Posts

ಲಾಕ್ ಡೌನ್ ಅಲ್ಲಿ ಸಿಕ್ಕ ಆ ಕೀಲಿ ಕೈ...!!

Image
ಲಾಕ್ ಡೌನ್, ಲಾಕ್ ಡೌನ್, ಲಾಕ್ ಡೌನ್. ಎಲ್ಲಿ ಕೇಳಿದ್ರು ಇದೇ ಪದ. ಟಿವಿ ಹಾಕ್ಲಿ, ರೇಡಿಯೋ ಟ್ಯೂನ್ ಮಾಡ್ಲಿ, ಪೇಪರ್ ಪುಟ ತಿರುಗಿಸಿಲಿ, ವಾಟ್ಸಾಪ್ ಸ್ಕ್ರಾಲ್ ಮಾಡಿದ್ರೂ ಕೇಳ್ತಾ ಇದ್ದಿದ್ದು ಇದು ಒಂದೇ ಪದ. ಹೇಗಪ್ಪಾ ಮುಂದಿನ ದಿನಗಳು, ಬಸ್ಸಿನಲ್ಲಿ ಆಫೀಸ್ಗೆ ಹೋಗ್ಬೇಕಾದ್ರೆ ಯಾರ್, ಯಾರು ಎಲ್ಲೆಲ್ಲಿ ತಾಗಿಸುತ್ತಾರೋ ಅಂತ ಹೆದರಿಕೊಳ್ಳುವುದರೊಳಗೆ ಕಂಪೆನಿ ಕಂಪ್ಯೂಟರ್ ಸೆಂಟರ್ ಅನ್ನೇ ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಬಿಟ್ಟಿತ್ತು. "ವೇರ್ ಪ್ರೊಫೆಷನಲ್ ಲೈಫ್ ಮೀಟ್ಸ್ ಪರ್ಸನಲ್" ಅಂತ ಸ್ಟೇಟಸ್ ಹಾಕ್ಕೊಂಡು ಮನೆ ಅಂಗಳದಲ್ಲಿ ನಮ್ಮ ಪ್ರೋಗ್ರಾಮಿಂಗ್ ಅಂಗಡಿ ಓಪನ್ ಆಗೆ ಬಿಡ್ತು. ಅಲ್ಲಿ ಅಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾದವು, ಇಲ್ಲಿ ಇಷ್ಟು ಜನರು ಪ್ರಾಣ ಕಳೆದುಕೊಂಡರು, ಅದ್ಯಾವುದೋ ಸಪ್ತ ಸಾಗರದಾಚೆ ಕೋಟಿಗಟ್ಟಲೆ ಜನರು ಕೆಲಸ ಕಳೆದುಕೊಂಡರಂತೆ, ಕೆಲವರು ತಿನ್ಲಿಕ್ಕೆ ಇಲ್ಲದೇ, ಊರಿಗೆ ಹೋಗಲು ಆಗದೆ ನಿರಾಶ್ರಿತರಾಗಿದ್ದಾರೆ, ಎನ್ನುವ ಸುದ್ದಿಗಳು ಸದಾ ಕಂಪ್ಲೇಂಟ್ ಮಾಡುವ ನಮ್ಮ ಜೀವನದಲ್ಲೂ ದೇವರು ಇದ್ದಾನೆ ಅಂತ ಒಂದ್ ಸಾರಿ ಅನಿಸಿದ್ದು ಸುಳ್ಳಲ್ಲ. ಕರೋನಾ ಅನ್ನುವ ಒಂದು ರೋಗ ಜನರು ಅನೇಕ ವರ್ಷಗಳಿಂದ ಅಸಾಧ್ಯ ಅಂದುಕೊಂಡಿದ್ದನ್ನು ಮಾಡಿಸಿಕೊಟ್ಟಿದೆ. ರಾತ್ರೋರಾತ್ರಿ ಅದೆಷ್ಟೋ ಕಂಪೆನಿಗಳು ತಮ್ಮ ಕಾರ್ಯ ನಿರ್ವಹಣೆಯನ್ನು ಕೆಲಸಗಾರರ ಮನೆಯ ಅಂಗಳಕ್ಕೆ ಸ್ಥಳಾಂತರಿಸಿವೆ. "ಆಫೀಸ್ನಲ್ಲೇ ಓತ್ಲಾ ಹೊಡಿತಾರೆ, ಇನ್ನು ...

ಬಸ್ಸಿನ ಕೊನೆಯ ಸೀಟು...!!

Image
ಮಲೆನಾಡ ಮಡಿಲಲ್ಲಿ ಒಂದು ಊರು, ಆ ಊರಿನಲ್ಲಿ ಈಗ್ಲೋ, ಆಗ್ಲೋ ಬೀಳು ಒಂದು ಬಸ್ ಸ್ಟಾಪ್. ದಿನಕ್ಕೆ ಒಂದೋ, ಎರಡೋ ಬಾರಿ ಬರುವ ಬಸ್ಸು. ಕಣ್ಣು ಮುಚ್ಚಿಕೊಂಡು ಸುರಿಯುತ್ತಿರುವ ಮಳೆ. ದಾರಿಯಲ್ಲಿ ಯಾರೋ ಹಸಿ ಹುಲ್ಲು ಸೈಕಲ್ ಕ್ಯಾರಿಯರ್ ಅಲ್ಲಿ ಇಟ್ಕೊಂಡು ಹೋಗ್ತಾ ಇದ್ರು. "ಯಜಮಾನ್ರೆ, ಇಲ್ಲಿ ಬಸ್ಸು ಅನ್ನುವಂಥದ್ದು ಏನಾದ್ರು ಬರುತ್ತಾ."  "ಎರಡು ಬಸ್ ಬತ್ತಾವೆ, ಅವರಿಗೆ ಟೇಮ್ ಇಲ್ಲ, ಏನೂ ಇಲ್ಲ. ಕೆಲವು ಸಾರಿ ಮರ ಬಿತ್ತು, ಬಸ್ ಹೊಂಡಕ್ಕೆ ಬಿತ್ತು ಅಂತ ಬರವೂ ಬರಲ್ಲ, ಏನೋ ಕಣಪ್ಪ ಬಂದ್ರೆ ನಿನ್ನ ಪುಣ್ಯ. ಮಳೆ ಬರಂಗ್ ಅದೇ, ಬಸ್ ಸ್ಟಾಂಡ್ ಬೇರೆ ಸೋರತ್ತದೆ, ಬನ್ನಿ ನಮ್ಮ ಮನೆ ಇಲ್ಲೇ ಇದೆ. ಬಸ್ ಬರೋ ತನಕ ಸ್ವಲ್ಪ ಆರಾಮ ಮಾಡಿ" ಆ ಯಜಮಾನರ ಮನೆಗೆ ಹೋಗಿ, ಒಳ್ಳೆ ಮಲ್ನಾಡ್ ಕಾಫಿ ಹೀರಿಕೊಂಡು ಕೂತ್ಕೊಂಡ್ ಇದ್ದೆ. ಅಷ್ಟರೊಳಗೆ ಎಲ್ಲಿಂದಲೋ ಬಸ್ನ ಹಾರ್ನ್ ಕೇಳಿಸಿತು. "ಬಸ್ ಬಂತು ಕಾಣುತ್ತೆ, ಹೋಗಪ್ಪಾ, ಬೇಗ ಹೋಗು ಬಸ್ಸ್ಟಾಂಡಲ್ಲಿ ಯಾರೂ ಇಲ್ಲ ಅಂದ್ರೆ ಹಂಗೆ ಹೊಂಟೋಗ್ತಾನೆ". ಎದ್ನೋ, ಬಿದ್ನೋ ಅಂತ ಓಡ್ಕೊಂಡು ಹೋಗಿ ಬಸ್ ಹತ್ಕೊಂಡೆ. ಆದ್ರೆ ಬಸ್ ತುಂಬಿತ್ತು. ನನಗೆ ಸಿಕ್ಕಿದ್ದು ಕೊನೆಯ ಸೀಟು. ಕೊನೆಯ ಸೀಟಿನಲ್ಲಿ ಕೂತ ಮನಸ್ಸು ಆಲೋಚನೆಯಲ್ಲಿ ಮಗ್ನವಾಯಿತು. ಈ ಬಸ್ ಹತ್ತಬೇಕೋ, ಬೇಡವೋ ಅನ್ನುವ ಕನ್ ಫ್ಯೂಷನ್ ನಲ್ಲಿ ಇರುವವರಿಗೆ ಹೆಚ್ಚಾಗಿ ಸಿಗೋದೇ ಈ ಕೊನೆ ಸೀಟು. ಕೆಲವರು ಯಾಕಪ್ಪಾ ಹತ್ತಿದ್ದು...

ಸೀತಾವರಂಗ (ಒನ್ ವೀಕೆಂಡ್ ಬೈಕ್ ರೈಡ್).

Image
ಯಾಕೋ ಲೈಫ್ ತುಂಬಾ ಅಂದ್ರೆ ತುಂಬಾ ಬೋರ್ ಹೊಡಿತಾ ಇದ್ದ ಕಾಲ ಅದು. ಹತ್ತಿರ ಇದ್ದ ಒಳ್ಳೆಯ ಫ್ರೆಂಡ್ಸ್ ಎಲ್ಲ ಊರು ಬಿಟ್ಟಿದ್ದರು. ಕೈಯಲ್ಲಿ ಮಾಡೋಕೆ ಹೇಳಿಕೊಳ್ಳುವ ಕೆಲಸ ಏನೂ ಇರಲಿಲ್ಲ. "ಲೈಫ್ ಈಸ್ ಬೋರಿಂಗ್" ಅಂತ ಸ್ಟೇಟಸ್ ಹಾಕಿಕೊಂಡು ಕೂತಿದ್ದೆ. ಯಾರೋ ಸ್ಟೇಟಸ್ ಗೆ ರಿಪ್ಲೈ ಕೊಟ್ಟು "ಎಲ್ಲಾದ್ರೂ ಹೋಗಿ ಬಂದ್ರಿ, ಚೇಂಜ್ ಸಿಗುತ್ತೆ" ಅಂದ್ರು. ನನಗೂ ಸರಿ ಅನಿಸ್ತು. ಆಗತಾನೇ ಹೊಸದಾಗಿ ಒಂದಾಗಿದ್ದ, ಒಂದೇ ರೀತಿ ಯೋಚನೆ ಹೊಂದಿದ್ದ ಹುಡುಗರ ಜೊತೆ ಶನಿವಾರ ಹೊರಡೋಕೆ ಪ್ಲಾನ್ ಮಾಡಿದ್ವಿ. ಹೆಚ್ಚಿನ ಹುಡುಗರ ಜೊತೆ ಬೈಕ್ ಇದ್ದ ಕಾರಣ ಈ ಸಾರಿ ಬೈಕ್ ರೈಡ್ ಮಾಡೋಣ ಅಂತ ನಿರ್ಧಾರ ಕೂಡ ಆಯ್ತು. ಆದ್ರೆ ಹೋಗೋದೆಲ್ಲಿಗೆ...? ಅನ್ನೋದೇ ದೊಡ್ಡ ಪ್ರಶ್ನೆ. ಬೈಕಲ್ಲಿ ಹೋಗೋದು ಅಂದ ತಕ್ಷಣ ಮನೆಯಲ್ಲಿ ಬೇರೆ "ಹೆಚ್ಚು ದೂರ ಹೋಗ್ಬೇಡಿ ಸಂಜೆಯೊಳಗೆ ಮನೆಗೆ ಬನ್ನಿ" ಅಂತ ಹೇಳಿದ್ರು. ತುಂಬಾ ಯೋಚನೆ ಮಾಡಿ, ಮಂಗಳೂರು ಆಸುಪಾಸಿನಲ್ಲಿರುವ ಪ್ರವಾಸಿ ಸ್ಥಳಗಳ ಪಟ್ಟಿ ಮಾಡಿ ಕೊನೆಗೆ ಯಾರೋ ಫ್ರೆಂಡ್ಸ್ ಹಾಕಿರುವ ಸ್ಟೇಟಸ್ ನಿಂದ ಮುಗುಳುನಗೆ ಚಿತ್ರದ ಮೂರನೇ ಲವ್ ಸ್ಟೋರಿ ಚಿತ್ರೀಕರಣ ನಡೆಸಿದ ವರಂಗ ಹತ್ತಿರದಲ್ಲೇ ಇರೋದು ತಿಳಿದು ಬಂತು. ಹಾಗೆಯೇ ಹೆಬ್ರಿ ಹತ್ತಿರದ ಸೀತಾ ಫಾಲ್ಸ್ ಅಥವಾ ಕೂಡ್ಲು ಫಾಲ್ಸ್ ಕೂಡ ಇದಕ್ಕೆ ಹತ್ತಿರ ಇರೋದು ತಿಳಿಯಿತು. ಇವೆರಡು ಸ್ಥಳಗಳಿಗೆ ಪ್ರವಾಸ ಮಾಡೋದು ಅಂತ ನಿರ್ಧಾರ ಮಾಡಿದ್ವಿ. ...

ಜೋಳದ ರೊಟ್ಟಿ ಮತ್ತು ಕೊಬ್ಬರಿಯೆಣ್ಣೆ (ಇದು ಹುಬ್ಬಳ್ಳಿ ಹೈದನ ಪ್ರೇಮಕಥೆ).

Image
ಮೂಲ : once a upon a time in  Infosys ಲೇಖಕರು : ಅಂಕುರ್ ಕೌಶಲ್. ಕನ್ನಡಕ್ಕೆ : ಗಣೇಶ ಬರ್ವೆ ಮಣೂರು . ಮಳೆಗಾಲದಲ್ಲಿ, ಸಂಜೆ ಹೊತ್ತಲ್ಲಿ ರಸ್ತೆ ಪಕ್ಕ ಇರುವ ಕಾಫಿ ಶಾಪ್ ನಲ್ಲಿ ಬಿಸಿ ಬಿಸಿ ಕಾಫಿ ಹೀರುವಾಗ ಆಪ್ತ ಗೆಳೆಯ ಹೇಳಿದ ಒಂದು ಇಂಗ್ಲಿಷ್ ಕಥೆ. ಅಂತರ್ಜಾಲದಲ್ಲಿ ಜಾಲಾಡಿ ಕಥೆಯನ್ನು ಹುಡುಕಿ ಓದಿದಾಗ ಅನಿಸಿದ್ದು ಒಂದೇ ಇದನ್ನು ಕನ್ನಡದ ಓದುಗರಿಗೆ ಉಣ ಬಡಿಸಿದರೆ ಹೇಗಿರುತ್ತೆ ಅಂತಾ. ಹತ್ತು ವರ್ಷ ಹಳೆಯ 'ಒನ್ಸ್ ಅಪೋನ್ ಅ ಟೈಂ ಇನ್ ಇನ್ಫೋಸಿಸ್' ಅನ್ನುವ ಇಂಗ್ಲಿಷ್ ಕಥೆಯನ್ನು, ನೈಜತೆಗೆ ಧಕ್ಕೆ ಬರದಂತೆ, ಕನ್ನಡದ ಪರಿಸರಕ್ಕೆ ಹೊಂದುವಂತೆ, ಕನ್ನಡಕ್ಕೆ ಭಾಷಾಂತರಿಸುವ ಸಣ್ಣ ಪ್ರಯತ್ನ. ಬನ್ನಿ ಕಥೆ ಒಳಗೆ ಹೋಗೋಣ. (ಓದುವ ಮುನ್ನ : ಮನಸ್ಸನ್ನು ಓಪನ್ ಮಾಡ್ಕೊಳಿ...ನಿಮ್ಮ ಇಯರ್ ಫೋನ್ ಹತ್ತಿರ ಇದ್ರೆ ಕನೆಕ್ಟ್ ಮಾಡ್ಕೊಳಿ...ಮೂರು ಸುಂದರವಾದ ಹಾಡುಗಳಿವೆ...ಹಾಡು ಬರೆದ ಜಾಗದಲ್ಲಿ ಅವ್ಗಳನ್ನು ಕೇಳಿ ಮುಂದೆ ಹೋಗಿ...ಈ ಕಥೆ ಒಂದು ಸುಂದರವಾದ ಸಿನಿಮಾ ನಿಮಗೆ ತೋರಿಸತ್ತೆ.) ಬೆಳ್ಳಗೆ ೧೧ ಗಂಟೆಯ ಸುಮಾರು. ನಾನು ನನ್ನ ಗಂಟು ಮೂಟೆಗಳನ್ನು ಕಟ್ಟಿಕೊಂಡು, ನನ್ನನ್ನು ಗೇಟ್ ತನಕ ಬಿಡಲಿಕ್ಕೆ ಬರುವ ವಾಹನಕೋಸ್ಕರ, ಮೈಸೂರಿನ ಇನ್ಫೋಸಿಸ್ ನಲ್ಲಿ ನನ್ನ ಹಾಸ್ಟೆಲ್ ಎದುರು ಕಾಯ್ತಾ ಇದ್ದೆ. ಹೌದು ನೀವು ಓದಿದ್ದು ಸರಿಯಾಗೇ ಇದೆ. ಇನ್ಫೋಸಿಸ್ ಭಾರತದ ಐಟಿ ದಿಗ್ಗಜಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೈಸೂರ...

ನಿನ್ನ ಮದುವೆಯ ಕರೆಯೋಲೆ

Image
ಭಾಗ - ೧ ಸುಂಯ್ ಎಂದು ಬಿಸುವ ತಂಗಾಳಿ ಜೊತೆ ಮೇ ತಿಂಗಳಿನಲ್ಲಿ ವರುಣ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಹಾಜರಾಗಿದ್ದ. ಏಪ್ರಿಲ್ ಮೇ ಬಂತು, ಮದುವೆ ಸೀಸನ್ ಶುರುವಾಯ್ತು, ಇನ್ನು ಯಾರ್ ಗರ್ಲ್ ಫ್ರೆಂಡ್ ಯಾರ ಹೆಂಡ್ತಿ ಆಗ್ತಾಳೋ, ಯಾರ್ ಬಾಯ್ ಫ್ರೆಂಡ್ ಯಾರ ಗಂಡ ಆಗ್ತಾನೋ, ಅನ್ನೋ ಮಿಮ್ಸ್ ಓದಿಕೊಂಡು ನಾನು ಕಾಫಿ ಡೇಯಲ್ಲಿ ಕೂತ್ಕೊಂಡು ಇದ್ದೇ. ತಕ್ಷಣ ನನ್ನ ಮೊಬೈಲ್ಗೆ ಒಂದು ಕಾಲ್ ಬಂತು. ಅದು ಅವಳೇ ಸಹನಾ, “ತಣ್ಣೀರುಬಾವಿ ಬೀಚ್ ಹತ್ರಾ ಬರ್ತಿಯಾ..? ಏನೋ ಮಾತಾಡ್ಬೇಕು..” ಅಂತಾ ಕರೆದ್ಲು. ತಡಮಾಡಲಿಲ್ಲ ಹುಡುಗೀರು ಕರೆದರೆ ಓಡಿ ಹೋಗುವ ಬಾಯ್ಸ್ ಗೇನು ಕಮ್ಮಿಯಿಲ್ಲ ಬಿಡಿ,  ಆದ್ರೆ ನಾನು ಅಂಥವನಲ್ಲ ನಡೆದುಕೊಂಡೆ ಹೋದೆ. ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವಳು ಕರೆದಿದ್ದು ನನ್ನನ್ನು ಅವಳ ಮದುವೆಗೆ ಇನ್ವೈಟ್ ಮಾಡಲಿಕ್ಕೆ ಅಂತ. ಹುಡುಗಿಯರೇ ಹಾಗೆ ಕಣ್ರೀ ಲವ್ ಸ್ಟಾರ್ಟ್ ಮಾಡೋದು ಕಾಫಿ ಡೇಯಲ್ಲಿ , ಆದ್ರೆ ಅದನ್ನು ಎಂಡ್ ಮಾಡೋದು ಇಂಥ ಬೀಚ್ಗಳ ಹತ್ರಾ ಅಥವಾ ಹೊಳೆ ಹತ್ರ. ಶಾಕ್ ಗೆ ಹಾರ್ಕೊಂಡು ಸತ್ತರೆ ಸಾಯಲಿ ಅಂತ ಇರಬಹುದು..? ನನಗಂತೂ ಗೊತ್ತಿಲ್ಲ. ಹಾಗಂತ ಅವಳು ನನ್ನ ಲವರ್ ಅಲ್ಲಾ, ನಾನು ಅವಳ ಬಾಯ್ ಫ್ರೆಂಡ್ ಅಲ್ಲಾ, ನಾನು ಅವಳ ಒಬ್ಬ ಬೆಸ್ಟ್ ಫ್ರೆಂಡ್ ಅಷ್ಟೇ. ಅವಳು ಹೋದ ಮೇಲೆ ಎಲ್ಲಿಂದಲೋ ಗೊತ್ತಿಲ್ಲ ಮನಸ್ಸಲ್ಲಿ, ಕಣ್ಣಲ್ಲಿ, ಹೊರಗಡೆ ಕೂಡ ಮೂವಿಯಲ್ಲಿ ಆಗುವ ತರಹ ಜೋರಾಗಿ ಮಳೆ ಬಂತು. ಹಾಗಾದ್ರೆ ನನ್ನ ಹಾಗೂ ಸಹನನ ಪರಿಚಯ ಆಗಿ...