ಮುಗಿಲೂರಿಗೊಂದು ಪಯಣ...
ಐಟಿ ಫೀಲ್ಡ್ ಅಂದ್ರೆ ಹಾಗೆ, ಕೆಲಸ ಕಮ್ಮಿ ಎಂಜೋಯ್ಮೆಂಟ್ ಜಾಸ್ತಿ. ವಾರಕ್ಕೊಂದು ಪಾರ್ಟಿ, ಮನಸ್ಸಾದಾಗ ಔಟಿಂಗ್ ನಡಿತ್ತಾನೇ ಇರುತ್ತೆ. ಇವೆಲ್ಲಾ ನಿರಂತರ ಕೆಲಸದ ಒತ್ತಡವನ್ನು ಹೊರಹಾಕಲಿಕ್ಕೆ ಅಂತ ಸಹಾ ಹೇಳ್ತಾರೆ. ನಾನು ಕೂಡ ಮಂಗಳೂರಿನ ಒಂದು ದೊಡ್ಡ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇರೋದು. ಅವತ್ತು ಶುಕ್ರವಾರ, ರಾತ್ರಿ ನಮ್ಮ ಮನೆಯಲ್ಲಿ ಗೆಳೆಯರೆಲ್ಲಾ ಸೇರಿದ್ವಿ. ಅದಕ್ಕೆ ಸರಿಯಾಗಿ ಅವತ್ತು ಮಂಗಳೂರಿನಲ್ಲಿ ಜೋರು ಮಳೆ ಬೇರೆ. ಎಲ್ಲರೂ ಒಳ್ಳೆಯ ಹುಡುಗರೇ, ಆದ್ದರಿಂದ ಮಿರಿಂಡ,ಥಮ್ಸಪ್, ಕೋಲಾ, ಕುರ್ ಕುರೆ, ಪೊಟೆಟೋ ಚಿಪ್ಸ್ ಹಾಗೆಯೇ ಸ್ವಲ್ಪ ಮಾತು ಬಿಟ್ರೆ ಬೇರೆ ಏನು ಇರಲಿಲ್ಲಾ. ಒಬೊಬ್ಬರೇ ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಳ್ಳುತ್ತಾ ಇದ್ದರು. ಕೆಲವರು ಇನ್ನೊಬ್ಬರ ಕಾಲು ಏಳಿತಾ ಇದ್ದರೇ, ಕೆಲವರು ತಮ್ಮ ಡ್ರಿಮ್ಸ್, ಡ್ರಿಮ್ ಗರ್ಲ್ ಬಗ್ಗೆ ಹೇಳುತ್ತಾ ಇದ್ದರು. ಇವೆಲ್ಲವನ್ನು ಕೇಳಿಯೂ ಕೇಳದಂತೆ ಮಳೆ ತನ್ನಷ್ಟಕ್ಕೆ ತಾನು ಸುರಿಯುತ್ತಲಿತ್ತು. 4 ಬಾಟಲಿ ಮಿರಿಂಡ ಖಾಲಿಯಾಯ್ತು. ತಂದ ಚಿಪ್ಸ್ ಪ್ಯಾಕೆಟ್ ಗಳೆಲ್ಲಾ ಖಾಲಿಯಾಯ್ತು. ಡ್ಯಾನ್ಸ್ ಕೂಡ ಮಾಡಿಯಾಯ್ತು. ಅದಾಗಲೇ ಗಡಿಯಾರ 12:30 ತೋರಿಸಿತ್ತು. ಎಲ್ಲರೂ ಸುಸ್ತಾಗಿ ಕೂತಿರಬೇಕಾದ್ರೆ ಒಬ್ಬ ಫ್ರೆಂಡ್ " ಕಾರ್ ಇದೆ ಫ್ರೆಂಡ್ಸ್ ಯಾಕೆ ಎಲಾದ್ರೂ ಹೋಗಬಾರದು" ಅಂತಾ ಕೇಳಿದ. ಅದಕ್ಕೆ ಎಲ್ಲಿ ಹೊಗೋದು