ನಿನ್ನ ಪ್ರೀತಿಗೆ ಅಭಿಮಾನಿ ನಾನೀಗ…
ಪ್ರೀತಿ ಹೇಗೆ..? ಎಲ್ಲಿ..? ಯಾರ ಮೇಲೆ ಆಗುತ್ತೆ ಅಂತ ಗೊತ್ತೇ ಆಗಲ್ಲ. ಅದಕ್ಕೆ ಜಾತಿ ಇಲ್ಲ, ಬಣ್ಣ ಇಲ್ಲ ಅದು ಭಾವನೆಗಳ ಬೆಸುಗೆ, ಮನಸ್ಸುಗಳ ಬಂಧನ. ಪ್ರೀತಿಗೆ ಏನು ಬೇಕಾದರೂ ಗೆಲ್ಲುವ ಶಕ್ತಿ ಇರುತ್ತೆ, ಹಾಗೆಯೇ ಪ್ರೀತಿಗೆ ಎದುರು ಆಗುವ ಅಡೆತಡೆಗಳು ಜಾಸ್ತಿ. ಯಾರ ಜೊತೆಗಾದರೂ ಸ್ವಲ್ಪ ದಿನ ಜೊತೆಯಾಗಿದ್ದು ಅದು ಪ್ರೀತಿನಾ..? ಗೆಳೆತನನಾ..? ಅನ್ನುವ ಸಂಶಯ ದೂರ ಆಗಿ, ಇದು ಪ್ರೀತಿನೇ ಅಂತ ಅರಿವಾಗುವುದರೊಳಗೆ ಅವರು ದೂರ ಆಗಬಹುದು. ಅವರ ಭಾವನೆಗಳಿಗೆ ಬೆಲೆ ಕೊಟ್ಟು ಪ್ರೀತಿ ಹೇಳಿಕೊಳ್ಳದೆ ಇರಬಹುದು ಅಥವಾ ನಮ್ಮ ಕರ್ತವ್ಯಗಳಿಗೆ, ಗುರಿಗಳಿಗೆ ನಮ್ಮ ಪ್ರೀತಿ ಬಲಿಯಾಗಬಹುದು. ಒಟ್ಟಿನಲ್ಲಿ ಪ್ರೀತಿ ಪಡೆದುಕೊಂಡವನು ಪುಣ್ಯವಂತ, ಪ್ರೀತಿಯನ್ನು ಬೇರೆ ಯಾವುದಕ್ಕೋ ತ್ಯಾಗ ಮಾಡಿದವನು ತ್ಯಾಗಮಯಿ. ಲೋಕಾನೇ ಹಾಗೇ ಅಲ್ವಾ ಏನಾದ್ರೂ ಪಡೆದುಕೊಳ್ಳಬೇಕಾದರೆ ಬೇರೆ ಏನಾದ್ರೂ ಕಳೆದುಕೊಳ್ಳಲೇಬೇಕು. ನಾನು ಹೇಳುತ್ತಿರುವ ಕತೆಯೂ ಇದೇ ರೀತಿಯ ಒಂದು ಪ್ರೀತಿಗೆ ಸಂಬಂಧಪಟ್ಟಿದ್ದು. ಅರುಣ್ ಎನ್ನುವ ಸಾಫ್ಟ್ ವೇರ್ ಇಂಜಿನಿಯರ್, ಸ್ವಂತ ಊರು ಕರಾವಳಿಯ ಕುಂದಾಪುರವಾದರೂ ಮೂರು ವರ್ಷಗಳಿಂದ ಬೆಂಗಳೂರು ಎನ್ನುವ ಸಾಫ್ಟ್ವೇರ್ ಪ್ರಪಂಚದಲ್ಲಿ ನನ್ನ ಲೈಫ್ ಅನ್ನು ಕಟ್ಟಿಕೊಳ್ಳಲಿಕ್ಕೆ ಹರಸಾಹಸ ಪಡುತ್ತಿರುವ ಮುದ್ದು, ಪೆದ್ದು ಹುಡುಗ. ಮೂರು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ರು ಸಂಬಳದಲ್ಲಿ ಜಾಸ್ತಿ ಇಲ್ಲ ಅನ್ನೋದೊಂದು ಬಿಟ್ಟರೆ, ಇವನ ಖರ್ಚಿಗ