ನಿನ್ನ ಪ್ರೀತಿಗೆ ಅಭಿಮಾನಿ ನಾನೀಗ ಭಾಗ – 2
ದಿನಾಲೂ ನಮ್ಮ ಹೀರೋ ಅವಳ ಕ್ಯಾಬಿನ್ ಎದುರು ನಡೆದು ಹೋಗ್ತಾ ಇದ್ದ. ಕಣ್ಣು ಕಣ್ಣು ಮೀಟ್ ಆಗ್ತಾ ಇತ್ತು ಆದರೆ ಮಾತು ಮಾತ್ರ ನಡೆದೇ ಇಲ್ಲ. ಕೆಫಿಟೇರಿಯದಲ್ಲಿ ಕಾಫಿ ಕುಡಿಯುವಾಗ, ಕ್ಯಾಂಟೀನಲ್ಲಿ ತಿಂಡಿ ತಿನ್ನುವಾಗ, ಪ್ರಾಜೆಕ್ಟ್ ಮೀಟಿಂಗ್ ಅಲ್ಲಿ ಇಬ್ಬರು ಎದುರು ಬದುರು ಅಗ್ತಾ ಇದ್ರು, ಇವನ್ಯಾರು..? ಇವಳ್ಯಾರು…? ಅಂತ ಮನಸ್ಸಿನಲ್ಲಿ ಯೋಚಿಸ್ತಾ ಇದ್ರು. ಆದರೆ ಮಾತನಾಡಿಸುವ ಧೈರ್ಯ ಇಬ್ಬರು ಮಾಡಲಿಲ್ಲ. ಇವಾಗಿನ ಯೂತ್ಸ್ ಗೆ ಇರುವ ದೊಡ್ಡ ಪ್ರಾಬ್ಲಂ ಫೇಸ್ ಬುಕ್ ಅಲ್ಲಿ ಅನೌನ್ ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸ್ತಾರೆ. ಆದ್ರೆ ಹೊರಗಡೆ ಗೊತ್ತಿಲ್ಲದವರೊಂದಿಗೆ ಮಾತನಾಡಲಿಕ್ಕೆ ಹೆದರುತ್ತಾರೆ.
ಹೀಗಿರಬೇಕಾದರೆ ಕಂಪೆನಿಯಿಂದ ಎಲ್ಲ ಸೇರಿ ಗೋವಾ ಹೋಗುವ ಪ್ಲಾನ್ ಮಾಡ್ತಾರೆ. ಬಹಳ ಒಳ್ಳೆಯ ಹವ್ಯಾಸ ಇರುವ ನಮ್ಮ ಹುಡುಗ ಗೋವಾ ಅಂದ ಕೂಡಲೇ ಸಹಜವಾಗಿ ಬಾಯಿ ಕಳೆದುಕೊಂಡು ತುದಿಗಾಲಿನಲ್ಲಿ ನಿಂತುಕೊಂಡ. ಆದರೆ ತುಂಬಾ ಟ್ರೆಡಿಷನಲ್ ಆಗಿರುವ ನಮ್ಮ ಹೀರೊಯಿನ್ಗೆ ಗೋವಾ ಹೆಸರು ಕೇಳಿಯೇ ಬೇಡ ಅನ್ನಿಸ್ತು. ಆದರೂ ಗೆಳತಿಯರ ಒತ್ತಾಯಕ್ಕೆ ಅವಳೂ ಹೊರಟು ನಿಂತಳು. ಶುಕ್ರವಾರ ರಾತ್ರಿ ಹೊರಟು, ಶನಿವಾರ, ಭಾನುವಾರ ಮಜಾ ಮಾಡಿ, ಭಾನುವಾರ ರಾತ್ರಿ ಹಿಂದಿರುಗಿ ಬರುವ ಪ್ಲಾನ್ ಮಾಡಿದರು. ಪ್ಲಾನ್ ಪ್ರಕಾರ ಗೋವಾ ರೈಲು ಎಲ್ಲರನ್ನು ತುಂಬಿಕೊಂಡು ಬೆಂಗಳೂರಿನಿಂದ ಗೋವಾದ ಕಡೆಗೆ ತನ್ನ ಸಹಜ ಬುದ್ಧಿ ಯಂತೆ ಸ್ವಲ್ಪ ತಡವಾಗಿ ಹೊರಟಿತು. ವಿಪರ್ಯಾಸವೋ, ಕಾಕತಾಳೀಯವೋ ಎಂಬಂತೆ ನಮ್ಮ ಹೀರೋ ಮತ್ತು ಹೀರೋಯಿನ್ ಎದುರು ಬದರಾಗಿರುವ ಸ್ಲೀಪರ್ ಕೋಚಿನಲ್ಲಿ ಮಲಗಬೇಕಾಗಿ ಬಂತು. ಕಣ್ಣು ನೋಟಗಳು ಅಲ್ಲೂ ಎಕ್ಸ್ಚೇಂಜ್ ಆದವು ಆದರೆ ಮಾತನಾಡಲಿಲ್ಲ. ಹಾಡು ಕೇಳ್ತಾ, ಅಂತ್ಯಾಕ್ಷರಿ ಆಡ್ತಾ, ಜೋಕ್ಸ್ ಮಾಡಿಕೊಳ್ತಾ ಎಲ್ಲರೂ ನಿದ್ದೆಗೆ ಜಾರಿದರು, ನಮ್ಮ ಹೀರೊಯಿನ್ಗೆ “ಏನ್ ಲಕ್ಕಿ ನೀನು, ಅವನ ಎದುರು ಸೀಟ್ ಸಿಕ್ಕಿದೆಯಲ್ಲ” ಅಂತ ಅವಳ ಫ್ರೆಂಡ್ ಹೇಳಿದ್ಲು. “ಅದರಲ್ಲೇನಿದೆ ವಿಶೇಷ” ಅಂತ ನಮ್ಮ ಹೀರೋಯಿನ್ ಹೇಳಿದ್ಲು. “ಅವನು ಕ್ಯೂಟ್ ಅಂಡ್ ಹಾಟ್ ಕಣೆ, ಅವನ್ ಜೊತೆ ಗೋವಾದಲ್ಲಿ ಜಾಸ್ತಿ ಟೈಮ್ ಸ್ಪೆಂಡ್ ಮಾಡ್ಬೇಕು ಅಂತ ಇದ್ದೀನಿ” ಅಂತ ಹೇಳಿದ್ಲು. ಹೇಗಾದರೂ ಇರಲಿ ನನಗೇನು ಅಂತ ನಮ್ಮ ಹುಡುಗಿ ಕ್ಯಾರೇ ಮಾಡಲಿಲ್ಲ.
ಬೆಳಗಿನ ಜಾವದ ಸೂರ್ಯ ಗೋವಾದಲ್ಲಿ ಇಡೀ ತಂಡಕ್ಕೆ ದರ್ಶನ ಕೊಟ್ಟಿದ್ದ. ರೈಲು ಗೋವಾ ರೈಲ್ವೆ ಸ್ಟೇಷನ್ ಅಲ್ಲಿ ಇಡೀ ತಂಡವನ್ನು ಇಳಿಸಿ ತನ್ನ ಪಯಣ ಮುಂದುವರಿಸಿತು. ಎಲ್ಲರೂ ಹೋಟೆಲ್ ರೂಮಿಗೆ ಹೋಗಿ, ಫ್ರೆಶ್ ಆಗಿ, ತಿಂಡಿ ತಿಂದು ಶನಿವಾರದ ಗೋವಾ ಜರ್ನಿ ಆರಂಭಿಸಿದರು.
ಗೋವಾ ಅಂದ ಕೂಡಲೇ ನೆನಪಾಗುವುದು ಚರ್ಚ್, ಬೀಚ್ ಮತ್ತೆ ಚಿಪ್ ಬಿಯರ್. ಹಾಗಾಗಿ ಮೊದಲ ದಿನ ಗೋವಾದ ಫೇಮಸ್ ಚರ್ಚ್ ಆದ ಓಲ್ಡ್ ಗೋವಾ ಚರ್ಚ್ ಗೆ ನಮ್ಮ ಇಡೀ ತಂಡ ದಾಂಗುಡಿ ಇಟ್ಟಿತು. ಅಲ್ಲಿರುವ ಸೈಂಟ್ ಕ್ಸೇವಿಯರ್ನ ಇನ್ನು ಕೊಳೆಯದ ಹಾಗೆ ಇರುವ ಶರೀರದ ಮುಂದೆ ತಮ್ಮ ಬೇಡಿಕೆಗಳನ್ನು ಕೇಳಿಕೊಂಡು ಹೊರಗೆ ಬಂದ್ರು. ಇಲ್ಲಿನ ಒಂದು ವಿಶೇಷ ಏನು ಹೇಳಿದ್ರೆ ಇಲ್ಲಿರುವ ಸೈಂಟ್ ಕ್ಸೇವಿಯರ್ನ ಶರೀರದ ಎದುರು ಏನು ಕೇಳಿಕೊಂಡರು ಅದು ನಡೆಯುತ್ತೆ ಆದರೆ ಅದನ್ನು ಯಾರಿಗೂ ಹೇಳಬಾರದಂತೆ. ಅಲ್ಲಿಂದ ಹೊರಗೆ ಬರುವಾಗ ನಮ್ಮ ಹೀರೋಯಿನ್ ಗೆಳತಿ ಪ್ರಿಯ “ಅರುಣ್, ನೀವು ಏನು ಕೇಳಿಕೊಂಡ್ರಿ” ಅಂತ ಕೇಳೇ ಬಿಟ್ಲು. ಅದಕ್ಕೆ ಅರುಣ್ “ಬಿಡ್ರಿ ಅದರಲ್ಲೆಲ್ಲಾ ನನಗೆ ಇಂಟ್ರೆಸ್ಟ್ ಇಲ್ಲ ಏನು ಆಗಬೇಕೋ ಅದು ಆಗತ್ತೆ” ಅಂದುಬಿಟ್ಟ. ಪ್ರೀತಿ ನೀ ಏನು ಕೇಳಿಕೊಂಡೇ ಅಂದಾಗ “ಹೊssಗೆ ಅದನ್ನು ಹೇಳಬಾರದು ಅಂತ ಒಳಗೆ ಹೇಳಿಲ್ವ ಸೋ ಹೇಳಲ್ಲ” ಅಂದ್ಲು.
ನಂತರ ನಮ್ಮ ಇಡೀ ತಂಡ ಡೊನಾ ಪೌಲ ವ್ಯೂ ಪಾಯಿಂಟ್ ನೋಡಿಕೊಂಡು, ಅಂಜುನಾ ಬೀಚ್ ಸುತ್ತಿ ಅಲ್ಲೇ ಇರುವ ಸ್ಯಾಟರ್ಡೆ ನೈಟ್ ಫ್ಲೀ ಮಾರ್ಕೆಟ್ ಗೆ ಎಂಟ್ರಿ ಕೊಡ್ತಾರೆ. ಸ್ಯಾಟರ್ಡೆ ನೈಟ್ ಫ್ಲೀ ಮಾರ್ಕೆಟ್ ಅನ್ನೋದು ಗೋವಾದ ವಿಶೇಷಗಳಲ್ಲಿ ಒಂದು. ಫ್ಲೀ ಮಾರ್ಕೆಟ್ ಅಲ್ಲಿ ಪ್ರೀತಿ ಒಂದು ಇಯರಿಂಗ್ ಸೆಲೆಕ್ಟ್ ಮಾಡ್ತಾಳೆ, ಆಗ ಅಲ್ಲೇ ಇದ್ದ ನಮ್ಮ ಹುಡುಗ “ಚೆನ್ನಾಗಿಲ್ಲ ರೀ, ನಿಮಗೆ ಅಷ್ಟು ಚೆನ್ನಾಗಿ ಕಾಣಲ್ಲ” ಅಂದುಬಿಟ್ಟ. “ಇವನಿಗೆ ಯಾಕಪ್ಪಾ ಬೇರೆಯವರ ವಿಷಯ” ಅನ್ಕೊಂಡು ಏನೂ ಹೇಳದೇ ಯಾವ ಇಯರಿಂಗ್ ಕೂಡ ತೆಗೆದುಕೊಳ್ಳದೆ, ಸುಮ್ಮನೆ ಅಲ್ಲಿಂದ ಹೋಗಿಬಿಟ್ಟಳು. “ಏನಾದ್ರೂ ತಪ್ಪು ಮಾತಾಡಿದ್ನ” ಅಂತ ನಮ್ಮ ಹುಡುಗ ಸುಮ್ನೆ ತಲೆ ಕೆರೆದುಕೊಂಡ.
ನಂತರ ಇಡೀ ತಂಡ ಭಾಗ ಬೀಚಿನಲ್ಲಿರುವ ಶಾಕ್ಸ್ ಗೆ ಗೋವಾದ ರಾತ್ರಿ ಸೌಂದರ್ಯವನ್ನು ಸವಿಯಲು ತೆರಳಿತು. ಶಾಕ್ಸ್ನಲ್ಲಿ ಕುಡಿದು, ಕುಣಿದು ಇಡೀ ರಾತ್ರಿ ಮಜಾ ಮಾಡಿ ನಶೆಯಲ್ಲಿ ತೇಲಿ ಹೋದ ಅರುಣ್, ಇದ್ಯಾವುದನ್ನು ಇಷ್ಟಪಡದ ನಮ್ಮ ಹುಡುಗಿ ಕಥೆ ಕರೆಯದೆ ಇರುವ ಮದುವೆ ಮನೆಗೆ ಹೋಗಿ ಕೂತಂತೆ ಆಗಿತ್ತು. ‘ಏನಪ್ಪ ಇತರ ಕುಡಿತಾನೆ, ಈ ತೆರೆದವನು ನನಗೆ ಗಂಡ ಆಗಿ ಸಿಗಲಿರಲಿಲ್ಲ ಪ್ಪಾ’ ಅಂತ ನಮ್ಮ ಹುಡುಗಿ ಅಂದ್ಕೊಂಡ್ರೆ. ‘ಇಷ್ಟು ಡೀಸೆಂಟ್ ಗೌರಮ್ಮ ನನಗೆ ಹೆಂಡ್ತಿಯಾಗಿ ಸಿಗದೇ ಇರಲಿ’ ಅಂತ ನಮ್ಮ ಹುಡುಗನು ಅಂದುಕೊಂಡ
ಮುಂದಿನ ದಿನ ಬೆಳಗ್ಗೆ ಅಗುಡ ಫೋರ್ಟ್ ಹಾಗೂ ಕಲಂಗುಟ್ ಬೀಚ್ ಅನ್ನು ನೋಡಿಕೊಂಡು, ಎಲ್ಲಾ ಬೆಂಗಳೂರು ರೈಲು ಹತ್ತಿದರು. ನಮ್ಮ ಹುಡುಗನ ಜೊತೆ ಎಷ್ಟೋ ಹುಡುಗಿಯರು ಗೋವಾದಲ್ಲಿ ಕ್ಲೋಸ್ ಆಗಿ ಮೂವ್ ಆಗ್ಲಿಕ್ಕೆ ಟ್ರೈ ಮಾಡಿದ್ರು. ಯಾರಿಗೂ ಕ್ಯಾರೇ ಮಾಡದೆ ತನ್ನದೇ ಲೋಕದಲ್ಲಿ ಎಂಜಾಯ್ ಮಾಡ್ಕೊಂಡು ನಮ್ಮ ಹುಡುಗ ವಾಪಸಾಗಿದ್ದ.
ಲೇಖಕರು : ಗಣೇಶ ಬರ್ವೆ ಮಣೂರು
Comments
Post a Comment