Posts

Showing posts from June, 2019

ಬಸ್ಸಿನ ಕೊನೆಯ ಸೀಟು...!!

Image
ಮಲೆನಾಡ ಮಡಿಲಲ್ಲಿ ಒಂದು ಊರು, ಆ ಊರಿನಲ್ಲಿ ಈಗ್ಲೋ, ಆಗ್ಲೋ ಬೀಳು ಒಂದು ಬಸ್ ಸ್ಟಾಪ್. ದಿನಕ್ಕೆ ಒಂದೋ, ಎರಡೋ ಬಾರಿ ಬರುವ ಬಸ್ಸು. ಕಣ್ಣು ಮುಚ್ಚಿಕೊಂಡು ಸುರಿಯುತ್ತಿರುವ ಮಳೆ. ದಾರಿಯಲ್ಲಿ ಯಾರೋ ಹಸಿ ಹುಲ್ಲು ಸೈಕಲ್ ಕ್ಯಾರಿಯರ್ ಅಲ್ಲಿ ಇಟ್ಕೊಂಡು ಹೋಗ್ತಾ ಇದ್ರು. "ಯಜಮಾನ್ರೆ, ಇಲ್ಲಿ ಬಸ್ಸು ಅನ್ನುವಂಥದ್ದು ಏನಾದ್ರು ಬರುತ್ತಾ."  "ಎರಡು ಬಸ್ ಬತ್ತಾವೆ, ಅವರಿಗೆ ಟೇಮ್ ಇಲ್ಲ, ಏನೂ ಇಲ್ಲ. ಕೆಲವು ಸಾರಿ ಮರ ಬಿತ್ತು, ಬಸ್ ಹೊಂಡಕ್ಕೆ ಬಿತ್ತು ಅಂತ ಬರವೂ ಬರಲ್ಲ, ಏನೋ ಕಣಪ್ಪ ಬಂದ್ರೆ ನಿನ್ನ ಪುಣ್ಯ. ಮಳೆ ಬರಂಗ್ ಅದೇ, ಬಸ್ ಸ್ಟಾಂಡ್ ಬೇರೆ ಸೋರತ್ತದೆ, ಬನ್ನಿ ನಮ್ಮ ಮನೆ ಇಲ್ಲೇ ಇದೆ. ಬಸ್ ಬರೋ ತನಕ ಸ್ವಲ್ಪ ಆರಾಮ ಮಾಡಿ" ಆ ಯಜಮಾನರ ಮನೆಗೆ ಹೋಗಿ, ಒಳ್ಳೆ ಮಲ್ನಾಡ್ ಕಾಫಿ ಹೀರಿಕೊಂಡು ಕೂತ್ಕೊಂಡ್ ಇದ್ದೆ. ಅಷ್ಟರೊಳಗೆ ಎಲ್ಲಿಂದಲೋ ಬಸ್ನ ಹಾರ್ನ್ ಕೇಳಿಸಿತು. "ಬಸ್ ಬಂತು ಕಾಣುತ್ತೆ, ಹೋಗಪ್ಪಾ, ಬೇಗ ಹೋಗು ಬಸ್ಸ್ಟಾಂಡಲ್ಲಿ ಯಾರೂ ಇಲ್ಲ ಅಂದ್ರೆ ಹಂಗೆ ಹೊಂಟೋಗ್ತಾನೆ". ಎದ್ನೋ, ಬಿದ್ನೋ ಅಂತ ಓಡ್ಕೊಂಡು ಹೋಗಿ ಬಸ್ ಹತ್ಕೊಂಡೆ. ಆದ್ರೆ ಬಸ್ ತುಂಬಿತ್ತು. ನನಗೆ ಸಿಕ್ಕಿದ್ದು ಕೊನೆಯ ಸೀಟು. ಕೊನೆಯ ಸೀಟಿನಲ್ಲಿ ಕೂತ ಮನಸ್ಸು ಆಲೋಚನೆಯಲ್ಲಿ ಮಗ್ನವಾಯಿತು. ಈ ಬಸ್ ಹತ್ತಬೇಕೋ, ಬೇಡವೋ ಅನ್ನುವ ಕನ್ ಫ್ಯೂಷನ್ ನಲ್ಲಿ ಇರುವವರಿಗೆ ಹೆಚ್ಚಾಗಿ ಸಿಗೋದೇ ಈ ಕೊನೆ ಸೀಟು. ಕೆಲವರು ಯಾಕಪ್ಪಾ ಹತ್ತಿದ್ದು