Posts

Showing posts from March, 2018

ಅ ಪರಿಚಿತ (ಅನೌನ್ ಅನ್ನೋನು)…

Image
ಜೀವನದ ದಾರಿಯಲ್ಲಿ ಪರಿಚಿತರು ಸಿಕ್ತಾರೆ, ಅಪರಿಚಿತರು ಸಿಕ್ತಾರೆ. ನಮ್ಮ ಹುಟ್ಟಿನಿಂದ ನಮ್ಮ ಜೊತೆ ಇರುವ ತಂದೆ-ತಾಯಿ, ತಂದೆ ಕಡೆ ಸಂಬಂಧ, ತಾಯಿ ಕಡೆ ಸಂಬಂಧ, ಇವರಷ್ಟೇ ಪರಿಚಿತರು ಅನ್ನಬಹುದು. ಆಮೇಲೆ ಜೀವನದ ದಾರಿಯಲ್ಲಿ ಯಾರನ್ನೆಲ್ಲ ಭೇಟಿಯಾದೆವು ಅವರೆಲ್ಲ ಅಪರಿಚಿತರೇ ಸರಿ. ಅವರೆಲ್ಲ ನಮ್ಮ ಒಂದು ಗುಣ, ಮಾತು, ಸ್ವಭಾವದಿಂದ ನಮಗೆ ಪರಿಚಿತ ಆಗಿರಬಹುದು. ನನ್ನನ್ನು ತುಂಬಾ ಕಾಡುವ ಒಂದು ಮಾತು “ದೆರ್ ಆರ್ ನೋ ಸ್ಟ್ರೇಂಜರ್ಸ್ ಹಿಯರ್, ಓನ್ಲಿ ಫ್ರೆಂಡ್ಸ್ ಯು ಹೆವಂಟ್ ಮೇಟ್ ಎಟ್” ಹೌದು ಇಲ್ಲಿ ಯಾರೂ ಅಪರಿಚಿತರಿಲ್ಲ, ಎಲ್ಲರೂ ಗೆಳೆಯರೇ ಆದರೆ ನಾವು ಇನ್ನೂ ಅವರನ್ನು ಭೇಟಿಯಾಗಿಲ್ಲ. ನನ್ನ ಅನೇಕ ಕೆಲಸಗಳಿಗೆ ಅನೇಕ ಪ್ರಾರಂಭಗಳಿಗೆ ಈ ಮಾತು ತುಂಬಾ ಸಹಾಯವಾಗಿದೆ. ದಿನ ಬಸ್ಸಿನಲ್ಲಿ ಹೋಗುವಾಗ ಸಿಗುವ ಕಂಡಕ್ಟರ್, ದಿನ ಊಟಕ್ಕೆ ಹೋದಾಗ ಪ್ರೀತಿಯಿಂದ ಸಪ್ಲೈ ಮಾಡುವ ಹೋಟೆಲ್ ಸಪ್ಲೈಯರ್, ದಿನ ಬೆಳಗ್ಗೆ ಮನೆ ಬಾಗಿಲಿಗೆ ಪೇಪರ್ ಹಾಗೂ ಹಾಲು ಹಾಕುವ ಹುಡುಗರು, ಎಲ್ಲಾದ್ರೂ ಗಡಿಬಿಡಿಯಿಂದ ಹೋಗಬೇಕು ಅಂತ ಅನ್ನಿಸಿದಾಗ ನೆನಪಾಗುವ ರಿಕ್ಷಾ ಡ್ರೈವರ್, ದಿನ ಮಾತನಾಡಿಸುವ ರೇಷನ್ ಅಂಗಡಿಯವರು, ಹುಷಾರಿಲ್ಲದಾಗ ನೆನಪಾಗುವ ನಮ್ಮ ಊರಿನ ಡಾಕ್ಟ್ರು, ಬಸ್ ಅಥವಾ ರೈಲಿನಲ್ಲಿ ದೂರ ಪ್ರಯಾಣ ಮಾಡುವಾಗ ಜೊತೆಯಾಗಿ ಸಿಗುವವರು, ಆಫೀಸ್ ನಲ್ಲಿ ಜೊತೆಯಾಗಿ ಕೆಲಸ ಮಾಡುವವರು ಎಲ್ಲರೂ ಒಂದು ರೀತಿಯ ಪರಿಚಿತ ಇರುವ ಅಪರಿಚಿತರು. ಕೆಲವು ಸಾರಿ ಅವರ ಹೆಸರು ತಿಳಿದಿರುವು

ನಿನ್ನ ಪ್ರೀತಿಗೆ ಅಭಿಮಾನಿ ನಾನೀಗ ಭಾಗ – 2

Image
ದಿನಾಲೂ ನಮ್ಮ ಹೀರೋ ಅವಳ ಕ್ಯಾಬಿನ್ ಎದುರು ನಡೆದು ಹೋಗ್ತಾ ಇದ್ದ. ಕಣ್ಣು ಕಣ್ಣು ಮೀಟ್ ಆಗ್ತಾ ಇತ್ತು ಆದರೆ ಮಾತು ಮಾತ್ರ ನಡೆದೇ ಇಲ್ಲ. ಕೆಫಿಟೇರಿಯದಲ್ಲಿ ಕಾಫಿ ಕುಡಿಯುವಾಗ, ಕ್ಯಾಂಟೀನಲ್ಲಿ ತಿಂಡಿ ತಿನ್ನುವಾಗ, ಪ್ರಾಜೆಕ್ಟ್ ಮೀಟಿಂಗ್ ಅಲ್ಲಿ ಇಬ್ಬರು ಎದುರು ಬದುರು ಅಗ್ತಾ ಇದ್ರು, ಇವನ್ಯಾರು..? ಇವಳ್ಯಾರು…? ಅಂತ ಮನಸ್ಸಿನಲ್ಲಿ ಯೋಚಿಸ್ತಾ ಇದ್ರು. ಆದರೆ ಮಾತನಾಡಿಸುವ ಧೈರ್ಯ ಇಬ್ಬರು ಮಾಡಲಿಲ್ಲ. ಇವಾಗಿನ ಯೂತ್ಸ್ ಗೆ ಇರುವ ದೊಡ್ಡ ಪ್ರಾಬ್ಲಂ ಫೇಸ್ ಬುಕ್ ಅಲ್ಲಿ ಅನೌನ್ ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸ್ತಾರೆ. ಆದ್ರೆ ಹೊರಗಡೆ ಗೊತ್ತಿಲ್ಲದವರೊಂದಿಗೆ ಮಾತನಾಡಲಿಕ್ಕೆ ಹೆದರುತ್ತಾರೆ. ಹೀಗಿರಬೇಕಾದರೆ ಕಂಪೆನಿಯಿಂದ ಎಲ್ಲ ಸೇರಿ ಗೋವಾ ಹೋಗುವ ಪ್ಲಾನ್ ಮಾಡ್ತಾರೆ. ಬಹಳ ಒಳ್ಳೆಯ ಹವ್ಯಾಸ ಇರುವ ನಮ್ಮ ಹುಡುಗ ಗೋವಾ ಅಂದ ಕೂಡಲೇ ಸಹಜವಾಗಿ ಬಾಯಿ ಕಳೆದುಕೊಂಡು ತುದಿಗಾಲಿನಲ್ಲಿ ನಿಂತುಕೊಂಡ. ಆದರೆ ತುಂಬಾ ಟ್ರೆಡಿಷನಲ್ ಆಗಿರುವ ನಮ್ಮ ಹೀರೊಯಿನ್ಗೆ ಗೋವಾ ಹೆಸರು ಕೇಳಿಯೇ ಬೇಡ ಅನ್ನಿಸ್ತು. ಆದರೂ ಗೆಳತಿಯರ ಒತ್ತಾಯಕ್ಕೆ ಅವಳೂ ಹೊರಟು ನಿಂತಳು. ಶುಕ್ರವಾರ ರಾತ್ರಿ ಹೊರಟು, ಶನಿವಾರ, ಭಾನುವಾರ ಮಜಾ ಮಾಡಿ, ಭಾನುವಾರ ರಾತ್ರಿ ಹಿಂದಿರುಗಿ ಬರುವ ಪ್ಲಾನ್ ಮಾಡಿದರು. ಪ್ಲಾನ್ ಪ್ರಕಾರ ಗೋವಾ ರೈಲು ಎಲ್ಲರನ್ನು ತುಂಬಿಕೊಂಡು ಬೆಂಗಳೂರಿನಿಂದ ಗೋವಾದ ಕಡೆಗೆ ತನ್ನ ಸಹಜ ಬುದ್ಧಿ ಯಂತೆ ಸ್ವಲ್ಪ ತಡವಾಗಿ ಹೊರಟಿತು. ವಿಪರ್ಯಾಸವೋ, ಕಾಕತಾಳೀಯವೋ ಎಂಬಂತ

ವಾರಾಂತ್ಯಕ್ಕೊಂದು ಮಲೆನಾಡ ಯಾನ.

Image
ಅವತ್ತು ಭಾನುವಾರ ಸಮಯ ಸಂಜೆ ನಾಲ್ಕರಿಂದ ನಾಲ್ಕು ಮೂವತ್ತು ಆಗಿರಬಹುದು. ನಾನು ಮತ್ತೆ ನನ್ನ ಗೆಳೆಯ ಟಿಟಿ ಇಂಜೆಕ್ಷನ್ ಗೋಸ್ಕರ ಮಂಗಳೂರಿನ ಆಸ್ಪತ್ರೆಗಳಲ್ಲಿ ಓಡಾಡ್ತಾ ಇದ್ವಿ. ಒಂದು ಕಡೆಯಲ್ಲಿ ಎದೆ ಡವಡವ ಅಂತ ಹೊಡೆದು ಕೊಳ್ತಾ ಇತ್ತು, ಯಾಕಂದ್ರೆ ಇಪ್ಪತ್ತ್ನಾಲ್ಕು ಗಂಟೆ ಮುಗಿದು ಹೋಗಲಿಕ್ಕೆ ಇನ್ನು ಕೇವಲ ಹತ್ತಿರ ಹತ್ತಿರ ಎರಡು ಗಂಟೆ ಮಾತ್ರ ಬಾಕಿ ಇತ್ತು. ಹಾಗಾದ್ರೆ ಇಪ್ಪತ್ತ್ನಾಲ್ಕು ಗಂಟೆ ಹಿಂದೆ ನಡೆದ ಘಟನೆ ಆದ್ರೂ ಏನು ಅಂತ ನೀವೆಲ್ಲ ಅಂದ್ಕೊಳ್ತಾ ಇರಬೇಕಲ್ಲಾ. ಬನ್ನಿ ನಲವತ್ತೆಂಟು ಗಂಟೆ ಹಿಂದೆ ಹೋಗಿ ಈ ಕಥೆ ಆರಂಭಿಸೋಣ. ಶುಕ್ರವಾರ ಸಂಜೆ ೪:೩೦ ನಮ್ಮ ಕಂಪೆನಿ ಕ್ಯಾಂಟಿನ್ ಅಲ್ಲಿ ಬಿಸಿ ಕಾಫಿ ಜೊತೆ ಗೊಳಿ ಬಜೆ ತಿನ್ನುತ್ತಾ, ನಾನು ನನ್ನ ಜೊತೆ ಕೆಲಸ ಮಾಡ್ತಾ ಇರುವ ಕೋಲ್ಕತ್ತಾ ಹುಡುಗ ಕುನಾಲ್, ಕರಾವಳಿಯವರಾದ ಸೂರಜ್ ಹಾಗೂ ಭವಿತ್, ಮೂರು ತಿಂಗಳಿಂದ ಮುಂದೆ ಹಾಕಿಕೊಳ್ಳುತ್ತಾ ಬಂದಿರುವ ಒಂದು ಪ್ಲಾನ್ ಅನ್ನು ಅವತ್ತು ನೆರವೇರಿಸಲಿಕ್ಕೆ ಮಾತಾಡ್ತಾ ಇದ್ವಿ. ಪ್ಲಾನ್ ಏನು ಅಂದ್ರೆ ಶೃಂಗೇರಿಯಲ್ಲಿ ಯಾರೂ ಇಲ್ಲದಿರುವ ನನ್ನ ಅಜ್ಜನ ಮನೆಗೆ ಹೋಗಿ, ಅಲ್ಲಿ ಸುತ್ತಮುತ್ತ ಇರುವ ಪ್ರವಾಸಿ ಸ್ಥಳಗಳನ್ನು ನೋಡಿಕೊಂಡು, ಎರಡು ದಿನ ಆರಾಮಾಗಿ ಇದ್ದು ಬರೋದು ಆಗಿತ್ತು. ಮಲೆನಾಡ ಚಳಿ ಬೇರೆ, ಜನವರಿ ತಿಂಗಳು ಬೇರೆ, ಮಂಜು ಕವಿದ ವಾತಾವರಣ ಇರುತ್ತೆ, ಎರಡು ದಿನ ಆಫೀಸಿನ ತಲೆಬಿಸಿ ಇಲ್ಲದೆ ಆರಾಮವಾಗಿ ಇದ್ದು ಬರೋಣ, ಭವಿತ್ ಕಾರಲ್ಲಿ ಇವತ್ತು ರ

ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆ.

Image
೧೯೫೬ ರ ತನಕ ಸ್ವಾತಂತ್ರ್ಯ ರಾಜ್ಯವಾಗಿದ್ದ ಕೊಡಗು ನಂತರ ಮೈಸೂರು ರಾಜ್ಯದ ಭಾಗವಾಗಿ ಕೊಡಗು ಜಿಲ್ಲೆಯಾಯಿತು. ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಎನ್ನುವ ಮೂರು ತಾಲ್ಲೂಕುಗಳನ್ನು ಇದು ಒಳಗೊಂಡಿದೆ. ಕನ್ನಡ, ಕೊಡವ, ತುಳು ಹಾಗೂ ಮಲಯಾಳಂ ಭಾಷಿಕರನ್ನು ಇಲ್ಲಿ ಹೆಚ್ಚಾಗಿ ನೋಡಬಹುದು. ವಾಯುವ್ಯದಲ್ಲಿ ದಕ್ಷಿಣ ಕನ್ನಡ, ಪಶ್ಚಿಮದಲ್ಲಿ ಕೇರಳದ ಕಾಸರಗೋಡು, ಉತ್ತರದಲ್ಲಿ ಹಾಸನ, ಪೂರ್ವದಲ್ಲಿ ಮೈಸೂರು, ನೈರುತ್ಯದಲ್ಲಿ ಕೇರಳದ ಕಣ್ಣೂರು, ದಕ್ಷಿಣದಲ್ಲಿ ವಯನ್ನನಾಡ್ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡು, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಾಗಿದೆ. ಕೊಡಗು ಜಿಲ್ಲೆಯ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದು ಭತ್ತ ಹಾಗೂ ಕಾಫಿ ಇಲ್ಲಿನ ಪ್ರಮುಖ ಬೆಳೆಗಳು. ಕೊಡಗು ಇಲ್ಲಿನ ಕಾಫಿ ಹಾಗೂ ಇಲ್ಲಿನ ಜನರಿಗೆ ಪ್ರಖ್ಯಾತವಾಗಿದೆ. ಕೊಡವ ಭಾಷಿಗ ಕೊಡವರು ಇಲ್ಲಿನ ಮೂಲ ನಿವಾಸಿಗಳು. ಭಾರತದ ಸೇನಾ ವ್ಯವಸ್ಥೆಗೆ ಇವರ ಕೊಡುಗೆ ಅಪಾರವಾದದ್ದು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಕೊಡಗಿನವರು ಎನ್ನುವುದು ಕರ್ನಾಟಕದ ಹೆಮ್ಮೆ. ಹಿಂದೂ ಪುರಾಣದ ಪ್ರಕಾರ ಚಂದ್ರವಂಶಿಯ ಕ್ಷತ್ರಿಯ ಚಂದ್ರವರ್ಮ ಕೊಡವರ ಮೂಲ ಪುರುಷ. ಚಂದ್ರವರ್ಮನ ಹನ್ನೊಂದು ಮಕ್ಕಳಲ್ಲಿ ಮೊದಲನೆಯವನಾದ ದೇವಕಾಂತ ನಂತರದಲ್ಲಿ ರಾಜನಾಗುತ್ತಾನೆ. ಈ ಹನ್ನೊಂದು ಮಕ್ಕಳು ವಿದರ್ಭ ದೇಶದ ರಾಜಕುಮಾರಿಯನ್ನು ಮದುವೆಯಾಗಿ, ಕೊಡಗ