Posts

Showing posts from October, 2024

ನಂಬಿಕೆಯೇ ದೇವರು...!!

Image
ನಂಬಿಕೆಯೇ ದೇವರು ... !! ಎಲ್ಲಿ ಕಣ್ಣು ಹಾಯಿಸಿದರು ನೀರೇ ತುಂಬಿಕೊಂಡಿರುವ ಸಮುದ್ರದಿಂದ ಕೂಗಳತೆ ದೂರದಲ್ಲಿರುವ ಊರು ನಮ್ಮದು. ಊರ್ ಅಂದ್ಮೇಲೆ ದೇವಸ್ಥಾನ , ದೈವದ ಮನೆ ಸಾಮಾನ್ಯ. ಹಂಗೆ ನಮ್ ಊರಲ್ಲೂ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನ ಇತ್ತು. ದೇವಸ್ಥಾನದ ಸುತ್ತ ತೆಂಗಿನ ತೋಟ , ಬದಿಯಲ್ಲಿ ಒಂದು ಪುಷ್ಕರಣಿ , ಪುಷ್ಕರಣಿ ದಂಡೆಯಲ್ಲಿ ನಾಗನಬನ. ದೇವಸ್ಥಾನದ ಸುತ್ತ ತೋಟ ಆದ ಮೇಲೆ ಹಚ್ಚಹಸಿರಾದ ಗದ್ದೆ . ಗದ್ದೆ ಅಂಚಲ್ಲೇ ನಡೆದುಕೊಂಡು ಹೋದರೆ ಮೊದಲು ಸಿಕ್ಕುವುದೇ   ದೇವಸ್ಥಾನದ ಭಟ್ರು ಅಡಿಗರ ಮನೆ.   ಅಡಿಗರ ಹೆಂಡತಿ ಕಮಲಮ್ಮ   ತುಂಬಾ ದೈವಭಕ್ತೆ. ದಿನಾ ಸಂಜೆ ಹೊತ್ತಿಗೆ ಗದ್ದೆ ಅಂಚಿನಲ್ಲಿ ನಡೆದುಕೊಂಡು ಹೋಗಿ ನಾಗಬನಕ್ಕೆ ದೀಪ ಇಟ್ಟು ಬರುತ್ತಿದ್ದರು. ಅಡಿಗರ ಮನೆಯಲ್ಲಿ ಕೈಕಾಲಿಗೆಲ್ಲ ಕೆಲಸದವರು. ಮನೆ ತುಂಬಾ ದನ , ಹೋರಿ , ಎಮ್ಮೆ ,   ಒಂದು ನಾಯಿ , ಎರಡು ಬೆಕ್ಕು ಎಲ್ಲ ಇತ್ತು.   ಗದ್ದೆ ಕೆಲಸ , ತೋಟದ ಕೆಲಸ ಅಂತ ಹೇಳಿ   ಮನೆಯಲ್ಲಿ ಎಷ್ಟೊತ್ತಿಗೂ ಜನ ಇರುತ್ತಿದ್ದರು.   ಅವರಿಗೆ ಕಾಫಿ , ತಿಂಡಿ   ಮಾಡಿಕೊಂಡು   ಮನೆ ನೋಡಿಕೊಳ್ಳುತ್ತಿದ್ದಿದ್ದು ಅಡಿಗಳ ಹೆಂಡ್ತಿ. ದೇವಸ್ಥಾನದ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ,   ಒಂದುಗಳಿಗೆ   ಮಲಗಿಕೊಂಡು ಎದ್ದರೆ ಮನೆ ತುಂಬಾ ಜನ.   ಏನಕ್ ಗೊತ್ತಾ ಅಡಿಗರ ಹತ್ರ ಜಾತಕ   ತೋರಿಸಲಿಕ್ಕೆ.   ಅವರು ಹೇಳುವುದು ಹೇಳಿದಂಗೆ ಆಗುತ್ತೆ   ಅಂತ   ನಮ್ಮ ಊರಿನವರಲ್ಲದೆ ,