ನಿನ್ನ ಪ್ರೀತಿಗೆ ಅಭಿಮಾನಿ ನಾನೀಗ…



ಪ್ರೀತಿ ಹೇಗೆ..? ಎಲ್ಲಿ..? ಯಾರ ಮೇಲೆ ಆಗುತ್ತೆ ಅಂತ ಗೊತ್ತೇ ಆಗಲ್ಲ. ಅದಕ್ಕೆ ಜಾತಿ ಇಲ್ಲ, ಬಣ್ಣ ಇಲ್ಲ ಅದು ಭಾವನೆಗಳ ಬೆಸುಗೆ, ಮನಸ್ಸುಗಳ ಬಂಧನ. ಪ್ರೀತಿಗೆ ಏನು ಬೇಕಾದರೂ ಗೆಲ್ಲುವ ಶಕ್ತಿ ಇರುತ್ತೆ, ಹಾಗೆಯೇ ಪ್ರೀತಿಗೆ ಎದುರು ಆಗುವ ಅಡೆತಡೆಗಳು ಜಾಸ್ತಿ. ಯಾರ ಜೊತೆಗಾದರೂ ಸ್ವಲ್ಪ ದಿನ ಜೊತೆಯಾಗಿದ್ದು ಅದು ಪ್ರೀತಿನಾ..? ಗೆಳೆತನನಾ..? ಅನ್ನುವ ಸಂಶಯ ದೂರ ಆಗಿ, ಇದು ಪ್ರೀತಿನೇ ಅಂತ ಅರಿವಾಗುವುದರೊಳಗೆ ಅವರು ದೂರ ಆಗಬಹುದು. ಅವರ ಭಾವನೆಗಳಿಗೆ ಬೆಲೆ ಕೊಟ್ಟು ಪ್ರೀತಿ ಹೇಳಿಕೊಳ್ಳದೆ ಇರಬಹುದು ಅಥವಾ ನಮ್ಮ ಕರ್ತವ್ಯಗಳಿಗೆ, ಗುರಿಗಳಿಗೆ ನಮ್ಮ ಪ್ರೀತಿ ಬಲಿಯಾಗಬಹುದು. ಒಟ್ಟಿನಲ್ಲಿ ಪ್ರೀತಿ ಪಡೆದುಕೊಂಡವನು ಪುಣ್ಯವಂತ, ಪ್ರೀತಿಯನ್ನು ಬೇರೆ ಯಾವುದಕ್ಕೋ ತ್ಯಾಗ ಮಾಡಿದವನು ತ್ಯಾಗಮಯಿ. ಲೋಕಾನೇ ಹಾಗೇ ಅಲ್ವಾ ಏನಾದ್ರೂ ಪಡೆದುಕೊಳ್ಳಬೇಕಾದರೆ ಬೇರೆ ಏನಾದ್ರೂ ಕಳೆದುಕೊಳ್ಳಲೇಬೇಕು.
ನಾನು ಹೇಳುತ್ತಿರುವ ಕತೆಯೂ ಇದೇ ರೀತಿಯ ಒಂದು ಪ್ರೀತಿಗೆ ಸಂಬಂಧಪಟ್ಟಿದ್ದು. ಅರುಣ್ ಎನ್ನುವ ಸಾಫ್ಟ್ ವೇರ್ ಇಂಜಿನಿಯರ್, ಸ್ವಂತ ಊರು ಕರಾವಳಿಯ ಕುಂದಾಪುರವಾದರೂ ಮೂರು ವರ್ಷಗಳಿಂದ ಬೆಂಗಳೂರು ಎನ್ನುವ ಸಾಫ್ಟ್ವೇರ್ ಪ್ರಪಂಚದಲ್ಲಿ ನನ್ನ ಲೈಫ್ ಅನ್ನು ಕಟ್ಟಿಕೊಳ್ಳಲಿಕ್ಕೆ ಹರಸಾಹಸ ಪಡುತ್ತಿರುವ ಮುದ್ದು, ಪೆದ್ದು ಹುಡುಗ. ಮೂರು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ರು ಸಂಬಳದಲ್ಲಿ ಜಾಸ್ತಿ ಇಲ್ಲ ಅನ್ನೋದೊಂದು ಬಿಟ್ಟರೆ, ಇವನ ಖರ್ಚಿಗೆ, ಇವನ ಅಭ್ಯಾಸಗಳಿಗೆ ಹಣದ ಕೊರತೆ ಎಂದೂ ಬರಲಿಲ್ಲ. ದಿನಾ ಬೆಳಗ್ಗೆ ಎದ್ದು, ಜಿಮ್ಗೆ ಹೋಗಿ ಬಂದು, ಆಫೀಸಿಗೆ ಹೋಗಿ, ಕೆಲಸ ಇರಲಿ, ಇಲ್ಲದೆ ಇರಲಿ ಎಂಟು ಗಂಟೆ ಕುಳಿತುಕೊಂಡು, ಮತ್ತೆ ರೂಮಿಗೆ ಬಂದು, ಲ್ಯಾಪ್ಟಾಪ್ನಲ್ಲಿ ಮೂವಿ ನೋಡಿ, ವಾಟ್ಸಾಪ್, ಮೆಸೆಂಜರ್ ಅಲ್ಲಿ ಚಾಟ್ ಮಾಡಿ, ಫೇಸ್ ಬುಕ್ಕಲ್ಲಿ ಸ್ವಲ್ಪಾ ಪ್ರೆಂಡ್ ರಿಕ್ವೆಸ್ಟ್ ಕಳಿಸಿ, ವೀಕೆಂಡಲ್ಲಿ ಮಜಾ ಮಸ್ತಿ ಮಾಡುವ ಸಾಫ್ಟ್ವೇರ್ ಜೀವನ ಇವನದ್ದಾಗಿತ್ತು.
ಹೈಸ್ಕೂಲ್ ನಿಂದ ಹಿಡಿದು ಒಂದು ೨೦ ರಿಂದ ೨೫ ಕ್ರಶ್ ಗಳು, ಒಂದು ನಾಲ್ಕರಿಂದ ಐದು ಪ್ರಪೋಸ್ ಗಳನ್ನು ಮಾಡಿಬಿಟ್ಟಿದ್ದ. ಆದ್ರೆ ಯಾರೂ ಇವನ ಲವ್ ಗೆ ಗ್ರೀನ್ ಸಿಗ್ನಲ್ ಕೊಡಲೇ ಇಲ್ಲ. ಅದು ಅವನ ಗ್ರಹಚಾರನೋ, ಅವರಿಗೆ ಇವನು ಇಷ್ಟ ಆಗಿಲ್ವೋ ಗೊತ್ತಿಲ್ಲ. ಸಾಫ್ಟ್ ವೇರ್ ಕಂಪನಿ ಸೇರಿದ ಮೇಲೆ ಸಹಜವಾಗಿ ಇವನ ಹಿಂದೇನೂ ಸ್ವಲ್ಪ ಜನ ಬಿದ್ದಿದ್ದರು, ಆದರೆ ಇವನಿಗೆ ಅವರು ಯಾರು ಇಷ್ಟ ಆಗಿರಲಿಲ್ಲ. ಆಫೀಸಿನಿಂದ ಮನೆಗೆ ಬಂದ ಮೇಲೆ ಲೈಫ್ ಅಲ್ಲಿ ಏನೋ ಮಿಸ್ ಆದ ಹಾಗೆ ಅನ್ನಿಸ್ತಾ ಇತ್ತು. ಮಾತನಾಡಕ್ಕೆ ಯಾರೂ ಇಲ್ಲ ಅನಿಸ್ತಾ ಇತ್ತು. ಒಂಟಿತನ ತುಂಬಾ ಕಾಡ್ತಾ ಇತ್ತು. ಇವನ ಬೈಕಿನ ಹಿಂದಿನ ಸೀಟು ತನ್ನ ಮೇಲೆ ಯಾರು ಸವಾರಿ ಮಾಡಿಲ್ಲ ಅಂತ ಭೀಗಿತ್ತು. ಬೇರೆಯವರ ಬೈಕಿನ ಹಿಂದಿನ ಸೀಟುಗಳ ಮೇಲಿನ ಸವಾರಿ ನೋಡಿ ಇವನಿಗೂ ಮನಸ್ಸಲ್ಲಿ ಬೀಜ ಮೊಳಕೆ ಒಡೆದಿತ್ತು. ಆದರೆ ಪರ್ಸ್ ನೋಡಿ ಬರುವಂತಹ ಹುಡುಗಿಯರನ್ನು ನೋಡಿ ಮನಸ್ಸು ಬೆಸರಿಸಿತ್ತು. ಆದ್ದರಿಂದ ಪ್ರೀತಿ, ಪ್ರೇಮ ಎಲ್ಲಾ ಬೇಡ. ಸ್ವಲ್ಪ ಸಮಯದಲ್ಲಿ ಮನೆಯವರೇ ಮದುವೆ ಮಾಡ್ತಾರೆ ಅಂತ ಇವನು ಪ್ರೀತಿ ಹುಡುಕಾಟಕ್ಕೆ ಬ್ರೇಕ್ ಹಾಕಿದ್ದ.
ಇಂತಹ ಮೋಡ ಮುಸುಕಿದ ವಾತಾವರಣದಲ್ಲಿ ಇವನ ಆಫೀಸ್ಗೆ ಮಳೆಯಂತೆ ಅವಾಗಷ್ಟೆ ಕಾಲೇಜು ಮುಗಿಸಿ ಬಂದಂತಹ ಮಲೆನಾಡಿನ ಚೆಲುವೆ ಪ್ರೀತಿ. ಎಂದಿನಂತೆ ಆಫೀಸಿಗೆ ಎಂಟ್ರಿಯಾದ ನಮ್ಮ ಹೀರೋ ಪ್ರೀತಿ ಕ್ಯೂಬಿಕಲ್ ಮುಂದೆ ನಡೆದುಕೊಂಡು ಹೋಗಬೇಕಾದರೆ ಅವಳನ್ನು ನೋಡಿದ ಅವನು ಒಂದು ನೋಟಕ್ಕೆ ಇನ್ನೊಂದು ಸಾರಿ ನೋಡಬೇಕಂತ ಅನಿಸುವಂತೆ ಮಾಡಿದ ಚೆಲುವು ನಮ್ಮ ಪ್ರೀತಿದು. ತಲೆ ಕಟ್ಟಿಕೊಳ್ಳದೆ ಬಿಟ್ಟಂತಹ ಅವಳ ಕೂದ್ಲು, ಅವಳು ಹಾಕಿಕೊಂಡಂತ ನೀಲಿ ಮತ್ತು ಕಪ್ಪು ಬಣ್ಣದ ಸಲ್ವಾರ್, ದುಂಡು ಮುಖ, ಎಂಥವರಿಗಾದರೂ ಇನ್ನೊಂದು ಸಾರಿ ನೋಡ್ಬೇಕು ಅಂತಾ ಅನಿಸ್ತಾ ಇತ್ತು. ಇವರಿಬ್ಬರೂ ಕೆಲಸ ಮಾಡ್ತಾ ಇದ್ದ ಪ್ರಾಜೆಕ್ಟ್ ಗಳು ಬೇರೆ ಆಗಿದ್ದರೂ ಕೆಲಸ ಮಾಡ್ತಾ ಇದ್ದ ಆಫೀಸ್ ರೂಮ್ ಒಂದೇ ಆಗಿತ್ತು.
ಇನ್ನು ಪ್ರೀತಿ ಬಗ್ಗೆ ಹೇಳೋದಾದ್ರೆ, ಆಗಷ್ಟೆ ಕಾಲೇಜು ಮುಗಿಸಿ ಕಾರ್ಪೋರೇಟ್ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಮುಗ್ಧ ಹೆಣ್ಣು ಮಗಳು. ಕ್ಲಾಸ್ ಅಲ್ಲಿ ಟಾಪರ್ ಆದ್ರೂ ಪ್ರೀತಿಯಲ್ಲಿ ಲಾಸ್ಟ್ ಬೆಂಚು. ಅವಳ ಚೆಲುವಿಗೆ ಇವಳ ಬುದ್ಧಿವಂತಿಕೆಗೆ ಇಡೀ ಕಾಲೇಜು ಹಿಂದೆ ಬಿದ್ದಿತು. ಒಂದು ಹತ್ತರಿಂದ ಹನ್ನೆರಡು ಜನ ಧೈರ್ಯ ಮಾಡಿ ಪ್ರಪೋಸ್ ಮಾಡೆ ಬಿಟ್ಟಿದ್ದರು. ಆದರೆ ಇದ್ಯಾವುದಕ್ಕೂ ಇವಳು ಕ್ಯಾರೆ ಮಾಡಿರಲಿಲ್ಲ. ಲೈಫ್ನಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋದು ಇವಳ ದೊಡ್ಡ ಕನಸು. ಹಾಗಂತ ಇವಳದ್ದು ಕಲ್ಲು ಮನಸ್ಸು ಅಂತ ಅಲ್ಲ, ಇವಳಿಗೂ ಕೆಲವರು ಮೇಲೆ ಕ್ರಶ್ ಆಗಿತ್ತು ಆದರೆ ತನ್ನ ಗುರಿಗೆ ಎಲ್ಲಿ ಅಡ್ಡಿ ಆಗುತ್ತೋ ಅಂತ ಸುಮನಾಗಿದ್ದಳು.
ನಮ್ಮ ಹೀರೋ ಹೀರೋಯಿನ್ ಮೀಟ್ ಆಗ್ತಾರ…? ಮುಂದೇನಾಗುತ್ತೆ…? ಮುಂದಿನವಾರ…

-ಗಣೇಶ ಬರ್ವೆ ಮಣೂರು

Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)