ನಿನ್ನ ಮದುವೆ ಯಾವಾಗ...?
ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರ ಮದುವೆಗೆ ತೆರಳಿದಾಗ ಒಂದು ಆಶ್ಚರ್ಯ ಕಾದಿತ್ತು. ಇಷ್ಟು ದಿನಾ "ನಿನಗೆ ಮಾರ್ಕ್ ಎಷ್ಟು ?", "ಏನು ಓದುತ್ತಾ ಇರೋದು ?", "ಯಾವ ಕಾಲೇಜು ?", "ಎಲ್ಲಿ ಕೆಲಸ ಮಾಡಿಕೊಂಡಿರೋದು ?", "ಸಂಬಳ ಎಷ್ಟು ?" ಅಂತೆಲ್ಲಾ ಕೇಳುತ್ತಿದ್ದ ಸಂಬಂಧಿಕರ ಪ್ರಶ್ನೆ ಅವತ್ತು ಬೇರೆ ಆಗಿತ್ತು. ಭೇಟಿಯಾದ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡಪ್ಪ, ದೊಡಮ್ಮ, ಅತ್ತೆ, ಮಾವ ಯಾರು ಸಿಕ್ಕಿದ್ರು "ಮುಂದೆ ನಿಂದೆ ಮದುವೆ", "ನಿನ್ನ ಮದುವೆ ಯಾವಾಗ ?", "ನೀನೆ ನೋಡಿಕೊಂಡಿದ್ಯೋ, ಅಥವಾ ತಂದೆ ತಾಯಿಗೆ ಬಿಟ್ಟಿದ್ಯೋ" ಅನ್ನೋ ಮಾತುಗಳು ಹೆಚ್ಚಾಗಿತ್ತು. ಇಂತಹಾ ಮಾತುಗಳನ್ನು ಕೇಳಿ ಮನಸ್ಸು ಕುಣಿತಾ ಇದ್ರೂ, ತೋರಿಸಿಕೊಳ್ಳಲಿಕ್ಕೆ ಆಗ್ತಾ ಇರಲಿಲ್ಲಾ. ಇಂತಹಾ ಪ್ರಶ್ನೆಗಳು ನನಗೆ ಮಾತ್ರ ಅಲ್ಲಾ, ಶಿಕ್ಷಣ ಮುಗಿಸಿ ಒಳ್ಳೆಯ ಕೆಲಸದಲ್ಲಿರುವ, ೨೩ ರಿಂದ ೨೮ ವರ್ಷ ವಯಸ್ಸಿನಲ್ಲಿರುವ ಹುಡುಗ/ಹುಡುಗಿಯರಿಗೆ ಸರ್ವೇ ಸಾಮಾನ್ಯ. ನನ್ನಂತೆ ಈ ವಯೋಮಿತಿಯಲ್ಲಿರುವ ಅನೇಕರಿಗೆ ಕಾಡುತ್ತಿರುವ ಪ್ರಶ್ನೆ ಒಂದೇ "ಮದುವೆ ಆಗಲು ಸರಿಯಾದ ವಯಸ್ಸು ಯಾವುದು ?". ಈ ಸಮಯದಲ್ಲಿ ಶಿಕ್ಷಣ ಮುಗಿಸಿ, ಒಂದು ಕೆಲಸ ಹಿಡಿದು ಒಂದು ಹಂತಕ್ಕೆ ಬಂದ್ವೀ ಅಂತಾ ಹೇಳ್ಬೇಕಾದ್ರೆ "ಮದುವೆ" ಅನ್ನುವ ಪದ ನಮ್ಮ ಜೀವನದ