ಯಶಸ್ವೀ ಪ್ರೇಮ ಕಥೆಗಳೇಕೆ ವಿರಳ.....!!?




          ಪ್ರೀತಿ ಎಂದರೆ ಹಾಗೇ ಬರಡಾದ ಮನಸ್ಸಿಗೆ ನೀರಿನ ಸಿಂಚನ ಕೋಟಿ ಕೋಟಿ ಜನರ ನಡುವೆ ಒಂದು ಸಂಬಂಧವನ್ನು ಬೆಸೆದಿದ್ದು ಈ ಪ್ರೀತಿ ಎಂಬ ಎರಡಕ್ಷರದ ಪದ. ಪ್ರೀತಿಯಲ್ಲಿ ನಾನಾ ವಿಧಗಳಿವೆ ತಂದೆ ತಾಯಿ ಮತ್ತು ಮಕ್ಕಳ ನಡುವಿನ ಪ್ರೀತಿ ಹುಡುಗ, ಹುಡುಗಿಯ ನಡುವಿನ ಪ್ರೀತಿ, ಪ್ರಾಣಿಗಳ ಮತ್ತು ಮನುಷ್ಯರ ನಡುವಿನ ಪ್ರೀತಿ ಹೀಗೆ ಅನೇಕ ಆದರೂ ಈ ಲೋಕಕ್ಕೆ ಪ್ರೀತಿ ಎಂದಾಕ್ಷಣ ನೆನಪಾಗುವುದು ಹುಡುಗ ಹುಡುಗಿ ನಡುವೆ ಬರುವ ಪ್ರೀತಿ. ಇಂತಹ ಪ್ರೇಮಕಥೆಗಳು ಕಾಲೇಜು ಲೈಫ್‍ನಲ್ಲಿ ತುಂಬಾ ಸಿಗುತ್ತದೆ. ನಾನು ಕಲಿತಿದ್ದು ಇಂಜಿನಿಯರಿಂಗ್ ಕಾಲೇಜಿನಲ್ಲಿ “ನೋಡು ಮಗ ಅವಳು ನನಗೆ ಲೈನ್  ಕೊಡ್ತ ಇದ್ದಾಳೆ” .”ಎನೋ ಗೊತ್ತಿಲ್ಲ ಮಚ್ಚಾ ಅವಳ ಜೋತೆ ದಿನಕ್ಕೊಂದು ಸರಿ ಮಾತಾಡದಿದ್ದರೇ ಆಗೋದೆ ಇಲ್ಲಾ”. “ನನ್ನ ಹಕ್ಕಿಗೆ ಬೇರೆಯವನು ಕಾಳ್ ಹಾಕ್ತಾ ಇದ್ದಾನೆ ಮಚ್ಚಾ”. ಇಂತಹ ಮಾತುಗಳನ್ನು ನನ್ನ ಪ್ರೇಂಡ್ಸ್ ಆಡೋದು ಕೇಳಿದ್ದೇನೆ.

          ಈಗಿನ ಕಾಲದಲ್ಲಿ ಕಾಲೇಜಿಗೆ ಸೇರಿ ರ್ಯಾಂಕ್ ಬರದಿದ್ದರೂ ಪರವಾಗಿಲ್ಲ ಆದ್ರೆ ಲವ್ ಮಾಡೋದು ಕಡ್ಡಾಯವಾದ ಹಾಗೆ ಆಗಿಬಿಟ್ಟಿದೆ. ಪ್ರೀತಿಗೆ ತನ್ನದೇ ಆದ ಒಂದು ಸುಂದರವಾದ ಅರ್ಥ ಇದೆ. ಆದರೆ ಈಗಿನ ಪ್ರೇಮಿಗಳನ್ನು ನೋಡಿದ್ರೆ ಯಾರಿಗೂ ಇದರರ್ಥ ತಿಳಿದಿರೋ ಹಾಗೆ ಕಾಣ್ತಾ ಇಲ್ಲಾ. ಒಂದು ಮಾತು ತಿಳಿದುಕೊಳ್ಳಿ ಗೆಳೆಯರೇ ಪ್ರೀತಿ ಮಾಡೋದಲ್ಲ ಪ್ರೀತಿ ಆಗೋದು. ಮೆಟ್ರೋ ಅಷ್ಟೇ ಫಾಸ್ಟ್  ಆಗಿರೋ ಈ ಸಾಫ್ಟ್ವೇರ್  ಯುಗದಲ್ಲಿ, ಮುಂಗಾರು ಮಳೆಯಲ್ಲಿ ಮೊಳಕೆಯೊಡೆಯುವ ಪ್ರೇಮಕತೆಗಿಂತ ಅದರ ಪ್ರವಾಹದಲ್ಲಿ ಕೊಚ್ಚಿ ಹೋಗುವ ಪ್ರೇಮಕತೆಗಳೇ ಜಾಸ್ತಿ, ಸೋಮವಾರ ಮಿಟೂ, ಮಂಗಳವಾರ ಚಾಟೂ, ಬುಧವಾರ ಟ್ರೀಟೂ, ಗುರುವಾರ ಡೇಟೂ, ಶುಕ್ರವಾರ ಡುಯೆಟೂ, ಶನಿವಾರ ಕಟ್ ಆಗುವ ಪ್ರೇಮಕಥೆಗಳ ನಡುವೆ ಎಲ್ಲೋ ನೈಜ ಪ್ರೀತಿ ಇಗಲೋ, ಆಗಲೋ ಹಿಟ್ ಆಗುವ ಸಿನಿಮಾ ತರಹ ಆಗಿದೆ. ನಾನು ಅನೇಕ ಪ್ರೇಮಕಥೆಗಳನ್ನು ಸಿನಿಮಾತರಹ ಕಣ್ಣಾರೆ ನೋಡಿದ್ದೇನೆ. ಅದರಲ್ಲಿ ಹಿಟ್ಆಗಿದ್ದು ಒಂದೋ, ಎರಡೋ, ಫೋನ್‍ನಲ್ಲೇ ಹುಟ್ಟಿ ಫೋನ್‍ನಲ್ಲೇ ಸಾಯೋ ಪ್ರೇಮಕಥೆಗಳೇ ಜಾಸ್ತಿ.

          ಒಂದು ಹುಡುಗ ಮತ್ತು ಹುಡುಗಿ ಪ್ರೀತಿಯಲ್ಲಿ ಬಿದ್ದರೆ ಸಾಕು ಪೋನಿನಲ್ಲಿ ಅವರದ್ದೇ ಆದ ಪ್ರಪಂಚವನ್ನು ಕಟ್ಟಿಕೊಂಡು ಬಿಡುತ್ತಿದ್ದರು. ನನಗೊಬ್ಬ ಒಳ್ಳೇ ಫ್ರೇಂಡ್ ಇದ್ದ  ನನ್ನ ಜೊತೆ, ಬೇರೆ ಗೆಳೆಯರ ಜೊತೆ ತುಂಬ ಚೆನ್ನಾಗಿಯೇ ಇದ್ದ. ಒಂದು ದಿನ ಅಪ್ಪಿ ತಪ್ಪಿ ಪ್ರೀತಿಲಿ ಬಿದ್ದು ಬಿಟ್ಟ, ಅವತ್ತಿನಿಂದ ಅವನಾಯಿತು ಅವನ ಪೋನ್ ಆಯಿತು. ಎಲ್ಲರ ಜೊತೆ ತುಂಬಾ ಚೆನ್ನಾಗಿ ಮಾತಾಡಿಕೊಂಡಿದ್ದ ಹುಡುಗ ಒಂದೇ ಸಾರಿ ನನಗೆ ಯಾರೂ ಬೇಡ, ನಾನಾಯಿತು ನನ್ನ ಹುಡುಗಿ ಆಯಿತು ಅನ್ನೋ ಸ್ಥಿತಿಗೆ ಬಂದ. ಫ್ರೆಂಡ್ಸ್  ನ್ನು  ದೂರ ಮಾಡಿದ , ಹುಡುಗಿಗೆ ನಿರ್ಭಂಧ ಹೇರಲಿಕ್ಕೆ ಶುರುಮಾಡಿದ. ಅವಳಿಗೂ ಅವಳ ಫ್ರೆಂಡ್ಸ್  ನ್ನು ದೂರ ಮಾಡಲು ಹೇಳಿದ ಕೊನೆಗೆ ಅವಳಿಗೂ ಇವನ ಕಾಟ ತಾಳಲಾರದೇ ಅವಳೂ ಗುಡ್ ಬಾಯ್ ಹೇಳಿದ್ಲು. ಕೊನೆಗೆ ಪ್ರೇಂಡ್ಸು ಇಲ್ಲದೇ, ಹುಡುಗಿಯೋ ಇಲ್ಲದೇ ಅವನ ಪಾಡು ಹೇಳತೀರದಾಯಿತು.

          ಫ್ರೇಂಡ್ಸ್ ಒಂದು ಮಾತು ನೆನಪಿಟ್ಟುಕೊಳ್ಳಿ ‘ನಂಬಿಕೆ’ ಇಲ್ಲದೇ ಯಾವ ಪ್ರೇಮಕಥೆಗಳು ಯಶಸ್ವಿಯಾಗುದಿಲ್ಲ. ಪ್ರೀತಿ ರಥಕ್ಕೆ ನಂಬಿಕೆ ಎನ್ನುವುದು ಚಕ್ರದ ತರಹ. ಹುಡುಗಿ ಅಥವಾ ಹುಡುಗನ ಮೇಲೆ ನಂಬಿಕೆ ಇಲ್ಲದೇ ನೀವೂ ಎಷ್ಷೇ ಮಾತಾಡಿದರೂ ನಿಮ್ಮ ಕರೆನ್ಸಿ ಖಾಲಿಯಾಗುತ್ತೇ ವಿನಃ ಪ್ರೀತಿ ಹುಟ್ಟಲ್ಲ. ಅವಳು ಅಥವಾ ಅವನು ನನಗೆ ಸಿಕ್ಕೇ  ಸಿಕ್ತಾನೆ/ ಸಿಕ್ತಾಳೆ ಅನ್ನೋ ನಂಬಿಕೆ ನಿಮ್ಮಲ್ಲಿ ಧೃಡವಾಗಿದ್ರೆ ಒಂದು ದಿನಾ ಅಲ್ಲಾ ಒಂದು ವರ್ಷ ಮಾತಾಡದಿದ್ದರೂ ಏನೂ ಆಗಲ್ಲ.

          ಟೀನೇಜಿನಲ್ಲಿ ಹುಟ್ಟೋ ಅಟ್ರಾಕ್ಷನ್ ಅನ್ನು ಲವ್ ಅಂತ ತಪ್ಪು ಕಲ್ಪನೆ ಮಾಡಿಕೊಳ್ಳೊ ಪ್ರೇಮಿಗಳನ್ನು ನೋಡಿ.  ನನಗೆ ಯಾಕೆ ಲವರ್ ಇಲ್ಲಾ ಅಂತ ಸಿಂಗಲ್ ಆಗಿರೋ ಅವರು ಯೋಚನೆ ಮಾಡೋ ಬದಲು ಅವರನ್ನು ನೋಡಿ ಸುಮ್ಮನೆ ನಕ್ಕು ಸುಮ್ಮನಾಗಿ ಬಿಡಿ. ಮತ್ತೆ ಮನಸ್ಸಿಗೆ ಹೇಳಿ ನನಗಂತಾ ಒಬ್ಬಳು ಹುಡುಗಿ ಹುಟ್ಟಿರುತ್ತಾಳೆ. ಅವಳು ಸಿಗೋ ತನಕ ಕಾಯ್ತಿನಿ. ಕೊನೆಯದಾಗಿ ಒಂದು ಕಿವಿಮಾತು ನಾವು ಪ್ರೀತಿ ಮಾಡುವವರನ್ನು ಪ್ರೀತ್ಸೋದಕ್ಕಿಂತ, ನಮ್ಮನ್ನು ಪ್ರೀತಿ ಮಾಡುವವರನ್ನು ಪ್ರೀತಿ ಮಾಡಿದರೆ ಲೈಫ್ ತುಂಬಾ ಚೆಂದ ಇರುತ್ತಂತೆ”

ಯೋಚನೆ ಮಾಡಿ.............


-ಬರ್ವೆ


Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)