Posts

Showing posts from October, 2026

ಜೀವನಕ್ಕೊಂದು 'ಕಿಕ್' ಬೇಕು... ಆದರೆ ಅಪರಿಮಿತ ನೆಮ್ಮದಿಯ ರಹಸ್ಯವೇನು..!?

Image
  ಸಿನಿಮಾದಲ್ಲೊಂದು ಪ್ರಸಿದ್ಧ ಡೈಲಾಗ್ ಇದೆ—"ಲೈಫ್‌ನಲ್ಲಿ ಒಂದು ಕಿಕ್ ಇರ‍್ಬೇಕು ಬಾಸ್!" ಈ ಮಾತನ್ನು ನಾವು ಸಾಮಾನ್ಯವಾಗಿ ಲಘುವಾಗಿ ತಗೆದುಕೊಳ್ಳುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಸಮಾಜವನ್ನು , ದಿನನಿತ್ಯ ಓಡಾಡುವ ಜನರನ್ನು ಸೂಕ್ಷ್ಮವಾಗಿ ಗಮನಿಸಿದರೆ , ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಯಾವುದೋ ಒಂದು ' ಕಿಕ್ ' ಅಥವಾ ' ನಶೆ ' ಯ ಬೆನ್ನತ್ತಿ ಓಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿ ' ನಶೆ ' ಅಂದ ತಕ್ಷಣ ಕೇವಲ ಮದ್ಯಪಾನವೋ ಅಥವಾ ಕೆಟ್ಟ ಚಟಗಳೋ ಮಾತ್ರವಲ್ಲ , ಮನುಷ್ಯ ಸಂತೋಷವನ್ನು ಅನುಭವಿಸಲು ಕಂಡುಕೊಳ್ಳುವ ಗೀಳುಗಳು! ಸ್ವಲ್ಪ ಆಳವಾಗಿ ನೋಡಿದರೆ , ಈ ಜಗತ್ತಿನಲ್ಲಿ ಸಂತೋಷ ಅಥವಾ ಕಿಕ್ ಹುಡುಕುವ ಜನರನ್ನು ಮುಖ್ಯವಾಗಿ ಮೂರು ವರ್ಗಗಳಾಗಿ ವಿಂಗಡಿಸಬಹುದು. ೧. ವಸ್ತುಗಳ ಬೆನ್ನತ್ತಿದ ಕ್ಷಣಿಕ ಸುಖದ ನಶೆ! ಮೊದಲನೆಯ ವರ್ಗ - ನಮ್ಮ ಸುತ್ತ ಮುತ್ತ ಹೆಚ್ಚಾಗಿ ಕಾಣಸಿಗುವ ಭೌತಿಕ ಸುಖದ ಆರಾಧಕರು. ಇವರಿಗೆ ಹೊಸ ವಸ್ತುಗಳನ್ನು ಕೊಳ್ಳುವುದರಲ್ಲೇ ಒಂದು ರೀತಿಯ ಕಿಕ್. ಮಾರುಕಟ್ಟೆಗೆ ಹೊಸ ಮೊಬೈಲ್ ಬಂತಾ ? ಸಾಲ ಮಾಡಿಯಾದರೂ ಅದನ್ನು ಕೊಳ್ಳಬೇಕು. ವೀಕೆಂಡ್ ಬಂತಾ ? ಯಾವುದಾದರೂ ದುಬಾರಿ ಹೋಟೆಲ್ , ಪಬ್ ಅಥವಾ ಮಾಲ್‌ಗೆ ಹೋಗಿ ಸಾವಿರಾರು ರೂಪಾಯಿ ಉಡಾಯಿಸಿ ಬರಬೇಕು. ಹೊಸ ಬಟ್ಟೆಗಳು , ಕೈಗಡಿಯಾರಗಳು , ಗ್ಯಾಜೆಟ್‌ಗಳು... ಹೀಗೆ ಶಾಪಿಂಗ್ ಮಾಡುವುದರಲ್ಲೇ ಇವರ ದಿನ ಕಳೆಯುತ್ತದೆ. ಆ...