ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)
ಎಲ್ ಕಣ್ ಹಾಯ್ಸರೂ ನೀರೇ ತುಂಬ್ಕಂಡಿಪ್ಪು ಸಮುದ್ರದಿಂದ ಕೂಗಳತಿ ದೂರದಲಿಪ್ಪು ಊರ್ ನಮ್ದೇ. ಊರ್ ಅಂದ್ ಮ್ಯಾಲೆ ದೇವಸ್ಥಾನ. ದೈದ್ ಮನಿ ಸಾಮಾನ್ಯ , ಹಂಗೆ ನಮ್ ಊರಂಗು ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವ್ಸ್ಥಾನ ಇತ್. ದೇವ್ಸ್ಥಾನದ ಸುತ್ತ ತೆಂಗಿನ್ ತೋಟವೆ , ಬದಿಯಂಗ್ ಪುಷ್ಕರಣಿ , ಪುಷ್ಕರಣಿ ದಂಡೆಂಗೆ ನಾಗನ್ ಬನ. ದೇವ್ಸ್ಥಾನದ ಸುತ್ತ ತೋಟ ಆರ್ಮೆಲೆ ಹಚ್ಚ ಹಸಿರಾದ ಗೆದ್ದಿ , ಗೆದ್ದಿ ಅಂಚಂಗೆ ನೆಡ್ಕಂಡ್ ಹೊರೆ ಮೊದಲ್ ಸಿಕ್ಕುದೆ ದೇವ್ಸ್ಥಾನದ ಭಟ್ರು ಅಡಿಗಳ ಮನಿ , ಅಡಿಗಳ ಹೆಂಡ್ತಿ ಕಮಲಮ್ಮ ತುಂಬ ದೈವ ಭಕ್ತ್ರೆ. ದಿನಾ ಬೈಸರಿ ಹೊತ್ತಿಗೆ ಗೆದ್ದಿ ಅಂಚಂಗೆ ನೆಡ್ಕಬಂದು , ನಾಗನ್ ಬನಕ್ಕೆ ದೀಪ ಇಟ್ಟಿಕ್ ಹೊತಿದಿರ್. ಅಡಿಗಳ ಮನೆಗೆ ಕೈ ಕಾಲ್ ಗೆಲ್ಲಾ ಆಳೇ. ಮನಿ ತುಂಬಾ ದೆನ , ಹೋರಿ , ಎಮ್ಮಿ , ಒಂದ್ ನಾಯಿ , ಎರಡ್ ಬೆಕ್ಕು ಎಲ್ಲಾ ಇತ್ತ್. ಗೆದ್ದಿ ಕೆಲ್ಸ , ತೋಟದ್ ಕೆಲ್ಸ ಅಂದೇಳಿ , ಮನಿಗ್ ಎಸ್ಟೋತಿಗೂ ಕೆಲ್ಸ್ದೋರ್. ಅವ್ರಿಗೆ ಚಾ , ತಿಂಡಿ ಮಾಡ್ಕಂಡ್ , ಮನಿ ಕಂಡ್ ಕಂಬುದ್ ಅಡಿಗಳ ಹೆಂಡ್ತಿ. ದೇವ್ಸ್ಥಾನದ ಕೆಲ್ಸ ಮುಗ್ಸಿ , ಮನಿಗ್ ಬಂದ್ ಉಂಡ್ಕಂಡ್ , ಒಂದ್ಗಳ್ಗಿ ಮನಿಕಂಡ್ ಎದ್ರೆ , ಮನಿ ತುಂಬಾ ಜನವೇ , ಎಂತಕ್ ಗೊತಿತಾ.. ? ಅಡಿಗಳ ಹತ್ರ ಜಾತ್ಕ ತೊರ್ಸುಕ್. “ಅವರ್ ಹೇಳದ್ ಹೆಳ್ದಂಗ್ ಆತ್” ಅಂದೇಳಿ , ನಮ್ ಊರಿನವ್ರಲ್ದೇ , ಘಟದ್ ಮೇಲಿನೋರು “ಒಂದ್ಗಳಿಗಿ ಅಡಿಗ್ರ ಹತ್ರ ಕೆಂಬ” ಅಂದ್ ಬೆಳ್ಗಯ್ಕಾರ್ ಮನಿ