲಿ ಮಕ್ಕಳು ತುಟಿ ಬಿಚ್ಚುತ್ತಿರಲಿಲ್ಲಾ. ಲಾಸ್ಟ್ ಪಿರೇಡ್, ಗಣಿತ ಪಾಠ ಬೇರೆ, ಆದ್ರೂ ಮಕ್ಕಳನ್ನು ಪಾಠದ ಕಡೆಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಒಂದು ನನ್ನ ಹತ್ತಿರ ಇತ್ತು. ಇನ್ನೇನು ಶಾಲೆ ಬಿಡಲಿಕ್ಕೆ ಐದು ನಿಮಿಷ ಇರಬೇಕಾದ್ರೆ ಕಿಟಕಿಯಲ್ಲಿ ಯಾರೋ ಇಣುಕುತ್ತಾ ಇದ್ದರು. ಮಳೆ ಜಾಸ್

ಲಾಕ್ ಡೌನ್ ಅಲ್ಲಿ ಸಿಕ್ಕ ಆ ಕೀಲಿ ಕೈ...!!

Image
ಲಾಕ್ ಡೌನ್, ಲಾಕ್ ಡೌನ್, ಲಾಕ್ ಡೌನ್. ಎಲ್ಲಿ ಕೇಳಿದ್ರು ಇದೇ ಪದ. ಟಿವಿ ಹಾಕ್ಲಿ, ರೇಡಿಯೋ ಟ್ಯೂನ್ ಮಾಡ್ಲಿ, ಪೇಪರ್ ಪುಟ ತಿರುಗಿಸಿಲಿ, ವಾಟ್ಸಾಪ್ ಸ್ಕ್ರಾಲ್ ಮಾಡಿದ್ರೂ ಕೇಳ್ತಾ ಇದ್ದಿದ್ದು ಇದು ಒಂದೇ ಪದ. ಹೇಗಪ್ಪಾ ಮುಂದಿನ ದಿನಗಳು, ಬಸ್ಸಿನಲ್ಲಿ ಆಫೀಸ್ಗೆ ಹೋಗ್ಬೇಕಾದ್ರೆ ಯಾರ್, ಯಾರು ಎಲ್ಲೆಲ್ಲಿ ತಾಗಿಸುತ್ತಾರೋ ಅಂತ ಹೆದರಿಕೊಳ್ಳುವುದರೊಳಗೆ ಕಂಪೆನಿ ಕಂಪ್ಯೂಟರ್ ಸೆಂಟರ್ ಅನ್ನೇ ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಬಿಟ್ಟಿತ್ತು. "ವೇರ್ ಪ್ರೊಫೆಷನಲ್ ಲೈಫ್ ಮೀಟ್ಸ್ ಪರ್ಸನಲ್" ಅಂತ ಸ್ಟೇಟಸ್ ಹಾಕ್ಕೊಂಡು ಮನೆ ಅಂಗಳದಲ್ಲಿ ನಮ್ಮ ಪ್ರೋಗ್ರಾಮಿಂಗ್ ಅಂಗಡಿ ಓಪನ್ ಆಗೆ ಬಿಡ್ತು. ಅಲ್ಲಿ ಅಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾದವು, ಇಲ್ಲಿ ಇಷ್ಟು ಜನರು ಪ್ರಾಣ ಕಳೆದುಕೊಂಡರು, ಅದ್ಯಾವುದೋ ಸಪ್ತ ಸಾಗರದಾಚೆ ಕೋಟಿಗಟ್ಟಲೆ ಜನರು ಕೆಲಸ ಕಳೆದುಕೊಂಡರಂತೆ, ಕೆಲವರು ತಿನ್ಲಿಕ್ಕೆ ಇಲ್ಲದೇ, ಊರಿಗೆ ಹೋಗಲು ಆಗದೆ ನಿರಾಶ್ರಿತರಾಗಿದ್ದಾರೆ, ಎನ್ನುವ ಸುದ್ದಿಗಳು ಸದಾ ಕಂಪ್ಲೇಂಟ್ ಮಾಡುವ ನಮ್ಮ ಜೀವನದಲ್ಲೂ ದೇವರು ಇದ್ದಾನೆ ಅಂತ ಒಂದ್ ಸಾರಿ ಅನಿಸಿದ್ದು ಸುಳ್ಳಲ್ಲ. ಕರೋನಾ ಅನ್ನುವ ಒಂದು ರೋಗ ಜನರು ಅನೇಕ ವರ್ಷಗಳಿಂದ ಅಸಾಧ್ಯ ಅಂದುಕೊಂಡಿದ್ದನ್ನು ಮಾಡಿಸಿಕೊಟ್ಟಿದೆ. ರಾತ್ರೋರಾತ್ರಿ ಅದೆಷ್ಟೋ ಕಂಪೆನಿಗಳು ತಮ್ಮ ಕಾರ್ಯ ನಿರ್ವಹಣೆಯನ್ನು ಕೆಲಸಗಾರರ ಮನೆಯ ಅಂಗಳಕ್ಕೆ ಸ್ಥಳಾಂತರಿಸಿವೆ. "ಆಫೀಸ್ನಲ್ಲೇ ಓತ್ಲಾ ಹೊಡಿತಾರೆ, ಇನ್ನು