ನೆಟ್ ವರ್ಕ್ ಇಲ್ಲದ ಊರಿನಲ್ಲೊಂದು ಯಕ್ಷಗಾನ…!?
ಯಕ್ಷಗಾನ ಕಲಾವಿದರು ತಮ್ಮ ತಮ್ಮ ಮೇಳಗಳನ್ನು ಸೇರಿಕೊಂಡು ವರ್ಷದ ತಿರುಗಾಟದ ಆರಂಭದ ಹೊಸ್ತಿ ನಲ್ಲಿದ್ದಾರೆ. ಹೋದ ವರ್ಷ ಒಂದು ಮೇಳದಲ್ಲಿದ್ದವರು, ಈ ವರ್ಷ ಇನ್ನೊಂದು ಮೇಳ ಸೇರಿಕೊಂಡಿರುವುದು ಒಂದು ಕಡೆ ಆದರೆ, ಒಂದೇ ಸಂಸ್ಥೆಯಿಂದ ನಡೆಸಲ್ಪಡುವ ಮೇಳಗಳಲ್ಲಿ ಕಲಾವಿದರ ಬದಲಾವಣೆ ಇನ್ನೊಂದು ಕಡೆಯಿಂದ ಸುದ್ದಿ ಮಾಡುತ್ತಾ ಇದೆ. “ಸಾಕಪ್ಪ, ಇನ್ನು ಸ್ವಲ್ಪ ವಿಶ್ರಾಂತಿ ಪಡೆಯೋಣ ” ಅಂತ ಕೆಲವರು ಮೇಳಗಳನ್ನು ಬಿಟ್ಟು ಅತಿಥಿ ಕಲಾವಿದರ ಸ್ಥಾನವನ್ನು ಅಲಂಕರಿಸಿದ್ದಾರೆ. ಡೇರೆ ಮೇಳಗಳು ಈ ವರ್ಷ ಜನರನ್ನು ರಂಜಿಸಲು ಯಾವ ನೂತನ ಪ್ರಸಂಗಗಳೊಂದಿಗೆ ದಾಂಗುಡಿ ಇಡುತ್ತಿವೆ ಎಂದು ಜನ ಕಾತರರಾಗಿದ್ದಾರೆ. “ಏನಪ್ಪಾ ಇದು, ನೆಟ್ ವರ್ಕಿಗೂ ಯಕ್ಷಗಾನಕ್ಕೂ ಏನು ಸಂಬಂಧ ?” ಅಂತ ಶೀರ್ಷಿಕೆ ಓದಿದವರಿಗೆ ಒಂದು ಸಂದೇಹ ಬಂದಿರಬಹುದು. ಆಧುನಿಕ ತಂತ್ರಜ್ಞಾನದ ಮಾಯಾಲೋಕದಲ್ಲಿ ಮುಳುಗಿರುವಂತಹ ಪ್ರಸಕ್ತ ಸಮಾಜದಲ್ಲಿ ಅನೇಕ ಪಾರಂಪರಿಕ ಕಲಾ ಪ್ರಕಾರಗಳ ಪರಿಚಯ ಇಲ್ಲದಾಗಿದೆ. ಹಾಗಾಗಿ ನೆಟ್ ವರ್ಕಿಗೂ ಯಕ್ಷಗಾನಕ್ಕೂ ಇರುವ ಸಂಬಂಧ ಸ್ವಲ್ಪ ಹೊತ್ತಲ್ಲೇ ನಿಮಗೆ ಗೊತ್ತಾಗುತ್ತೆ. ನನ್ನ ಆತ್ಮೀಯ ಗೆಳೆಯನೊಬ್ಬನ ಮನೆಯಲ್ಲಿ ಯಕ್ಷಗಾನ ಹರಕೆ ಬಯಲಾಟವನ್ನು ಆಯೋಜಿಸಿದ್ದರು. ಗೆಳೆಯ ತುಂಬಾ ಆತ್ಮೀಯ ನಾದ್ದರಿಂದ ಹೋಗಲೇಬೇಕಾದ ಪರಿಸ್ಥಿತಿ ಎದುರಾಯಿತು. ಮಧ್ಯಾಹ್ನದ ಭೋಜನಕ್ಕೆ ಹೋಗಲು ಸಾಧ್ಯವಾಗದೆ ಇದ್ದಿದ್ದರಿಂದ ಸಂಜೆ ಹೋಗಿ ಮುಖ ತೋರಿಸಿ ಬರೋಣ ಅಂತ ಸುಮಾರು ೪ ಗಂಟೆ ಹೊತ್