Posts

ಅವಳ್ಯಾಕೆ ನಗಲಿಲ್ಲಾ, ನನ್ನ ಮುಖ ನೋಡಿ...!?

Image
          ಇಂಜಿನಿಯರಿಂಗ್ ಓದುತ್ತಿದ್ದ ದಿನಗಳವು, ಫಿಸಿಕ್ಸ್ ಮತ್ತು ಕೆಮೆಸ್ಟ್ರಿ ಸೈಕಲ್ ಸರಿಯಾಗಿ ತುಳಿದು EC ಬ್ರಾಂಚ್ಗೆ ಎಂಟ್ರಿ ಆಗಿತ್ತು. ನಾನೊಬ್ಬ ಕಾರ್ನರ್ ಹುಡುಗ, ನನ್ನಷ್ಟಕ್ಕೆ  ನಾನು ಕಾಲೇಜಿಗೆ ಬರ್ತಾ ಇದ್ದೆ ಕಾರ್ನರ್ ಸೀಟ್ ನಲ್ಲಿ ಕುರ್ತಾ ಇದ್ದೇ , ಲೆಕ್ಚರ್ಸ್ ಗಳ ಪಾಠ ಇಷ್ಟ ಆದ್ರೆ ಕೇಳ್ತಾ ಇದ್ದೆ, ಇಲ್ಲದಿದ್ದರೆ ನನ್ನ ಕಲ್ಪನಾ ಲೋಕದಲ್ಲಿ ನನನ್ನು ನಾನು ಕಳೆದುಕೊಂಡು ಹಾಸ್ಟೆಲಿಗೆ ಹೋಗಿ ಬಿದ್ದುಕೊಳ್ಳುತ್ತ ಇದ್ದೇ. ಹನುಮಂತನ ವಂಶದವರು ನಾವು ಹಾಗಾಗಿ ಕಾಲೇಜು ಆರಂಭವಾಗಿ ಎರಡು ಸೆಂ ಕಳೆದ್ರು ಹುಡುಗರನ್ನು ಬಿಟ್ಟು ,ಹುಡುಗಿಯರ ಹತ್ರ ಅಷ್ಟಾಗಿ ಮಾತಾಡೋದು ಇರಲಿ, ಹುಡುಗಿಯರ ಕಡೆ ನೋಡೋದು ಕಮ್ಮಿ ಇತ್ತು . ಹುಟ್ಟಿನಿಂದ ಬಾಯ್ಸ್ ಸ್ಕೂಲ್ ನಲ್ಲಿ ಕಲಿತಿದ್ದಕ್ಕೆನೋ, ಗೊತ್ತಿಲ್ಲ ಹುಡುಗಿಯರ ಹತ್ತಿರ ಮಾತನಾಡಲಿಕ್ಕೆ ಸ್ವಲ್ಪ ಮುಜುಗರ ಜಾಸ್ತಿ .           ಹೀಗೆ ನಡೆತಿರಬೇಕಾದರೆ ಒಂದು ದಿನ ಮೇಡಂ ಕೇಳಿದ ಪ್ರಶ್ನೆಗೆ ಉತ್ತರ ಹೇಳಲಿಕ್ಕೆ, ಹುಡುಗಿಯರ ಕಡೆಯಿಂದ ಒಬ್ಬಳು ಎದ್ದು ನಿಂತ್ಲು . ಯಾರು ನೋಡೋಣ ಅಂತ ತಿರುಗಿದೆ, ಕತ್ತು ಉಳುಕಿತೋ ಏನೋ ಗೊತ್ತಿಲ್ಲ, ಹೇಳಿಕೇಳಿ ಕಾರ್ನರ್ ಸೀಟ್ ನೋಡಿ ನನ್ನ ಮಗಂದು ಈ ಕಡೆ ತಿರುಗಲೇ ಇಲ್ಲ, ನೋಡಿಕೊಂಡೇ ಕುಳಿತುಕೊಂಡೆ. ಅವತ್ತು ರಾತ್ರಿ ಯಾಕೋ ಜಾಸ್ತಿನೇ ನಿದ್ದೆ ಬರಲಿಲ್ಲ. ಮುಂದಿನ ದಿನದಿಂದ ಕಾಲೇಜಿಗೆ ಹೋಗಲಿ...

ಮುಗಿಲೂರಿಗೊಂದು ಪಯಣ...

Image
                    ಐಟಿ ಫೀಲ್ಡ್ ಅಂದ್ರೆ ಹಾಗೆ, ಕೆಲಸ ಕಮ್ಮಿ ಎಂಜೋಯ್ಮೆಂಟ್ ಜಾಸ್ತಿ. ವಾರಕ್ಕೊಂದು ಪಾರ್ಟಿ, ಮನಸ್ಸಾದಾಗ ಔಟಿಂಗ್ ನಡಿತ್ತಾನೇ ಇರುತ್ತೆ. ಇವೆಲ್ಲಾ ನಿರಂತರ ಕೆಲಸದ ಒತ್ತಡವನ್ನು ಹೊರಹಾಕಲಿಕ್ಕೆ ಅಂತ ಸಹಾ ಹೇಳ್ತಾರೆ.           ನಾನು ಕೂಡ ಮಂಗಳೂರಿನ ಒಂದು ದೊಡ್ಡ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇರೋದು. ಅವತ್ತು ಶುಕ್ರವಾರ, ರಾತ್ರಿ ನಮ್ಮ ಮನೆಯಲ್ಲಿ ಗೆಳೆಯರೆಲ್ಲಾ ಸೇರಿದ್ವಿ. ಅದಕ್ಕೆ ಸರಿಯಾಗಿ ಅವತ್ತು ಮಂಗಳೂರಿನಲ್ಲಿ ಜೋರು ಮಳೆ ಬೇರೆ. ಎಲ್ಲರೂ ಒಳ್ಳೆಯ ಹುಡುಗರೇ, ಆದ್ದರಿಂದ ಮಿರಿಂಡ,ಥಮ್ಸಪ್, ಕೋಲಾ, ಕುರ್ ಕುರೆ, ಪೊಟೆಟೋ ಚಿಪ್ಸ್ ಹಾಗೆಯೇ ಸ್ವಲ್ಪ ಮಾತು ಬಿಟ್ರೆ ಬೇರೆ ಏನು ಇರಲಿಲ್ಲಾ. ಒಬೊಬ್ಬರೇ ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಳ್ಳುತ್ತಾ ಇದ್ದರು. ಕೆಲವರು ಇನ್ನೊಬ್ಬರ ಕಾಲು ಏಳಿತಾ ಇದ್ದರೇ, ಕೆಲವರು ತಮ್ಮ ಡ್ರಿಮ್ಸ್, ಡ್ರಿಮ್ ಗರ್ಲ್ ಬಗ್ಗೆ ಹೇಳುತ್ತಾ ಇದ್ದರು. ಇವೆಲ್ಲವನ್ನು ಕೇಳಿಯೂ ಕೇಳದಂತೆ ಮಳೆ ತನ್ನಷ್ಟಕ್ಕೆ ತಾನು ಸುರಿಯುತ್ತಲಿತ್ತು.           4 ಬಾಟಲಿ ಮಿರಿಂಡ ಖಾಲಿಯಾಯ್ತು. ತಂದ ಚಿಪ್ಸ್ ಪ್ಯಾಕೆಟ್ ಗಳೆಲ್ಲಾ ಖಾಲಿಯಾಯ್ತು. ಡ್ಯಾನ್ಸ್ ಕೂಡ ಮಾಡಿಯಾಯ್ತು. ಅದ...

70 ವರ್ಷ ತುಂಬಿದ ಸ್ವತಂತ್ರ ಭಾರತೀಯ.

Image
                  ಭಾರತ ಸ್ವಾತಂತ್ರ್ಯವನ್ನು ಪಡೆದು ಇಲ್ಲಿಗೆ ಎಪ್ಪತ್ತು ವರ್ಷ ತುಂಬಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆವಾಗ ದೇಶ ಎಲ್ಲಿತ್ತು, ಇವಾಗ ಎಲ್ಲಿ ಬಂದು ನಿಂತಿದೆ ಎನ್ನುವುದು ಮುಖ್ಯವಾದ ವಿಷಯ. 1947  ಆಗಸ್ಟ್ 14 ರ ಮಧ್ಯರಾತ್ರಿ ಅನೇಕ ದೇಶಪ್ರೇಮಿಗಳ ಪ್ರಾಣ ತ್ಯಾಗದಿಂದ , ಹಿಂಸೆ ಮತ್ತು ಅಹಿಂಸಾತ್ಮಕ ಚಳವಳಿಗಳಿಂದ ನಮ್ಮ ದೇಶ ಸ್ವತಂತ್ರ ಭಾರತವಾಯಿತು. ಅಬ್ಬ ಬ್ರಿಟಿಷರ ಕಾಲ ಕಳೆದಾಯಿತು ಅನ್ನುವಷ್ಟರಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ರಾಕ್ಷಸರ ಉದಯ . ಈ ಚಂಡ ಮುಂಡರ ಅಟ್ಟಹಾಸದ ನಡುವಲ್ಲಿ ಭಾರತಾಂಬೆ ಅಭಿವೃದ್ಧಿಯ ಪಥದತ್ತ ಸಿಂಹವನ್ನೇರಿ ತನ್ನ ನಡೆ ಆರಂಭಿಸಿದಳು. ತನ್ನ ಮೊದಲನೆಯ ಹೆಜ್ಜೆ ಪೂರ್ಣಗೊಳಿಸುವಷ್ಟರಲ್ಲಿ ರಾಮರಾಜ್ಯದ ಕನಸನ್ನು ಹೊತ್ತ, ಸ್ವಾತಂತ್ರ್ಯದ ರೂವಾರಿ ಗಾಂಧೀಜಿಯ ಅಗಲುವಿಕೆ ಆಘಾತವನ್ನೇ ನೀಡಿತು. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಯುದ್ಧ , ತುರ್ತು ಪರಿಸ್ಥಿತಿ, ರಾಜಕೀಯ ಅಸಮತೋಲನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿರಸ್ಕಾರ, ಭಯೋತ್ಪಾದಕರ ದಾಳಿ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ಏಳು ಬೀಳುಗಳನ್ನು ಕಂಡು ಎಪ್ಪತ್ತು ಹೆಜ್ಜೆಗಳನ್ನು ಪೂರ್ಣಗೊಳಿಸಿದೆ .           ಭಾರತದ ರಾಜಕೀಯ ವ್ಯವಸ್ಥೆ ಎನ್ನುವುದು ಭಾರತಾಂಬೆಯ ಸಿಂಹವಾಹನದಂ...

ನಿನ್ನ ಮದುವೆ ಯಾವಾಗ...?

Image
          ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರ ಮದುವೆಗೆ ತೆರಳಿದಾಗ ಒಂದು ಆಶ್ಚರ್ಯ ಕಾದಿತ್ತು. ಇಷ್ಟು ದಿನಾ "ನಿನಗೆ ಮಾರ್ಕ್ ಎಷ್ಟು ?", "ಏನು ಓದುತ್ತಾ ಇರೋದು ?", "ಯಾವ ಕಾಲೇಜು ?", "ಎಲ್ಲಿ ಕೆಲಸ ಮಾಡಿಕೊಂಡಿರೋದು ?", "ಸಂಬಳ ಎಷ್ಟು ?" ಅಂತೆಲ್ಲಾ ಕೇಳುತ್ತಿದ್ದ ಸಂಬಂಧಿಕರ ಪ್ರಶ್ನೆ ಅವತ್ತು ಬೇರೆ ಆಗಿತ್ತು. ಭೇಟಿಯಾದ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡಪ್ಪ, ದೊಡಮ್ಮ, ಅತ್ತೆ, ಮಾವ ಯಾರು ಸಿಕ್ಕಿದ್ರು "ಮುಂದೆ ನಿಂದೆ ಮದುವೆ", "ನಿನ್ನ ಮದುವೆ ಯಾವಾಗ ?", "ನೀನೆ ನೋಡಿಕೊಂಡಿದ್ಯೋ, ಅಥವಾ ತಂದೆ ತಾಯಿಗೆ ಬಿಟ್ಟಿದ್ಯೋ" ಅನ್ನೋ ಮಾತುಗಳು ಹೆಚ್ಚಾಗಿತ್ತು. ಇಂತಹಾ ಮಾತುಗಳನ್ನು ಕೇಳಿ ಮನಸ್ಸು ಕುಣಿತಾ ಇದ್ರೂ, ತೋರಿಸಿಕೊಳ್ಳಲಿಕ್ಕೆ ಆಗ್ತಾ ಇರಲಿಲ್ಲಾ.           ಇಂತಹಾ ಪ್ರಶ್ನೆಗಳು ನನಗೆ ಮಾತ್ರ ಅಲ್ಲಾ, ಶಿಕ್ಷಣ ಮುಗಿಸಿ ಒಳ್ಳೆಯ ಕೆಲಸದಲ್ಲಿರುವ, ೨೩ ರಿಂದ ೨೮ ವರ್ಷ ವಯಸ್ಸಿನಲ್ಲಿರುವ ಹುಡುಗ/ಹುಡುಗಿಯರಿಗೆ ಸರ್ವೇ ಸಾಮಾನ್ಯ. ನನ್ನಂತೆ ಈ ವಯೋಮಿತಿಯಲ್ಲಿರುವ ಅನೇಕರಿಗೆ ಕಾಡುತ್ತಿರುವ ಪ್ರಶ್ನೆ ಒಂದೇ "ಮದುವೆ ಆಗಲು ಸರಿಯಾದ ವಯಸ್ಸು ಯಾವುದು ?". ಈ ಸಮಯದಲ್ಲಿ ಶಿಕ್ಷಣ ಮುಗಿಸಿ, ಒಂದು ಕೆಲಸ ಹಿಡಿದು ಒಂದು ಹಂತಕ್ಕೆ ಬಂದ್ವೀ ಅಂತಾ ಹೇಳ್ಬೇಕಾದ್ರೆ "ಮದುವೆ" ಅನ್ನುವ ಪದ ನಮ್ಮ ಜೀವನದ...

"ತಂದೆ ಎನ್ನುವ ಪದವಿ" ಗಂಡು ಮಕ್ಕಳ ಕಣ್ಣಲ್ಲಿ...!!

Image
                  "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ" ಎನ್ನುವ ಮಾತಿಗನುಸಾರವಾಗಿ, ನಮ್ಮ ಸಮಾಜದಲ್ಲಿ ತಾಯಿಗೆ ಒಂದು ಉತ್ತಮವಾದ ಸ್ಥಾನಮಾನವನ್ನು ಕಲ್ಪಿಸಿದ್ದೇವೆ. ಆದರೆ ತಂದೆಗೆ ತಾಯಿಯಷ್ಟು ಮಹತ್ವವನ್ನು ನಮ್ಮ ಸಮಾಜ ಕೊಟ್ಟಂತೆ ಕಾಣುತ್ತಿಲ್ಲಾ. ಅದರಲ್ಲೂ ಗಂಡು ಮಕ್ಕಳಿಗೆ ತಂದೆ ಒಬ್ಬ ವಿಲನ್. ತಂದೆ ಅನ್ನುವುದು ಒಂದು ಅಧಿಕಾರ,ಅದೊಂದು ಪದವಿ,ಅದೊಂದು ಜವಾಬ್ಧಾರಿ. ಒಂದು ಒಳ್ಳೆಯ ಗಂಡು ಮಗನಾಗಿ ತಂದೆ ಬಗ್ಗೆ ಹೇಳುವ ಒಂದು ಸಣ್ಣ ಪ್ರಯತ್ನ.           ತಂದೆ ಎನ್ನುವ ಪದ,ಮಗುವಿನ ಜನನದೊಂದಿಗೆ ಜನ್ಮ ತಾಳುತ್ತೆ. ಅದರ ಜೊತೆ ಒಂದು ಜೀವದ ಜವಾಬ್ಧಾರಿಯೂ ಆ ಪದವಿಯ ಮೇಲೆ ಬೀಳುತ್ತೆ. ಆ ಕ್ಷಣದಲ್ಲಿ ತಂದೆಗೆ ಮಗನಾಗಿದ್ದವನು ತನ್ನ ಮಗುವಿಗೆ ತಂದೆ ಆಗುತ್ತಾನೆ. ಇಷ್ಟು ದಿನಗಳ ಕಾಲ ತಾನು ನಿಂತು ವೀಕ್ಷಿಸುತ್ತಿದ್ದಂತಹ ಸ್ಥಾನದಲ್ಲಿ ಕೂರುವ ಸರದಿ ಇವನದ್ದಾಗಿರುತ್ತದೆ. ಅದರಲ್ಲೂ ಹೆಣ್ಣು ಮಗು ಹುಟ್ಟಿತು ಅಂತಾ ಬೇಜಾರು ಮಾಡಿಕೊಳ್ಳುವವರು ಒಂದು ಕಡೆ ಆದರೆ, "ಮಗು ಯಾವುದಾದರೂ ಆಗಲಿ, ಹೆಂಡತಿ ಮಗು ಚೆನ್ನಾಗಿದ್ದರೆ ಸಾಕು" ಅಂತಾ ಸಂತೋಷ ಪಡುವವರು ಒಂದು ಕಡೆ. ಹಾಗೆಯೇ  "ನನಗೆ ತಂದೆ ಆಗುವ ಭಾಗ್ಯ ಯಾವಾಗ ಕರುಣಿಸುತ್ತಿಯಪ್ಪ" ಅಂತಾ ದೇವರ ಬಳಿ ಬೇಡಿಕೊಳ್ಳುವವರೂ ಒಂದು ಕಡೆ.          "ಬೇಜವ್ಧಾರಿ ಹುಡ...

ಸಣ್ಣ ಸಣ್ಣ ವಿಷಯದಲ್ಲಿರುವ ದೊಡ್ಡ ದೊಡ್ಡ ಸಂತೋಷಗಳು...

Image
                    ಒಂದು ಶುಕ್ರವಾರ ಸಂಜೆ,ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಇಬ್ಬರು ಯುವಕರು ಎದುರು ಬದುರು ಕೂತು ಹೋಗ್ತಾ ಇರ್ತಾರೆ. ಒಬ್ಬ ತಾನು ದೊಡ್ಡ ಸಂಗೀತ ನಿರ್ದೇಶಕ ಆಗಬೇಕು ಅಂತಾ, ಇದ್ದ ಕೆಲಸವನ್ನು ಬಿಟ್ಟು, ಮನೆಯವರ ಮಾತು ಕೇಳದೇ, ಆ ರೈಲಿನಲ್ಲಿ ಬೆಂಗಳೂರಿನ ದಾರಿ ಹಿಡಿದವನಾದರೆ. ಇನೊಬ್ಬ ಮೈಸೂರಿನಲ್ಲಿ ಕೆಲಸದಲ್ಲಿದ್ದುಕೊಂಡು, ತನ್ನ ದಿನದ ಕೆಲಸವನ್ನೆಲ್ಲಾ ಮುಗಿಸಿ, ವಾರಾಂತ್ಯವನ್ನು ತನ್ನ ಮನೆಯವರೊಂದಿಗೆ ಕಳೆಯಲು ಹೊರಟಿರುತ್ತಾನೆ. ಹೀಗೆ ಇಬ್ಬರು ಮಾತನಾಡಿಕೊಂಡು ಪರಿಚಯ ಮಾಡಿಕೊಳ್ಳುತ್ತಾರೆ. ಕೆಲಸದಲ್ಲಿರುವ ಹುಡುಗ ಸಂಗೀತ ನಿರ್ದೇಶಕನಾಗಬೇಕು ಅಂತಾ ಹೊರಟವನ ಬಳಿ ಕೇಳುತ್ತಾನೆ "ಯಾಕೆ ನೀವು ಅಷ್ಟು ಒಳ್ಳೇಯ ಕೆಲಸ ಬಿಟ್ಟು, ಈ ದಾರಿ ಹಿಡಿದಿದ್ದೀರಿ" ಅಂತಾ. ಅದಕ್ಕೆ ಅವನು "ನನಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಎತ್ತರದ ಹಂತಕ್ಕೆ ಹೋಗಬೇಕು, ಸಾವಿರಾರು ಜನರ ಮನಸ್ಸು ಗೆಲ್ಲಬೇಕು, ನನ್ನ ಸಂಗೀತಕ್ಕೆ ಜನ ಹುಚ್ಚೆದ್ದು ಕುಣಿಯಬೇಕು, ಅನ್ನೋ ಆಸೆ ಇದೆ, ಅದಕ್ಕೋಸ್ಕರ ಈ ಪಯಣ" ಅಂತಾನೆ. ಹಾಗೆಯೇ ಅವನು ಕೆಲಸದಲ್ಲಿರುವ ಹುಡುಗನಿಗೆ ಮರು ಪ್ರಶ್ನೆ ಹಾಕುತ್ತಾನೆ "ನಿಮಗೆ ಇದೇ ತರಹ ಯಾವುದೇ ಗುರಿಗಳು ಇಲ್ಲವಾ" ಅಂತಾ. ಅದಕ್ಕೆ ಅವನು "ನನಗೂ ಇದೇ,ಈಗ ಇರುವ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋಗಬೇಕು, ನನ್ನ ತಂಗಿಗೆ ಒಳ್ಳೇಯ ಹುಡುಗನನ್ನು ನೋಡಿ ಮದ...

ಸಾಫ್ಟವೇರ್ ತವರೂರಲ್ಲಿ ನಿರುದ್ಯೋಗಿ ಕನ್ನಡಿಗ...

Image
                  ಸಾಫ್ಟವೇರ್ ಕ್ರಾಂತಿ ಭಾರತದಲ್ಲಿ ಪಾದಾರ್ಪಣೆಗೊಂಡ ಬಳಿಕ ಐಟಿ ಕ್ಷೇತ್ರದ ರಾಜಧಾನಿ ಹೊಣೆ ವಹಿಸಿಕೊಂಡಿದ್ದು ನಮ್ಮ ಕರ್ನಾಟಕದ ಬೆಂದಕಾಳೂರು A/s ಬೆಂಗಳೂರು. ಕೆಲವೇ ವರ್ಷಗಳಲ್ಲಿ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಹೆಸರನ್ನು ಕೇಳುವಂತೆ ಮಾಡಿದ್ದು ಇದೇ ಬೆಂಗಳೂರು. ಇಲ್ಲಿನ ವಾತಾವರಣ,ಸೌಲಭ್ಯಗಳ ಪೂರೈಕೆ,ಐಟಿ ಕ್ಷೇತ್ರಕ್ಕೆ ಕರ್ನಾಟಕ ಸರ್ಕಾರ ನೀಡುತ್ತಿರುವ ಸಹಕಾರದಿಂದ ಬಹುಬೇಗ ಅನೇಕ ಕಂಪೆನಿಗಳಿಗೆ ಬೆಂಗಳೂರನ್ನು ತಮ್ಮ ಪ್ರಮುಖ ಕಾರ್ಯಕ್ಷೇತ್ರ ಮಾಡಿಕೊಳ್ಳಲು ಸಹಕಾರಿಯಾಯಿತು. ಇತ್ತಿಚಿನ ವರದಿ ಪ್ರಕಾರ ಭಾರತದಲ್ಲಿರುವ ಒಟ್ಟು ಐಟಿ ಕಂಪೆನಿಗಳಲ್ಲಿ 35% ಕಂಪೆನಿಗಳು ಬೆಂಗಳೂರಿನಲ್ಲಿವೆ. ಸಣ್ಣ ಪುಟ್ಟ ಕಂಪೆನಿಗಳು ಸೇರಿ ಒಟ್ಟು 5000 ಕಂಪೆನಿಗಳು ಬೆಂಗಳೂರು ಒಂದರಲ್ಲೆ ಇವೆ ಅನ್ನುವುದು ಇತ್ತಿಚಿನ ಅಂಕಿ ಅಂಶ. ಐಟಿ ದಿಗ್ಗಜಗಳಾದ ಇನ್ಫೋಸಿಸ್,ವಿಪ್ರೋ,ಮೈಂಡ್ ಟ್ರೀ,ಎಂಪಸಿಸ್ ಇನ್ನೂ ಮುಂತಾದವುಗಳಿಗೆ ಬೆಂಗಳೂರು ಪ್ರಧಾನ ಕಛೇರಿ ಆದರೆ, ವಿದೇಶಿ ಕಂಪೆನಿಗಳಾದ ಇನಟೆಲ್,ಟೆಕ್ಸಾಸ್ಇನ್ಸಟ್ರುಮೆಂಟ್ಸ್,ಬೋಷ್,ಯಾಹೂ,ಸಾಪ್ ಲಾಬ್ಸ್ ಅಂತಹವುಗಳಿಗೆ ಭಾರತದ ಪ್ರಧಾನ ಕಛೇರಿ ಬೆಂಗಳೂರು. ಇಷ್ಟೇ ಅಲ್ಲದೇ ಕೆಲವು ಕಂಪೆನಿಗಳು ಬೆಂಗಳೂರು ಮಾತ್ರವಲ್ಲದೇ ಮೈಸೂರು, ಹುಬ್ಬಳ್ಳಿ,ಮಂಗಳೂರಿನಲ್ಲೂ ಕಾರ್ಯ ನಿರ್ವಹಿಸುತ್ತಿವೆ.           ಈ ಕಂ...