Posts

Showing posts from June, 2018

ಬೆಟ್ಟಗಳ ನಗರ ಚಾಮರಾಜನಗರ

Image
ಕರ್ನಾಟಕದ ದಕ್ಷಿಣದ ತುದಿಯಲ್ಲಿರುವ ಜಿಲ್ಲೆಯೆ ಚಾಮರಾಜನಗರ. ಮೈಸೂರಿನ ರಾಜರಾಗಿದ್ದ ಒಂಬತ್ತನೆಯ ಚಾಮರಾಜ ಒಡೆಯರ್ ನಿಂದಾಗಿ ಈ ಜಿಲ್ಲೆಗೆ ಚಾಮರಾಜನಗರ ಎನ್ನುವ ಹೆಸರು ಬಂತು. ೧೯೯೮ ರಲ್ಲಿ ಮೈಸೂರು ಜಿಲ್ಲೆಯಿಂದ ಇದು ಪ್ರತ್ಯೇಕಗೊಂಡು ಸ್ವತಂತ್ರ ಜಿಲ್ಲೆಯಾಯಿತು. ಯಳಂದೂರು, ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ಹಾಗೂ ಹನೂರು ಎಂಬ ತಾಲ್ಲೂಕುಗಳನ್ನು ಒಳಗೊಂಡಿದೆ. ಚಾಮರಾಜೇಶ್ವರ ದೇವಸ್ಥಾನ ಚಾಮರಾಜನಗರದ ಇತಿಹಾಸ ನೋಡುವುದಾದರೆ ಈ ಸ್ಥಳ ಮುಂಚೆ ಶ್ರೀಅರಿ ಕೊಟ್ಟಾರ ಎಂದು ಹೆಸರಾಗಿತ್ತು. ಮೈಸೂರಿನ ಅರಸರಾಗಿದ್ದ ಚಾಮರಾಜ ಒಡೆಯರ್ ಇಲ್ಲಿ ಜನಿಸಿದ್ದರಿಂದ ಈ ಸ್ಥಳವನ್ನು ಚಾಮರಾಜನಗರ ಎಂದು ಪುನರ್ ನಾಮಕರಣ ಮಾಡಲಾಯಿತು. ಹೊಯ್ಸಳರ ದೊರೆಯಾದ ಗಂಗರಾಜನ ಸೇನಾ ಪತಿಯಾದ ಪುನಿಸ ದಂಡನಾಯಕ ವಿಜಯ ಪಾರ್ಶ್ವನಾಥ ಬಸದಿಯನ್ನು ಇಲ್ಲಿ ೧೧೧7 ರಲ್ಲಿ ನಿರ್ಮಿಸಿದನು. ಮಲೆ ಮಹದೇಶ್ವರ ಬೆಟ್ಟ ಈ ಜಿಲ್ಲೆ ಪಶ್ಚಿಮದಲ್ಲಿ ಹಾಗೂ ಉತ್ತರದಲ್ಲಿ ಮೈಸೂರು, ಈಶಾನ್ಯದಲ್ಲಿ ಮಂಡ್ಯ ಮತ್ತು ರಾಮನಗರ, ಪೂರ್ವದಲ್ಲಿ ಧರ್ಮಪುರಿ ಜಿಲ್ಲೆ (ತಮಿಳುನಾಡು), ಆಗ್ನೇಯದಲ್ಲಿ ಸೇಲಂ ಮತ್ತು ಈರೋಡ್ ಜಿಲ್ಲೆ (ತಮಿಳುನಾಡು), ದಕ್ಷಿಣದಲ್ಲಿ ನೀಲಗಿರಿ ಜಿಲ್ಲೆ (ತಮಿಳುನಾಡು), ನೈಋತ್ಯದಲ್ಲಿ ವೈಯನಾಡ್ ಜಿಲ್ಲೆ (ಕೇರಳ) ದೊಂದಿಗೆ ತನ್ನ ಗಡಿ ಹಂಚಿಕೊಂಡಿದೆ. ಎನ್ಎಚ್ ೨೦೯ ಬೆಂಗಳೂರಿನಿಂದ ತಮಿಳುನಾಡನ್ನು ಸಂಪರ್ಕಿಸುವ ಹೆದ್ದಾರಿ ಈ ಜಿಲ್ಲೆಯ ಮೂಲಕ ಹಾದು ಹೋಗುತ್ತದೆ. ಅ