ನಮಗೂ ಇದೇ ತರಹದ ಗೆಳೆಯರಿದ್ರು...!!!



          ಜುಮುಗುಡುವ ಡಿಸೆಂಬರ್ ಚಳಿಯಲ್ಲಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳೋಣ ಅಂತಾ. ತಡರಾತ್ರಿ ನಾನು ಮತ್ತು ನನ್ನ ಫ್ರೇಂಡ್ ಸಮುದ್ರದಂಡೆಗೆ ಹೋಗಿದ್ವಿ. ಬಿಸಿ ಜಾಸ್ತಿಯಾಗಿ ಮನೆಗೆ ಹೋಗೊಣ ಅಂತಾ ನೋಡಿದ್ರೆ,ಗಾಡಿಯಲ್ಲಿ ಪೆಟ್ರೋಲ್ ಮುಗಿದುಹೋಗಿತ್ತು. ಅಮವಾಸ್ಯೆ ಕತ್ತಲು ಬೇರೆ. ಕೂಗಿ ಕರೆದರೂ ಹಾ ಅನ್ನಲಿಕ್ಕೆ ಜನ ಇರಲಿಲ್ಲಾ. ಅಂತಹಾ ಸಮಯದಲ್ಲಿ ಸಹಾಯಕ್ಕೆ ಬಂದಿದ್ದು ನಮ್ಮ ಫ್ರೇಂಡ್. ಅವನು ಹೇಗಿದನ್ನೋ,ಯಾವ ಪರಿಸ್ಥಿಯಲ್ಲಿ ಇದನ್ನೋ ಗೊತ್ತಿಲ್ಲಾ. ಆದ್ರೆ ನಮ್ಮ ಒಂದು ಪೋನ್ ಕಾಲ್ಗೆ ಪೆಟ್ರೋಲ್ ತಂದು ನಮ್ಮನು ಮನೆ ಸೇರಿಸ್ದಾ.

          ಫ್ರೇಂಡ್‍ಶಿಪ್ ಬೇರೆಯವರನ್ನು ನಮ್ಮವರನ್ನಾಗಿ ಮಾಡುತ್ತೆ. ಸ್ನೇಹಕ್ಕೆ ಬಡವ-ಶ್ರೀಮಂತ,ಮೇಲು ಜಾತಿ- ಕೀಳು ಜಾತಿ,ಬುದ್ದಿವಂತ-ದಡ್ಡ,ದೊಡ್ಡವರು- ಚಿಕ್ಕವರು ಅನ್ನೋ ಬಾರ್ಡರ್ ಇರೋದಿಲ್ಲಾ. ಮಳೆಗಾಲದಲ್ಲಿ ದೋಣಿ ಬಿಡುವಾಗ ಜೊತೆಯಲ್ಲಿದ್ದವನು, ತರಗತಿಯಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದಾಗ ಜೊತೆಯಲ್ಲಿ ನಿಂತವನು, ಸೈಕಲ್‍ನಲ್ಲಿ ಡಬಲ್ ರೈಡ್ ಮಾಡಿದವನು, ಮಾವಿನ ಮರಕ್ಕೆ ಕಲ್ಲು ಹೊಡೆಯುವಾಗ ಜೊತೆಯಲ್ಲಿದ್ದವನು, ಇನ್ನೊಬ್ಬನಿಗೆ ಹೊಡೆಯುವಾಗ ಕೈ ಸೇರಿಸಿದವನು, ಹುಡುಗಿಯರಿಗೆ ಲೈನ್ ಹೊಡೆಯುವಾಗ ಸಾಥ್ ಕೊಟ್ಟವನು, ಜಾತ್ರೆಯಲ್ಲಿ ಜೊತೆಯಲ್ಲಿ ಸುತ್ತಿದವನು, ಕ್ಲಾಸಿಗೆ ಬಂಕ್ ಮಾಡುವಾಗ ಹಿಂದೆ ಬಂದವನು, ಪರೀಕ್ಷೇಯಲ್ಲಿ ದಾರಿ ತೋರದಾಗ ದಾರಿ ತೋರಿಸಿದವನು, ಹೋಮ್‍ವರ್ಕ ಕಾಫಿ ಹೊಡೆಯಲು ಕೊಟ್ಟವನು. ಪ್ರವಾಸಗಳಲ್ಲಿ ಜೊತೆಗಿದ್ದವನು, ಲಾಂಗ್ ರೈಡನಲ್ಲಿ ಹಿಂದೆ ಕೂತವನು, ಸೆಲ್ಪಿಗೆ ಪೋಸ್ ಕೊಟ್ಟವನು, ಸಿನಿಮಾ ನೋಡಲಿಕ್ಕೆ ಜೊತೆಗೆ ಕೂತವನು, ಬಸ್ಸಿನ ಪುಟ್‍ಬೋರ್ಡನಲ್ಲಿ ಜೊತೆಗೆ ನೇತಾಡಿದವನು ಇನ್ನೂ ಅನೇಕ. 

          ಸ್ನೇಹ ಅಂದ್ರೆ ಹಾಗೆ ಯಾರ ಬಳಿಯೂ ಹೇಳಲಾಗದನ್ನು ಫ್ರೇಂಡ್ ಬಳಿ ಹೇಳಿಕೊಳ್ತೇವೆ. ಕಷ್ಟ ಅಂದಾಗ ಮನೆಯವರು ಬರದಿದರೂ ಸ್ನೇಹಿತರು ಸಹಾಯಕ್ಕೆ ಬರುತ್ತಾರೆ. ಬೇರೆ ಬೇರೆಯಾಗಿ ಹುಟ್ಟುತ್ತಿವಿ ಆದರೆ ಫ್ರೇಂಡಶಿಪ್ ಅನ್ನೋ ಒಂದು ಬಂಧನ ಎಲ್ಲರನ್ನೂ ಒಂದಾಗಿಸುತ್ತೆ,ರಕ್ತ ಸಂಬಂಧಕ್ಕಿಂತಾ ಮಿಗಿಲಾಗತ್ತೆ.

          ಶಾಲಾ,ಕಾಲೇಜುಗಳು ಸ್ನೇಹದ ಕೇಂದ್ರಸ್ಥಾನಗಳು. ಸ್ನೇಹಿತರಿಲ್ಲದ ನಮ್ಮ ಬಾಲ್ಯವನ್ನು,ಶಾಲಾ ದಿನಗಳನ್ನು ನೆನಪಿಸಿಕೊಳ್ಳುವುದೇ ಅಸಾಧ್ಯ. ಸ್ನೇಹಿತರ ಗುಂಪಿನಲ್ಲಿ ಮಾಡೋ ಮೋಜು ಮಸ್ತಿ,ಪರಸ್ಪರ ಕಾಲೆಳೆಯೋದು,ಟೀಚರ್ಸಗೆ ಕೊಡುತ್ತಿದ್ದ ಕ್ವಾಟ್ಲೆಗಳು,ಜಗಳವಾಡಿಕೊಂಡು ಬೇರೆಯಾಗುವುದು,ಮತ್ತೆ ಒಂದಾಗುವುದು,ಇನ್ನೊಂದು ಗುಂಪಿನೊಂದಿಗೆ ಆಗುತ್ತಿದ್ದ ಜಗಳಗಳನ್ನು ನೆನಪಿಸಿಕೊಂಡರೆ ಇನ್ನೊಮ್ಮೆ ಸಿಗಬಾರದಿತ್ತಾ ಆ ಕಾಲೇಜು ಲೈಪ್ ಅನಿಸುತ್ತೆ. ಕಾಲೇಜು ಲೈಪ್ ಆದ ಮೇಲೆ ಸ್ನೇಹಿತರು ಬೇರೆಯಾಗದಿರಲೆಂದು ವಾಟ್ಸಆಪ್,ಹೈಕ್,ಫೇಸಬುಕ್‍ಗಳು ತುಂಬಾ ಸಹಾಯಮಾಡುತ್ತವೆ. ತಮ್ಮದೇ ಒಂದು ಗ್ರೂಪ್ ಮಾಡಿ ಅದರಲ್ಲಿ ನಮ್ಮ ಕೀಟಲೆಯನ್ನು ಮುಂದುವರಿಸಬಹುದು.

          ಹಾಗೆಯೇ ಸ್ನೇಹಿತರನ್ನು ಆರಿಸಿಕೊಳ್ಳುವುದು ಸಹ ಮುಖ್ಯವಾಗುತ್ತೆ. ನಮ್ಮ ಸ್ನೇಹಿತರ ಗುಂಪನ್ನು ನೋಡಿ ನಮ್ಮನು ಅಳೆಯುತ್ತಾರೆ. ಸಜ್ಜನರ ಸಂಗ ಒಳ್ಳೆದಾರಿಯನ್ನು, ದುರ್ಜನರ ಸಂಗ ಕೆಟ್ಟದಾರಿಯನ್ನು ತುಳಿಸುತ್ತೆ. ಸ್ನೇಹಕ್ಕೂ ಸಹ ಮೋಸ ನಡೆಯುತ್ತೆ. ಅಪಾರವಾಗಿ ನಂಬಿದ ಸ್ನೇಹಿತ ಬೆನ್ನಿಗೆ ಚೂರಿ ಹಾಕಿದಾಗ ತುಂಬಾ ನೋವಾಗತ್ತೆ. ಹಾಗಾಗಿ ಯಾರಿಗಾದ್ರೂ ಸ್ನೇಹಹಸ್ತ ಚಾಚುವ ಮುನ್ನ ಯೋಚಿಸಿ.

          ಕಾಲೇಜು ದಿನಗಳಲ್ಲಿ ಎಲ್ಲರೂ ಕೂಡಿ ಟ್ರಿಪ್‍ಗಳನ್ನು ಪ್ಲಾನ್ ಮಾಡ್ತಿವಿ. ಆದ್ರೆ ಕಾಲೇಜ ಆದ ಮೇಲೆ ಎಲ್ಲರೂ ಒಂದಾಗಲಿಕ್ಕೆ ಪ್ಲಾನ್ ಮಾಡ್ತಿವಿ. ಒಬ್ಬ ಸ್ನೇಹಿತ ನಮ್ಮ ಜೊತೆ ಜಗಳವಾಡಿ ದೂರಹೋಗಿ,ಪುನಃ ನಮ್ಮ ಬಳಿ ಬರುತ್ತಾನೆ ಅಂದ್ರೆ ಅವನಿಗೆ ಬೇರೆ ಯಾರು ಫ್ರೇಂಡ್ಸ್ ಇಲ್ಲ ಅಂತಾ ಅಲ್ಲಾ. ಅವನಿಗೆ ನಾವು,ನಮ್ಮ ಸ್ನೇಹ ಅಷ್ಟು ಮುಖ್ಯ ಅಂತಾ. ಸ್ನೇಹವನ್ನು ಕಡಿದುಕೊಳ್ಳುವುದಕ್ಕಿಂತ ಮುಂಚೆ ನೂರು ಸಾರಿ ಯೋಚಿಸಿ,ಸಣ್ಣ ಪುಟ್ಟ ಕಾರಣಕ್ಕೆ ಸ್ನೇಹಿತರನ್ನು ದೂರಮಾಡಿಕೊಳ್ಳಬೇಡಿ. ಫ್ರೇಂಡಶಿಪ್ ಡೇ ಅನ್ನೋದು ಕೇವಲ ಆಗಷ್ಟ ಮೊದಲ ಭಾನುವಾರಕ್ಕೆ ಮಾತ್ರ ಸೀಮಿತವಾಗದೇ ಇರಲಿ. ಸಿನಿಮಾಗಳಲ್ಲಿ, ಎಲ್ಲಾದರೂ ಹೋಗುವಾಗ ತುಂಬಾ ಹುಡುಗರು ಗುಂಪಿನಲ್ಲಿ ಇರೋದನ್ನು,ತಮಾಷೆ ಮಾಡುವುದನ್ನು ನೋಡಿದಾಗ ಪ್ರತಿಯೊಬ್ಬ ಸ್ನೇಹ ಜೀವಿಯೂ ಅಂದುಕೊಳ್ಳುವ ಒಂದು ಮಾತು "ನಮಗೂ ಇದೇ ತರಹದ ಗೆಳೆಯರಿದ್ರು.....!!!"

-ಬರ್ವೆ 


Comments

Post a Comment

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)