ನಿನ್ನ ಮದುವೆಯ ಕರೆಯೋಲೆ
ಭಾಗ - ೧ ಸುಂಯ್ ಎಂದು ಬಿಸುವ ತಂಗಾಳಿ ಜೊತೆ ಮೇ ತಿಂಗಳಿನಲ್ಲಿ ವರುಣ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಹಾಜರಾಗಿದ್ದ. ಏಪ್ರಿಲ್ ಮೇ ಬಂತು, ಮದುವೆ ಸೀಸನ್ ಶುರುವಾಯ್ತು, ಇನ್ನು ಯಾರ್ ಗರ್ಲ್ ಫ್ರೆಂಡ್ ಯಾರ ಹೆಂಡ್ತಿ ಆಗ್ತಾಳೋ, ಯಾರ್ ಬಾಯ್ ಫ್ರೆಂಡ್ ಯಾರ ಗಂಡ ಆಗ್ತಾನೋ, ಅನ್ನೋ ಮಿಮ್ಸ್ ಓದಿಕೊಂಡು ನಾನು ಕಾಫಿ ಡೇಯಲ್ಲಿ ಕೂತ್ಕೊಂಡು ಇದ್ದೇ. ತಕ್ಷಣ ನನ್ನ ಮೊಬೈಲ್ಗೆ ಒಂದು ಕಾಲ್ ಬಂತು. ಅದು ಅವಳೇ ಸಹನಾ, “ತಣ್ಣೀರುಬಾವಿ ಬೀಚ್ ಹತ್ರಾ ಬರ್ತಿಯಾ..? ಏನೋ ಮಾತಾಡ್ಬೇಕು..” ಅಂತಾ ಕರೆದ್ಲು. ತಡಮಾಡಲಿಲ್ಲ ಹುಡುಗೀರು ಕರೆದರೆ ಓಡಿ ಹೋಗುವ ಬಾಯ್ಸ್ ಗೇನು ಕಮ್ಮಿಯಿಲ್ಲ ಬಿಡಿ, ಆದ್ರೆ ನಾನು ಅಂಥವನಲ್ಲ ನಡೆದುಕೊಂಡೆ ಹೋದೆ. ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವಳು ಕರೆದಿದ್ದು ನನ್ನನ್ನು ಅವಳ ಮದುವೆಗೆ ಇನ್ವೈಟ್ ಮಾಡಲಿಕ್ಕೆ ಅಂತ. ಹುಡುಗಿಯರೇ ಹಾಗೆ ಕಣ್ರೀ ಲವ್ ಸ್ಟಾರ್ಟ್ ಮಾಡೋದು ಕಾಫಿ ಡೇಯಲ್ಲಿ , ಆದ್ರೆ ಅದನ್ನು ಎಂಡ್ ಮಾಡೋದು ಇಂಥ ಬೀಚ್ಗಳ ಹತ್ರಾ ಅಥವಾ ಹೊಳೆ ಹತ್ರ. ಶಾಕ್ ಗೆ ಹಾರ್ಕೊಂಡು ಸತ್ತರೆ ಸಾಯಲಿ ಅಂತ ಇರಬಹುದು..? ನನಗಂತೂ ಗೊತ್ತಿಲ್ಲ. ಹಾಗಂತ ಅವಳು ನನ್ನ ಲವರ್ ಅಲ್ಲಾ, ನಾನು ಅವಳ ಬಾಯ್ ಫ್ರೆಂಡ್ ಅಲ್ಲಾ, ನಾನು ಅವಳ ಒಬ್ಬ ಬೆಸ್ಟ್ ಫ್ರೆಂಡ್ ಅಷ್ಟೇ. ಅವಳು ಹೋದ ಮೇಲೆ ಎಲ್ಲಿಂದಲೋ ಗೊತ್ತಿಲ್ಲ ಮನಸ್ಸಲ್ಲಿ, ಕಣ್ಣಲ್ಲಿ, ಹೊರಗಡೆ ಕೂಡ ಮೂವಿಯಲ್ಲಿ ಆಗುವ ತರಹ ಜೋರಾಗಿ ಮಳೆ ಬಂತು. ಹಾಗಾದ್ರೆ ನನ್ನ ಹಾಗೂ ಸಹನನ ಪರಿಚಯ ಆಗಿದ್ದೇ