ಅ ಪರಿಚಿತ (ಅನೌನ್ ಅನ್ನೋನು)…
ಜೀವನದ ದಾರಿಯಲ್ಲಿ ಪರಿಚಿತರು ಸಿಕ್ತಾರೆ, ಅಪರಿಚಿತರು ಸಿಕ್ತಾರೆ. ನಮ್ಮ ಹುಟ್ಟಿನಿಂದ ನಮ್ಮ ಜೊತೆ ಇರುವ ತಂದೆ-ತಾಯಿ, ತಂದೆ ಕಡೆ ಸಂಬಂಧ, ತಾಯಿ ಕಡೆ ಸಂಬಂಧ, ಇವರಷ್ಟೇ ಪರಿಚಿತರು ಅನ್ನಬಹುದು. ಆಮೇಲೆ ಜೀವನದ ದಾರಿಯಲ್ಲಿ ಯಾರನ್ನೆಲ್ಲ ಭೇಟಿಯಾದೆವು ಅವರೆಲ್ಲ ಅಪರಿಚಿತರೇ ಸರಿ. ಅವರೆಲ್ಲ ನಮ್ಮ ಒಂದು ಗುಣ, ಮಾತು, ಸ್ವಭಾವದಿಂದ ನಮಗೆ ಪರಿಚಿತ ಆಗಿರಬಹುದು. ನನ್ನನ್ನು ತುಂಬಾ ಕಾಡುವ ಒಂದು ಮಾತು “ದೆರ್ ಆರ್ ನೋ ಸ್ಟ್ರೇಂಜರ್ಸ್ ಹಿಯರ್, ಓನ್ಲಿ ಫ್ರೆಂಡ್ಸ್ ಯು ಹೆವಂಟ್ ಮೇಟ್ ಎಟ್” ಹೌದು ಇಲ್ಲಿ ಯಾರೂ ಅಪರಿಚಿತರಿಲ್ಲ, ಎಲ್ಲರೂ ಗೆಳೆಯರೇ ಆದರೆ ನಾವು ಇನ್ನೂ ಅವರನ್ನು ಭೇಟಿಯಾಗಿಲ್ಲ. ನನ್ನ ಅನೇಕ ಕೆಲಸಗಳಿಗೆ ಅನೇಕ ಪ್ರಾರಂಭಗಳಿಗೆ ಈ ಮಾತು ತುಂಬಾ ಸಹಾಯವಾಗಿದೆ. ದಿನ ಬಸ್ಸಿನಲ್ಲಿ ಹೋಗುವಾಗ ಸಿಗುವ ಕಂಡಕ್ಟರ್, ದಿನ ಊಟಕ್ಕೆ ಹೋದಾಗ ಪ್ರೀತಿಯಿಂದ ಸಪ್ಲೈ ಮಾಡುವ ಹೋಟೆಲ್ ಸಪ್ಲೈಯರ್, ದಿನ ಬೆಳಗ್ಗೆ ಮನೆ ಬಾಗಿಲಿಗೆ ಪೇಪರ್ ಹಾಗೂ ಹಾಲು ಹಾಕುವ ಹುಡುಗರು, ಎಲ್ಲಾದ್ರೂ ಗಡಿಬಿಡಿಯಿಂದ ಹೋಗಬೇಕು ಅಂತ ಅನ್ನಿಸಿದಾಗ ನೆನಪಾಗುವ ರಿಕ್ಷಾ ಡ್ರೈವರ್, ದಿನ ಮಾತನಾಡಿಸುವ ರೇಷನ್ ಅಂಗಡಿಯವರು, ಹುಷಾರಿಲ್ಲದಾಗ ನೆನಪಾಗುವ ನಮ್ಮ ಊರಿನ ಡಾಕ್ಟ್ರು, ಬಸ್ ಅಥವಾ ರೈಲಿನಲ್ಲಿ ದೂರ ಪ್ರಯಾಣ ಮಾಡುವಾಗ ಜೊತೆಯಾಗಿ ಸಿಗುವವರು, ಆಫೀಸ್ ನಲ್ಲಿ ಜೊತೆಯಾಗಿ ಕೆಲಸ ಮಾಡುವವರು ಎಲ್ಲರೂ ಒಂದು ರೀತಿಯ ಪರಿಚಿತ ಇರುವ ಅಪರಿಚಿತರು. ಕೆಲವು ಸಾರಿ ಅವರ ಹೆಸರು ತಿಳಿದಿರುವು