Posts

Showing posts from April, 2024

ಮದುವೆ ಯಾಕಾಗಬೇಕು...!?

Image
  "ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಃ "   ಎನ್ನುವ ಮಾತಿನಂತೆ   ನಮ್ಮ ಜೀವನದಲ್ಲಿ ಏನೇ ಒಂದು ಒಳ್ಳೆಯ ಘಟನೆ ನಡೆಯಬೇಕಿದ್ದರೂ ಋಣ ಬೇಕಂತೆ.   ಆದರೆ ಬದಲಾದ   ಕಾಲಘಟ್ಟದಲ್ಲಿ ಋಣಕ್ಕಿಂತ ಮಿಗಿಲಾಗಿ ವ್ಯಕ್ತಿಯ ವೈಯಕ್ತಿಕ ಭಾವನೆಗಳಿಂದ , ಇಷ್ಟ-ಕಷ್ಟಗಳಿಂದ , ಅಭಿಪ್ರಾಯಗಳಿಂದ , ನಿರ್ಧಾರಗಳಿಂದ ಮೇಲೆ ಹೇಳಿದ ಎಲ್ಲವೂ ಅಲ್ಲದಿದ್ದರೂ ಮದುವೆ ವಿಚಾರ ನಿರ್ಧರಿತವಾಗುವುದು ಕಂಡುಬರುತ್ತದೆ. ಮುಂಚೆ ಒಂದು ಕಾಲ ಇತ್ತು , ಮದುವೆ ವಯಸ್ಸಿಗೆ ಬಂದಾಗ ಮದುವೆಯ ಕನಸುಗಳು ಬೀಳುತ್ತಿದ್ದವು , ಸಮಾರಂಭಗಳಲ್ಲಿ ಸಂಬಂಧಿಕರು ಯಾರಾದರೂ “ನಿನ್ನ ಮದುವೆ ಯಾವಾಗ.. ? ” ಅಂತ ಕೇಳಿದಾಗ ಮುಖ ಕೆಂಪಾಗಿ , ಮನಸ್ಸು ಲಡ್ಡು ತಿಂತಿತ್ತು. ಆದರೆ ಇತ್ತೀಚೆಗೆ ಮನೆಯಲ್ಲಿ ಮದುವೆಯ ಮಾತನಾಡಿದರೆ ಹುಡುಗ ಹುಡುಗಿಯರ ಮುಖ ಸಣ್ಣಗಾಗುತ್ತದೆ. ಕೆಲವು ವಿದ್ಯಮಾನಗಳಿಂದ ಪ್ರಭಾವಿತನಾಗಿ , ಸ್ವಮನಸ್ಕ ವಯೋಮಾನದವರ ಮದುವೆ ಬಗೆಗಿನ ತೀರ್ಮಾನವನ್ನು ಆಲಿಸಿ , ಈ ಲೇಖನವನ್ನು ಬರೆಯುವ ಮನಸ್ಸು ಆಯಿತು.   ಒಂದು ಎಂಟು ಒಂಬತ್ತು ವರ್ಷದ ಹಿಂದೆ 2016ರ ಆಸು ಪಾಸು , ನಾನು ನನ್ನ   ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ ಜೀವನವನ್ನು ಆರಂಭಿಸಿದ ಕಾಲ. ನಮ್ಮ ಸಂಬಂಧಿಕರೊಬ್ಬರು   ಅವರ ಮಗನ ಮದುವೆ ಆಹ್ವಾನಕ್ಕೆ   ಎಂದು ನಮ್ಮ ಮನೆಗೆ ಬಂದಿದ್ದರು.   ಅವರ ಮಗ ವಯಸ್ಸಿನಲ್ಲಿ ನನಗಿಂತ ನಾಲ್ಕು ವರ್ಷ ದೊಡ್ಡವನಿದ್ದ ಅಷ್ಟೇ.   ನನಗೆ ಇನ್ನು ನಾಲ್ಕು ವರ್ಷದಲ್ಲಿ , ನಾನೂ   ಅ