Posts

Showing posts from October, 2020

ಪ್ರಮೇಯ... (ಕರೆಯೇ ಕೋಗಿಲೆ ಮಾಧವನ ...)

Image
 ಪ್ರಮೇಯ... (ಕರೆಯೇ ಕೋಗಿಲೆ ಮಾಧವನ ...) ಪಾಠ - ೧ ಪ್ರತಿಸಾರಿ ಬೆಟ್ಟ ಹತ್ತಬೇಕಾದರೂ ಅನ್ಸೋದು "ಅಯ್ಯೋ ಎಷ್ಟು ಮೆಟ್ಟಿಲು ಇದೆ.. ಯಾವಾಗ ಮುಗಿಯುತ್ತೆ..?" ಅಂತ. ಆದರೆ ಇವತ್ತ್ಯಾಕೋ ಬೆಟ್ಟ ಹತ್ತಿದ್ದು ಗೊತ್ತಾಗಲಿಲ್ಲ. ಇವತ್ತಿನ ದಿನದ ಅವಸರದಲ್ಲಿ  ನಿನ್ನೆ ರಾತ್ರಿಯನ್ನು ಕಳೆದುಕೊಂಡಿದ್ದೆ. ಫಿಂಗರ್ ಕ್ರಾಸ್ಸ್ಡ್ ಸ್ಥಿತಿ ಅಂದ್ರೆ ಏನು ಅಂತ ನಿನ್ನೆ ಗೊತ್ತಾಯ್ತು. ಕಾಯೋದ್ರಲ್ಲಿ ಇರುವ ಸುಖ ನನಗೆ ಖುಷಿ ನೀಡಿತ್ತು. ಜೀವನ ಅಂದ್ರೆ ಬರೀ ದುಃಖಗಳನ್ನು ಕಂಡವಳಿಗೆ ಅವತ್ತು ಏನೋ ಸುಖದ ಮುನ್ಸೂಚನೆ ನೀಡಿತ್ತು. ಕಣ್ಮುಚ್ಚಿ ದೇವರಮುಂದೆ ನಿಂತುಕೊಂಡು "ಒಳ್ಳೇದ್ ಮಾಡಪ್ಪ" ಅಂತ ಕೇಳ್ಕೊಂಡೆ... ಕ್ಷಣಕ್ಷಣಕ್ಕೂ ಎದೆಬಡಿತ ಜೋರಾಗುತ್ತಿತ್ತು. ಆದರೆ ನನಗೆ ಕಾಡ್ತಾ ಇದ್ದಿದ್ದು ಒಂದೇ ಪ್ರಶ್ನೆ ಅವನು ಬರ್ತಾನಾ..?  ಅವತ್ತು ಜೋರ್ ಮಳೆ. ಸಂಜೆ ಹೊತ್ತಿನ ಲಾಸ್ಟ್ ಪಿರೆಡ್ ನಾನು ಪಾಠ ಮಾಡಬೇಕಿತ್ತು. ಬೇರೆ ಟೀಚರ್ಗಳು "7ನೇ ಕ್ಲಾಸ್ ಮಕ್ಕಳು ಬಹಳ ಲೂಟಿ, ಪಾಠ ಮಾಡಕ್ಕೆ ಬಿಡಲ್ಲ, ಕೋತಿಗಳು" ಅಂತ ಬೈತಾ ಇದ್ರು. ಆದರೆ ನನ್ನ ತರಗತಿಯಲ್ಲಿ ಮಕ್ಕಳು ತುಟಿ ಬಿಚ್ಚುತ್ತಿರಲಿಲ್ಲಾ. ಲಾಸ್ಟ್ ಪಿರೇಡ್, ಗಣಿತ ಪಾಠ ಬೇರೆ, ಆದ್ರೂ ಮಕ್ಕಳನ್ನು ಪಾಠದ ಕಡೆಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಒಂದು ನನ್ನ ಹತ್ತಿರ ಇತ್ತು. ಇನ್ನೇನು ಶಾಲೆ ಬಿಡಲಿಕ್ಕೆ ಐದು ನಿಮಿಷ ಇರಬೇಕಾದ್ರೆ ಕಿಟಕಿಯಲ್ಲಿ ಯಾರೋ ಇಣುಕುತ್ತಾ ಇದ್ದರು. ಮಳೆ ಜಾಸ್