Posts

Showing posts from 2018

ಜೋಳದ ರೊಟ್ಟಿ ಮತ್ತು ಕೊಬ್ಬರಿಯೆಣ್ಣೆ (ಇದು ಹುಬ್ಬಳ್ಳಿ ಹೈದನ ಪ್ರೇಮಕಥೆ).

Image
ಮೂಲ : once a upon a time in  Infosys ಲೇಖಕರು : ಅಂಕುರ್ ಕೌಶಲ್. ಕನ್ನಡಕ್ಕೆ : ಗಣೇಶ ಬರ್ವೆ ಮಣೂರು . ಮಳೆಗಾಲದಲ್ಲಿ, ಸಂಜೆ ಹೊತ್ತಲ್ಲಿ ರಸ್ತೆ ಪಕ್ಕ ಇರುವ ಕಾಫಿ ಶಾಪ್ ನಲ್ಲಿ ಬಿಸಿ ಬಿಸಿ ಕಾಫಿ ಹೀರುವಾಗ ಆಪ್ತ ಗೆಳೆಯ ಹೇಳಿದ ಒಂದು ಇಂಗ್ಲಿಷ್ ಕಥೆ. ಅಂತರ್ಜಾಲದಲ್ಲಿ ಜಾಲಾಡಿ ಕಥೆಯನ್ನು ಹುಡುಕಿ ಓದಿದಾಗ ಅನಿಸಿದ್ದು ಒಂದೇ ಇದನ್ನು ಕನ್ನಡದ ಓದುಗರಿಗೆ ಉಣ ಬಡಿಸಿದರೆ ಹೇಗಿರುತ್ತೆ ಅಂತಾ. ಹತ್ತು ವರ್ಷ ಹಳೆಯ 'ಒನ್ಸ್ ಅಪೋನ್ ಅ ಟೈಂ ಇನ್ ಇನ್ಫೋಸಿಸ್' ಅನ್ನುವ ಇಂಗ್ಲಿಷ್ ಕಥೆಯನ್ನು, ನೈಜತೆಗೆ ಧಕ್ಕೆ ಬರದಂತೆ, ಕನ್ನಡದ ಪರಿಸರಕ್ಕೆ ಹೊಂದುವಂತೆ, ಕನ್ನಡಕ್ಕೆ ಭಾಷಾಂತರಿಸುವ ಸಣ್ಣ ಪ್ರಯತ್ನ. ಬನ್ನಿ ಕಥೆ ಒಳಗೆ ಹೋಗೋಣ. (ಓದುವ ಮುನ್ನ : ಮನಸ್ಸನ್ನು ಓಪನ್ ಮಾಡ್ಕೊಳಿ...ನಿಮ್ಮ ಇಯರ್ ಫೋನ್ ಹತ್ತಿರ ಇದ್ರೆ ಕನೆಕ್ಟ್ ಮಾಡ್ಕೊಳಿ...ಮೂರು ಸುಂದರವಾದ ಹಾಡುಗಳಿವೆ...ಹಾಡು ಬರೆದ ಜಾಗದಲ್ಲಿ ಅವ್ಗಳನ್ನು ಕೇಳಿ ಮುಂದೆ ಹೋಗಿ...ಈ ಕಥೆ ಒಂದು ಸುಂದರವಾದ ಸಿನಿಮಾ ನಿಮಗೆ ತೋರಿಸತ್ತೆ.) ಬೆಳ್ಳಗೆ ೧೧ ಗಂಟೆಯ ಸುಮಾರು. ನಾನು ನನ್ನ ಗಂಟು ಮೂಟೆಗಳನ್ನು ಕಟ್ಟಿಕೊಂಡು, ನನ್ನನ್ನು ಗೇಟ್ ತನಕ ಬಿಡಲಿಕ್ಕೆ ಬರುವ ವಾಹನಕೋಸ್ಕರ, ಮೈಸೂರಿನ ಇನ್ಫೋಸಿಸ್ ನಲ್ಲಿ ನನ್ನ ಹಾಸ್ಟೆಲ್ ಎದುರು ಕಾಯ್ತಾ ಇದ್ದೆ. ಹೌದು ನೀವು ಓದಿದ್ದು ಸರಿಯಾಗೇ ಇದೆ. ಇನ್ಫೋಸಿಸ್ ಭಾರತದ ಐಟಿ ದಿಗ್ಗಜಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೈಸೂರ

ನಿನ್ನ ಮದುವೆಯ ಕರೆಯೋಲೆ

Image
ಭಾಗ - ೧ ಸುಂಯ್ ಎಂದು ಬಿಸುವ ತಂಗಾಳಿ ಜೊತೆ ಮೇ ತಿಂಗಳಿನಲ್ಲಿ ವರುಣ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಹಾಜರಾಗಿದ್ದ. ಏಪ್ರಿಲ್ ಮೇ ಬಂತು, ಮದುವೆ ಸೀಸನ್ ಶುರುವಾಯ್ತು, ಇನ್ನು ಯಾರ್ ಗರ್ಲ್ ಫ್ರೆಂಡ್ ಯಾರ ಹೆಂಡ್ತಿ ಆಗ್ತಾಳೋ, ಯಾರ್ ಬಾಯ್ ಫ್ರೆಂಡ್ ಯಾರ ಗಂಡ ಆಗ್ತಾನೋ, ಅನ್ನೋ ಮಿಮ್ಸ್ ಓದಿಕೊಂಡು ನಾನು ಕಾಫಿ ಡೇಯಲ್ಲಿ ಕೂತ್ಕೊಂಡು ಇದ್ದೇ. ತಕ್ಷಣ ನನ್ನ ಮೊಬೈಲ್ಗೆ ಒಂದು ಕಾಲ್ ಬಂತು. ಅದು ಅವಳೇ ಸಹನಾ, “ತಣ್ಣೀರುಬಾವಿ ಬೀಚ್ ಹತ್ರಾ ಬರ್ತಿಯಾ..? ಏನೋ ಮಾತಾಡ್ಬೇಕು..” ಅಂತಾ ಕರೆದ್ಲು. ತಡಮಾಡಲಿಲ್ಲ ಹುಡುಗೀರು ಕರೆದರೆ ಓಡಿ ಹೋಗುವ ಬಾಯ್ಸ್ ಗೇನು ಕಮ್ಮಿಯಿಲ್ಲ ಬಿಡಿ,  ಆದ್ರೆ ನಾನು ಅಂಥವನಲ್ಲ ನಡೆದುಕೊಂಡೆ ಹೋದೆ. ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವಳು ಕರೆದಿದ್ದು ನನ್ನನ್ನು ಅವಳ ಮದುವೆಗೆ ಇನ್ವೈಟ್ ಮಾಡಲಿಕ್ಕೆ ಅಂತ. ಹುಡುಗಿಯರೇ ಹಾಗೆ ಕಣ್ರೀ ಲವ್ ಸ್ಟಾರ್ಟ್ ಮಾಡೋದು ಕಾಫಿ ಡೇಯಲ್ಲಿ , ಆದ್ರೆ ಅದನ್ನು ಎಂಡ್ ಮಾಡೋದು ಇಂಥ ಬೀಚ್ಗಳ ಹತ್ರಾ ಅಥವಾ ಹೊಳೆ ಹತ್ರ. ಶಾಕ್ ಗೆ ಹಾರ್ಕೊಂಡು ಸತ್ತರೆ ಸಾಯಲಿ ಅಂತ ಇರಬಹುದು..? ನನಗಂತೂ ಗೊತ್ತಿಲ್ಲ. ಹಾಗಂತ ಅವಳು ನನ್ನ ಲವರ್ ಅಲ್ಲಾ, ನಾನು ಅವಳ ಬಾಯ್ ಫ್ರೆಂಡ್ ಅಲ್ಲಾ, ನಾನು ಅವಳ ಒಬ್ಬ ಬೆಸ್ಟ್ ಫ್ರೆಂಡ್ ಅಷ್ಟೇ. ಅವಳು ಹೋದ ಮೇಲೆ ಎಲ್ಲಿಂದಲೋ ಗೊತ್ತಿಲ್ಲ ಮನಸ್ಸಲ್ಲಿ, ಕಣ್ಣಲ್ಲಿ, ಹೊರಗಡೆ ಕೂಡ ಮೂವಿಯಲ್ಲಿ ಆಗುವ ತರಹ ಜೋರಾಗಿ ಮಳೆ ಬಂತು. ಹಾಗಾದ್ರೆ ನನ್ನ ಹಾಗೂ ಸಹನನ ಪರಿಚಯ ಆಗಿದ್ದೇ