Posts

ನಂಬ್ಕಿಯೇ ದ್ಯಾವ್ರು...!! (ಕುಂದಾಪುರ ಕನ್ನಡ ಆವೃತ್ತಿ)

Image
ಎಲ್ ಕಣ್ ಹಾಯ್ಸರೂ ನೀರೇ ತುಂಬ್ಕಂಡಿಪ್ಪು ಸಮುದ್ರದಿಂದ ಕೂಗಳತಿ ದೂರದಲಿಪ್ಪು ಊರ್ ನಮ್ದೇ. ಊರ್ ಅಂದ್ ಮ್ಯಾಲೆ ದೇವಸ್ಥಾನ. ದೈದ್ ಮನಿ ಸಾಮಾನ್ಯ , ಹಂಗೆ ನಮ್ ಊರಂಗು ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವ್ಸ್ಥಾನ ಇತ್. ದೇವ್ಸ್ಥಾನದ ಸುತ್ತ ತೆಂಗಿನ್ ತೋಟವೆ , ಬದಿಯಂಗ್ ಪುಷ್ಕರಣಿ , ಪುಷ್ಕರಣಿ ದಂಡೆಂಗೆ ನಾಗನ್ ಬನ. ದೇವ್ಸ್ಥಾನದ ಸುತ್ತ ತೋಟ ಆರ್ಮೆಲೆ ಹಚ್ಚ ಹಸಿರಾದ ಗೆದ್ದಿ , ಗೆದ್ದಿ ಅಂಚಂಗೆ ನೆಡ್ಕಂಡ್ ಹೊರೆ ಮೊದಲ್ ಸಿಕ್ಕುದೆ ದೇವ್ಸ್ಥಾನದ ಭಟ್ರು ಅಡಿಗಳ ಮನಿ , ಅಡಿಗಳ ಹೆಂಡ್ತಿ ಕಮಲಮ್ಮ ತುಂಬ ದೈವ ಭಕ್ತ್ರೆ. ದಿನಾ ಬೈಸರಿ ಹೊತ್ತಿಗೆ ಗೆದ್ದಿ ಅಂಚಂಗೆ ನೆಡ್ಕಬಂದು , ನಾಗನ್ ಬನಕ್ಕೆ ದೀಪ ಇಟ್ಟಿಕ್ ಹೊತಿದಿರ್. ಅಡಿಗಳ ಮನೆಗೆ ಕೈ ಕಾಲ್ ಗೆಲ್ಲಾ ಆಳೇ. ಮನಿ ತುಂಬಾ ದೆನ , ಹೋರಿ , ಎಮ್ಮಿ , ಒಂದ್ ನಾಯಿ , ಎರಡ್ ಬೆಕ್ಕು ಎಲ್ಲಾ ಇತ್ತ್. ಗೆದ್ದಿ ಕೆಲ್ಸ , ತೋಟದ್ ಕೆಲ್ಸ ಅಂದೇಳಿ , ಮನಿಗ್ ಎಸ್ಟೋತಿಗೂ ಕೆಲ್ಸ್ದೋರ್. ಅವ್ರಿಗೆ ಚಾ , ತಿಂಡಿ ಮಾಡ್ಕಂಡ್ , ಮನಿ ಕಂಡ್ ಕಂಬುದ್ ಅಡಿಗಳ ಹೆಂಡ್ತಿ. ದೇವ್ಸ್ಥಾನದ ಕೆಲ್ಸ ಮುಗ್ಸಿ , ಮನಿಗ್ ಬಂದ್ ಉಂಡ್ಕಂಡ್ , ಒಂದ್ಗಳ್ಗಿ ಮನಿಕಂಡ್ ಎದ್ರೆ , ಮನಿ ತುಂಬಾ ಜನವೇ , ಎಂತಕ್ ಗೊತಿತಾ.. ? ಅಡಿಗಳ ಹತ್ರ ಜಾತ್ಕ ತೊರ್ಸುಕ್. “ಅವರ್ ಹೇಳದ್ ಹೆಳ್ದಂಗ್ ಆತ್” ಅಂದೇಳಿ , ನಮ್ ಊರಿನವ್ರಲ್ದೇ , ಘಟದ್ ಮೇಲಿನೋರು “ಒಂದ್ಗಳಿಗಿ ಅಡಿಗ್ರ ಹತ್ರ ಕೆಂಬ” ಅಂದ್ ಬೆಳ್ಗಯ್ಕಾರ್ ಮನಿ ...

ಮದುವೆ ಯಾಕಾಗಬೇಕು...!?

Image
  "ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯಃ "   ಎನ್ನುವ ಮಾತಿನಂತೆ   ನಮ್ಮ ಜೀವನದಲ್ಲಿ ಏನೇ ಒಂದು ಒಳ್ಳೆಯ ಘಟನೆ ನಡೆಯಬೇಕಿದ್ದರೂ ಋಣ ಬೇಕಂತೆ.   ಆದರೆ ಬದಲಾದ   ಕಾಲಘಟ್ಟದಲ್ಲಿ ಋಣಕ್ಕಿಂತ ಮಿಗಿಲಾಗಿ ವ್ಯಕ್ತಿಯ ವೈಯಕ್ತಿಕ ಭಾವನೆಗಳಿಂದ , ಇಷ್ಟ-ಕಷ್ಟಗಳಿಂದ , ಅಭಿಪ್ರಾಯಗಳಿಂದ , ನಿರ್ಧಾರಗಳಿಂದ ಮೇಲೆ ಹೇಳಿದ ಎಲ್ಲವೂ ಅಲ್ಲದಿದ್ದರೂ ಮದುವೆ ವಿಚಾರ ನಿರ್ಧರಿತವಾಗುವುದು ಕಂಡುಬರುತ್ತದೆ. ಮುಂಚೆ ಒಂದು ಕಾಲ ಇತ್ತು , ಮದುವೆ ವಯಸ್ಸಿಗೆ ಬಂದಾಗ ಮದುವೆಯ ಕನಸುಗಳು ಬೀಳುತ್ತಿದ್ದವು , ಸಮಾರಂಭಗಳಲ್ಲಿ ಸಂಬಂಧಿಕರು ಯಾರಾದರೂ “ನಿನ್ನ ಮದುವೆ ಯಾವಾಗ.. ? ” ಅಂತ ಕೇಳಿದಾಗ ಮುಖ ಕೆಂಪಾಗಿ , ಮನಸ್ಸು ಲಡ್ಡು ತಿಂತಿತ್ತು. ಆದರೆ ಇತ್ತೀಚೆಗೆ ಮನೆಯಲ್ಲಿ ಮದುವೆಯ ಮಾತನಾಡಿದರೆ ಹುಡುಗ ಹುಡುಗಿಯರ ಮುಖ ಸಣ್ಣಗಾಗುತ್ತದೆ. ಕೆಲವು ವಿದ್ಯಮಾನಗಳಿಂದ ಪ್ರಭಾವಿತನಾಗಿ , ಸ್ವಮನಸ್ಕ ವಯೋಮಾನದವರ ಮದುವೆ ಬಗೆಗಿನ ತೀರ್ಮಾನವನ್ನು ಆಲಿಸಿ , ಈ ಲೇಖನವನ್ನು ಬರೆಯುವ ಮನಸ್ಸು ಆಯಿತು.   ಒಂದು ಎಂಟು ಒಂಬತ್ತು ವರ್ಷದ ಹಿಂದೆ 2016ರ ಆಸು ಪಾಸು , ನಾನು ನನ್ನ   ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ ಜೀವನವನ್ನು ಆರಂಭಿಸಿದ ಕಾಲ. ನಮ್ಮ ಸಂಬಂಧಿಕರೊಬ್ಬರು   ಅವರ ಮಗನ ಮದುವೆ ಆಹ್ವಾನಕ್ಕೆ   ಎಂದು ನಮ್ಮ ಮನೆಗೆ ಬಂದಿದ್ದರು.   ಅವರ ಮಗ ವಯಸ್ಸಿನಲ್ಲಿ ನನಗಿಂತ ನಾಲ್ಕು ವರ್ಷ ದೊಡ್ಡವನಿದ್ದ ಅಷ್ಟೇ. ...

ಪ್ರಮೇಯ... (ಕರೆಯೇ ಕೋಗಿಲೆ ಮಾಧವನ ...)

Image
 ಪ್ರಮೇಯ... (ಕರೆಯೇ ಕೋಗಿಲೆ ಮಾಧವನ ...) ಪಾಠ - ೧ ಪ್ರತಿಸಾರಿ ಬೆಟ್ಟ ಹತ್ತಬೇಕಾದರೂ ಅನ್ಸೋದು "ಅಯ್ಯೋ ಎಷ್ಟು ಮೆಟ್ಟಿಲು ಇದೆ.. ಯಾವಾಗ ಮುಗಿಯುತ್ತೆ..?" ಅಂತ. ಆದರೆ ಇವತ್ತ್ಯಾಕೋ ಬೆಟ್ಟ ಹತ್ತಿದ್ದು ಗೊತ್ತಾಗಲಿಲ್ಲ. ಇವತ್ತಿನ ದಿನದ ಅವಸರದಲ್ಲಿ  ನಿನ್ನೆ ರಾತ್ರಿಯನ್ನು ಕಳೆದುಕೊಂಡಿದ್ದೆ. ಫಿಂಗರ್ ಕ್ರಾಸ್ಸ್ಡ್ ಸ್ಥಿತಿ ಅಂದ್ರೆ ಏನು ಅಂತ ನಿನ್ನೆ ಗೊತ್ತಾಯ್ತು. ಕಾಯೋದ್ರಲ್ಲಿ ಇರುವ ಸುಖ ನನಗೆ ಖುಷಿ ನೀಡಿತ್ತು. ಜೀವನ ಅಂದ್ರೆ ಬರೀ ದುಃಖಗಳನ್ನು ಕಂಡವಳಿಗೆ ಅವತ್ತು ಏನೋ ಸುಖದ ಮುನ್ಸೂಚನೆ ನೀಡಿತ್ತು. ಕಣ್ಮುಚ್ಚಿ ದೇವರಮುಂದೆ ನಿಂತುಕೊಂಡು "ಒಳ್ಳೇದ್ ಮಾಡಪ್ಪ" ಅಂತ ಕೇಳ್ಕೊಂಡೆ... ಕ್ಷಣಕ್ಷಣಕ್ಕೂ ಎದೆಬಡಿತ ಜೋರಾಗುತ್ತಿತ್ತು. ಆದರೆ ನನಗೆ ಕಾಡ್ತಾ ಇದ್ದಿದ್ದು ಒಂದೇ ಪ್ರಶ್ನೆ ಅವನು ಬರ್ತಾನಾ..?  ಅವತ್ತು ಜೋರ್ ಮಳೆ. ಸಂಜೆ ಹೊತ್ತಿನ ಲಾಸ್ಟ್ ಪಿರೆಡ್ ನಾನು ಪಾಠ ಮಾಡಬೇಕಿತ್ತು. ಬೇರೆ ಟೀಚರ್ಗಳು "7ನೇ ಕ್ಲಾಸ್ ಮಕ್ಕಳು ಬಹಳ ಲೂಟಿ, ಪಾಠ ಮಾಡಕ್ಕೆ ಬಿಡಲ್ಲ, ಕೋತಿಗಳು" ಅಂತ ಬೈತಾ ಇದ್ರು. ಆದರೆ ನನ್ನ ತರಗತಿಯಲ್ಲಿ ಮಕ್ಕಳು ತುಟಿ ಬಿಚ್ಚುತ್ತಿರಲಿಲ್ಲಾ. ಲಾಸ್ಟ್ ಪಿರೇಡ್, ಗಣಿತ ಪಾಠ ಬೇರೆ, ಆದ್ರೂ ಮಕ್ಕಳನ್ನು ಪಾಠದ ಕಡೆಗೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಒಂದು ನನ್ನ ಹತ್ತಿರ ಇತ್ತು. ಇನ್ನೇನು ಶಾಲೆ ಬಿಡಲಿಕ್ಕೆ ಐದು ನಿಮಿಷ ಇರಬೇಕಾದ್ರೆ ಕಿಟಕಿಯಲ್ಲಿ ಯಾರೋ ಇಣುಕುತ್ತಾ ಇದ್ದರು. ಮಳೆ ಜಾಸ್...