ಜೋಳದ ರೊಟ್ಟಿ ಮತ್ತು ಕೊಬ್ಬರಿಯೆಣ್ಣೆ (ಇದು ಹುಬ್ಬಳ್ಳಿ ಹೈದನ ಪ್ರೇಮಕಥೆ).
ಮೂಲ : once a upon a time in Infosys ಲೇಖಕರು : ಅಂಕುರ್ ಕೌಶಲ್. ಕನ್ನಡಕ್ಕೆ : ಗಣೇಶ ಬರ್ವೆ ಮಣೂರು . ಮಳೆಗಾಲದಲ್ಲಿ, ಸಂಜೆ ಹೊತ್ತಲ್ಲಿ ರಸ್ತೆ ಪಕ್ಕ ಇರುವ ಕಾಫಿ ಶಾಪ್ ನಲ್ಲಿ ಬಿಸಿ ಬಿಸಿ ಕಾಫಿ ಹೀರುವಾಗ ಆಪ್ತ ಗೆಳೆಯ ಹೇಳಿದ ಒಂದು ಇಂಗ್ಲಿಷ್ ಕಥೆ. ಅಂತರ್ಜಾಲದಲ್ಲಿ ಜಾಲಾಡಿ ಕಥೆಯನ್ನು ಹುಡುಕಿ ಓದಿದಾಗ ಅನಿಸಿದ್ದು ಒಂದೇ ಇದನ್ನು ಕನ್ನಡದ ಓದುಗರಿಗೆ ಉಣ ಬಡಿಸಿದರೆ ಹೇಗಿರುತ್ತೆ ಅಂತಾ. ಹತ್ತು ವರ್ಷ ಹಳೆಯ 'ಒನ್ಸ್ ಅಪೋನ್ ಅ ಟೈಂ ಇನ್ ಇನ್ಫೋಸಿಸ್' ಅನ್ನುವ ಇಂಗ್ಲಿಷ್ ಕಥೆಯನ್ನು, ನೈಜತೆಗೆ ಧಕ್ಕೆ ಬರದಂತೆ, ಕನ್ನಡದ ಪರಿಸರಕ್ಕೆ ಹೊಂದುವಂತೆ, ಕನ್ನಡಕ್ಕೆ ಭಾಷಾಂತರಿಸುವ ಸಣ್ಣ ಪ್ರಯತ್ನ. ಬನ್ನಿ ಕಥೆ ಒಳಗೆ ಹೋಗೋಣ. (ಓದುವ ಮುನ್ನ : ಮನಸ್ಸನ್ನು ಓಪನ್ ಮಾಡ್ಕೊಳಿ...ನಿಮ್ಮ ಇಯರ್ ಫೋನ್ ಹತ್ತಿರ ಇದ್ರೆ ಕನೆಕ್ಟ್ ಮಾಡ್ಕೊಳಿ...ಮೂರು ಸುಂದರವಾದ ಹಾಡುಗಳಿವೆ...ಹಾಡು ಬರೆದ ಜಾಗದಲ್ಲಿ ಅವ್ಗಳನ್ನು ಕೇಳಿ ಮುಂದೆ ಹೋಗಿ...ಈ ಕಥೆ ಒಂದು ಸುಂದರವಾದ ಸಿನಿಮಾ ನಿಮಗೆ ತೋರಿಸತ್ತೆ.) ಬೆಳ್ಳಗೆ ೧೧ ಗಂಟೆಯ ಸುಮಾರು. ನಾನು ನನ್ನ ಗಂಟು ಮೂಟೆಗಳನ್ನು ಕಟ್ಟಿಕೊಂಡು, ನನ್ನನ್ನು ಗೇಟ್ ತನಕ ಬಿಡಲಿಕ್ಕೆ ಬರುವ ವಾಹನಕೋಸ್ಕರ, ಮೈಸೂರಿನ ಇನ್ಫೋಸಿಸ್ ನಲ್ಲಿ ನನ್ನ ಹಾಸ್ಟೆಲ್ ಎದುರು ಕಾಯ್ತಾ ಇದ್ದೆ. ಹೌದು ನೀವು ಓದಿದ್ದು ಸರಿಯಾಗೇ ಇದೆ. ಇನ್ಫೋಸಿಸ್ ಭಾರತದ ಐಟಿ ದಿಗ್ಗಜಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೈಸೂರ