Posts

ನಿನ್ನ ಪ್ರೀತಿಗೆ ಅಭಿಮಾನಿ ನಾನೀಗ…

Image
ಪ್ರೀತಿ ಹೇಗೆ..? ಎಲ್ಲಿ..? ಯಾರ ಮೇಲೆ ಆಗುತ್ತೆ ಅಂತ ಗೊತ್ತೇ ಆಗಲ್ಲ. ಅದಕ್ಕೆ ಜಾತಿ ಇಲ್ಲ, ಬಣ್ಣ ಇಲ್ಲ ಅದು ಭಾವನೆಗಳ ಬೆಸುಗೆ, ಮನಸ್ಸುಗಳ ಬಂಧನ. ಪ್ರೀತಿಗೆ ಏನು ಬೇಕಾದರೂ ಗೆಲ್ಲುವ ಶಕ್ತಿ ಇರುತ್ತೆ, ಹಾಗೆಯೇ ಪ್ರೀತಿಗೆ ಎದುರು ಆಗುವ ಅಡೆತಡೆಗಳು ಜಾಸ್ತಿ. ಯಾರ ಜೊತೆಗಾದರೂ ಸ್ವಲ್ಪ ದಿನ ಜೊತೆಯಾಗಿದ್ದು ಅದು ಪ್ರೀತಿನಾ..? ಗೆಳೆತನನಾ..? ಅನ್ನುವ ಸಂಶಯ ದೂರ ಆಗಿ, ಇದು ಪ್ರೀತಿನೇ ಅಂತ ಅರಿವಾಗುವುದರೊಳಗೆ ಅವರು ದೂರ ಆಗಬಹುದು. ಅವರ ಭಾವನೆಗಳಿಗೆ ಬೆಲೆ ಕೊಟ್ಟು ಪ್ರೀತಿ ಹೇಳಿಕೊಳ್ಳದೆ ಇರಬಹುದು ಅಥವಾ ನಮ್ಮ ಕರ್ತವ್ಯಗಳಿಗೆ, ಗುರಿಗಳಿಗೆ ನಮ್ಮ ಪ್ರೀತಿ ಬಲಿಯಾಗಬಹುದು. ಒಟ್ಟಿನಲ್ಲಿ ಪ್ರೀತಿ ಪಡೆದುಕೊಂಡವನು ಪುಣ್ಯವಂತ, ಪ್ರೀತಿಯನ್ನು ಬೇರೆ ಯಾವುದಕ್ಕೋ ತ್ಯಾಗ ಮಾಡಿದವನು ತ್ಯಾಗಮಯಿ. ಲೋಕಾನೇ ಹಾಗೇ ಅಲ್ವಾ ಏನಾದ್ರೂ ಪಡೆದುಕೊಳ್ಳಬೇಕಾದರೆ ಬೇರೆ ಏನಾದ್ರೂ ಕಳೆದುಕೊಳ್ಳಲೇಬೇಕು. ನಾನು ಹೇಳುತ್ತಿರುವ ಕತೆಯೂ ಇದೇ ರೀತಿಯ ಒಂದು ಪ್ರೀತಿಗೆ ಸಂಬಂಧಪಟ್ಟಿದ್ದು. ಅರುಣ್ ಎನ್ನುವ ಸಾಫ್ಟ್ ವೇರ್ ಇಂಜಿನಿಯರ್, ಸ್ವಂತ ಊರು ಕರಾವಳಿಯ ಕುಂದಾಪುರವಾದರೂ ಮೂರು ವರ್ಷಗಳಿಂದ ಬೆಂಗಳೂರು ಎನ್ನುವ ಸಾಫ್ಟ್ವೇರ್ ಪ್ರಪಂಚದಲ್ಲಿ ನನ್ನ ಲೈಫ್ ಅನ್ನು ಕಟ್ಟಿಕೊಳ್ಳಲಿಕ್ಕೆ ಹರಸಾಹಸ ಪಡುತ್ತಿರುವ ಮುದ್ದು, ಪೆದ್ದು ಹುಡುಗ. ಮೂರು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ರು ಸಂಬಳದಲ್ಲಿ ಜಾಸ್ತಿ ಇಲ್ಲ ಅನ್ನೋದೊಂದು ಬಿಟ್ಟರೆ, ಇವನ ಖರ್ಚಿಗ...

ಬಹಮನಿ ನಾಡು ಬೀದರ್.

Image
ಕರ್ನಾಟಕದ ಉತ್ತರದ ತುತ್ತ ತುದಿ, ಕರ್ನಾಟಕದ ಕಲಶವೆಂದು ಪ್ರಖ್ಯಾತವಾಗಿರುವುದು ಬೀದರ್ ಜಿಲ್ಲೆ. ಪೂರ್ವದಲ್ಲಿ ತೆಲಂಗಾಣ, ಪಶ್ಚಿಮದಲ್ಲಿ ಮಹಾರಾಷ್ಟ್ರ, ದಕ್ಷಿಣದಲ್ಲಿ ಕಲಬುರಗಿ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದು  ಔರಾದ್, ಬಸವಕಲ್ಯಾಣ, ಬಾಲ್ಕಿ, ಬೀದರ್ ಮತ್ತು ಹುಮ್ನಾಬಾದ್ ಎನ್ನುವ ೫ ತಾಲ್ಲೂಕುಗಳನ್ನು ಒಳಗೊಂಡಿದೆ. ಪೌರಾಣಿಕವಾಗಿ ಬೀದರ್ ಜಿಲ್ಲೆಯನ್ನು ನೋಡುವುದಾದರೆ, ಮಹಾಭಾರತದ ವಿದುರಾನಗರ ಇದಾಗಿತ್ತು. ಹಾಗೆಯೇ ನಳದಮಯಂತಿಯರು ಮೊದಲು ಭೇಟಿಯಾದದ್ದು ಇದೇ ಬೀದರ್ ನಲ್ಲಿ. ಇನ್ನು ಇತಿಹಾಸಕ್ಕೆ ಬಂದರೆ ಮೌರ್ಯರು, ಸಾತವಾಹನರು, ರಾಷ್ಟ್ರಕೂಟರು, ಚಾಲುಕ್ಯರು, ಕಾಕತೀಯರು, ಬಹಮನಿ ಸುಲ್ತಾನರು, ಮೊಘಲರು ಹಾಗೂ ಹೈದರಾಬಾದ್ ನಿಜಾಮರು ಬೀದರನ್ನು ಆಳಿದ್ದಾರೆ. ರಾಷ್ಟ್ರಕೂಟರ ಮೊದಲ ರಾಜಧಾನಿಯಾದ ಮಯೂರ ಕಂಡಿ (ಮೊರಖಂಡಿ) ಇವಾಗಿನ ಬೀದರ್. ಚಾಲುಕ್ಯರ ರಾಜಧಾನಿಯಾಗಿದ್ದಂತಹ ಕಲ್ಯಾಣಿ ಇರುವುದು ಸಹ ಇದೇ ಬೀದರ್ ನಲ್ಲಿ. ಬಹಮನಿ ಅರಸರು ರಾಜಧಾನಿಯನ್ನು ಕಲಬುರಗಿಯಿಂದ ಬೀದರಿಗೆ ೧೪೨೫ ರಲ್ಲಿ ಬದಲಿಸಿದರು. ೧೫೧೮ ರವರೆಗೆ ಬೀದರ್ ಬಹಮನಿ ಸುಲ್ತಾನರ ರಾಜಧಾನಿಯಾಗಿ ಮೆರೆದಿತ್ತು. ಬಹಮನಿ ಸಮಾಧಿ. ಇನ್ನು ಇತ್ತೀಚಿನ ಇತಿಹಾಸಕ್ಕೆ ಬಂದ್ರೆ ಸ್ವಾತಂತ್ರ್ಯಪೂರ್ವದಲ್ಲಿ ಹೈದರಾಬಾದ್ ನಿಜಾಮರ ಆಡಳಿತದಲ್ಲಿ ಬೀದರ್ ಒಳಪಟ್ಟಿತ್ತು. ೧೭ ಸೆಪ್ಟೆಂಬರ್ ೧೯೪೮ರಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಇಂಡಿಯನ್ ಆರ್ಮಿ...

ನೆಟ್ ವರ್ಕ್ ಇಲ್ಲದ ಊರಿನಲ್ಲೊಂದು ಯಕ್ಷಗಾನ…!?

Image
ಯಕ್ಷಗಾನ ಕಲಾವಿದರು ತಮ್ಮ ತಮ್ಮ ಮೇಳಗಳನ್ನು ಸೇರಿಕೊಂಡು ವರ್ಷದ ತಿರುಗಾಟದ ಆರಂಭದ ಹೊಸ್ತಿ ನಲ್ಲಿದ್ದಾರೆ. ಹೋದ ವರ್ಷ ಒಂದು ಮೇಳದಲ್ಲಿದ್ದವರು, ಈ ವರ್ಷ ಇನ್ನೊಂದು ಮೇಳ ಸೇರಿಕೊಂಡಿರುವುದು ಒಂದು ಕಡೆ ಆದರೆ, ಒಂದೇ ಸಂಸ್ಥೆಯಿಂದ ನಡೆಸಲ್ಪಡುವ ಮೇಳಗಳಲ್ಲಿ ಕಲಾವಿದರ ಬದಲಾವಣೆ ಇನ್ನೊಂದು ಕಡೆಯಿಂದ ಸುದ್ದಿ ಮಾಡುತ್ತಾ ಇದೆ. “ಸಾಕಪ್ಪ, ಇನ್ನು ಸ್ವಲ್ಪ ವಿಶ್ರಾಂತಿ ಪಡೆಯೋಣ ” ಅಂತ ಕೆಲವರು ಮೇಳಗಳನ್ನು ಬಿಟ್ಟು ಅತಿಥಿ ಕಲಾವಿದರ ಸ್ಥಾನವನ್ನು ಅಲಂಕರಿಸಿದ್ದಾರೆ. ಡೇರೆ ಮೇಳಗಳು ಈ ವರ್ಷ ಜನರನ್ನು ರಂಜಿಸಲು ಯಾವ ನೂತನ ಪ್ರಸಂಗಗಳೊಂದಿಗೆ ದಾಂಗುಡಿ ಇಡುತ್ತಿವೆ ಎಂದು ಜನ ಕಾತರರಾಗಿದ್ದಾರೆ. “ಏನಪ್ಪಾ ಇದು, ನೆಟ್ ವರ್ಕಿಗೂ ಯಕ್ಷಗಾನಕ್ಕೂ ಏನು ಸಂಬಂಧ ?” ಅಂತ ಶೀರ್ಷಿಕೆ ಓದಿದವರಿಗೆ ಒಂದು ಸಂದೇಹ ಬಂದಿರಬಹುದು. ಆಧುನಿಕ ತಂತ್ರಜ್ಞಾನದ ಮಾಯಾಲೋಕದಲ್ಲಿ ಮುಳುಗಿರುವಂತಹ ಪ್ರಸಕ್ತ ಸಮಾಜದಲ್ಲಿ ಅನೇಕ ಪಾರಂಪರಿಕ ಕಲಾ ಪ್ರಕಾರಗಳ ಪರಿಚಯ ಇಲ್ಲದಾಗಿದೆ. ಹಾಗಾಗಿ ನೆಟ್ ವರ್ಕಿಗೂ ಯಕ್ಷಗಾನಕ್ಕೂ ಇರುವ ಸಂಬಂಧ ಸ್ವಲ್ಪ ಹೊತ್ತಲ್ಲೇ ನಿಮಗೆ ಗೊತ್ತಾಗುತ್ತೆ. ನನ್ನ ಆತ್ಮೀಯ ಗೆಳೆಯನೊಬ್ಬನ ಮನೆಯಲ್ಲಿ ಯಕ್ಷಗಾನ ಹರಕೆ ಬಯಲಾಟವನ್ನು ಆಯೋಜಿಸಿದ್ದರು. ಗೆಳೆಯ ತುಂಬಾ ಆತ್ಮೀಯ ನಾದ್ದರಿಂದ ಹೋಗಲೇಬೇಕಾದ ಪರಿಸ್ಥಿತಿ ಎದುರಾಯಿತು. ಮಧ್ಯಾಹ್ನದ ಭೋಜನಕ್ಕೆ ಹೋಗಲು ಸಾಧ್ಯವಾಗದೆ ಇದ್ದಿದ್ದರಿಂದ ಸಂಜೆ ಹೋಗಿ ಮುಖ ತೋರಿಸಿ ಬರೋಣ ಅಂತ ಸುಮಾರು ೪ ಗಂಟೆ ಹೊತ್...

ಅವಳ್ಯಾಕೆ ನಗಲಿಲ್ಲಾ, ನನ್ನ ಮುಖ ನೋಡಿ...!?

Image
          ಇಂಜಿನಿಯರಿಂಗ್ ಓದುತ್ತಿದ್ದ ದಿನಗಳವು, ಫಿಸಿಕ್ಸ್ ಮತ್ತು ಕೆಮೆಸ್ಟ್ರಿ ಸೈಕಲ್ ಸರಿಯಾಗಿ ತುಳಿದು EC ಬ್ರಾಂಚ್ಗೆ ಎಂಟ್ರಿ ಆಗಿತ್ತು. ನಾನೊಬ್ಬ ಕಾರ್ನರ್ ಹುಡುಗ, ನನ್ನಷ್ಟಕ್ಕೆ  ನಾನು ಕಾಲೇಜಿಗೆ ಬರ್ತಾ ಇದ್ದೆ ಕಾರ್ನರ್ ಸೀಟ್ ನಲ್ಲಿ ಕುರ್ತಾ ಇದ್ದೇ , ಲೆಕ್ಚರ್ಸ್ ಗಳ ಪಾಠ ಇಷ್ಟ ಆದ್ರೆ ಕೇಳ್ತಾ ಇದ್ದೆ, ಇಲ್ಲದಿದ್ದರೆ ನನ್ನ ಕಲ್ಪನಾ ಲೋಕದಲ್ಲಿ ನನನ್ನು ನಾನು ಕಳೆದುಕೊಂಡು ಹಾಸ್ಟೆಲಿಗೆ ಹೋಗಿ ಬಿದ್ದುಕೊಳ್ಳುತ್ತ ಇದ್ದೇ. ಹನುಮಂತನ ವಂಶದವರು ನಾವು ಹಾಗಾಗಿ ಕಾಲೇಜು ಆರಂಭವಾಗಿ ಎರಡು ಸೆಂ ಕಳೆದ್ರು ಹುಡುಗರನ್ನು ಬಿಟ್ಟು ,ಹುಡುಗಿಯರ ಹತ್ರ ಅಷ್ಟಾಗಿ ಮಾತಾಡೋದು ಇರಲಿ, ಹುಡುಗಿಯರ ಕಡೆ ನೋಡೋದು ಕಮ್ಮಿ ಇತ್ತು . ಹುಟ್ಟಿನಿಂದ ಬಾಯ್ಸ್ ಸ್ಕೂಲ್ ನಲ್ಲಿ ಕಲಿತಿದ್ದಕ್ಕೆನೋ, ಗೊತ್ತಿಲ್ಲ ಹುಡುಗಿಯರ ಹತ್ತಿರ ಮಾತನಾಡಲಿಕ್ಕೆ ಸ್ವಲ್ಪ ಮುಜುಗರ ಜಾಸ್ತಿ .           ಹೀಗೆ ನಡೆತಿರಬೇಕಾದರೆ ಒಂದು ದಿನ ಮೇಡಂ ಕೇಳಿದ ಪ್ರಶ್ನೆಗೆ ಉತ್ತರ ಹೇಳಲಿಕ್ಕೆ, ಹುಡುಗಿಯರ ಕಡೆಯಿಂದ ಒಬ್ಬಳು ಎದ್ದು ನಿಂತ್ಲು . ಯಾರು ನೋಡೋಣ ಅಂತ ತಿರುಗಿದೆ, ಕತ್ತು ಉಳುಕಿತೋ ಏನೋ ಗೊತ್ತಿಲ್ಲ, ಹೇಳಿಕೇಳಿ ಕಾರ್ನರ್ ಸೀಟ್ ನೋಡಿ ನನ್ನ ಮಗಂದು ಈ ಕಡೆ ತಿರುಗಲೇ ಇಲ್ಲ, ನೋಡಿಕೊಂಡೇ ಕುಳಿತುಕೊಂಡೆ. ಅವತ್ತು ರಾತ್ರಿ ಯಾಕೋ ಜಾಸ್ತಿನೇ ನಿದ್ದೆ ಬರಲಿಲ್ಲ. ಮುಂದಿನ ದಿನದಿಂದ ಕಾಲೇಜಿಗೆ ಹೋಗಲಿ...

ಮುಗಿಲೂರಿಗೊಂದು ಪಯಣ...

Image
                    ಐಟಿ ಫೀಲ್ಡ್ ಅಂದ್ರೆ ಹಾಗೆ, ಕೆಲಸ ಕಮ್ಮಿ ಎಂಜೋಯ್ಮೆಂಟ್ ಜಾಸ್ತಿ. ವಾರಕ್ಕೊಂದು ಪಾರ್ಟಿ, ಮನಸ್ಸಾದಾಗ ಔಟಿಂಗ್ ನಡಿತ್ತಾನೇ ಇರುತ್ತೆ. ಇವೆಲ್ಲಾ ನಿರಂತರ ಕೆಲಸದ ಒತ್ತಡವನ್ನು ಹೊರಹಾಕಲಿಕ್ಕೆ ಅಂತ ಸಹಾ ಹೇಳ್ತಾರೆ.           ನಾನು ಕೂಡ ಮಂಗಳೂರಿನ ಒಂದು ದೊಡ್ಡ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇರೋದು. ಅವತ್ತು ಶುಕ್ರವಾರ, ರಾತ್ರಿ ನಮ್ಮ ಮನೆಯಲ್ಲಿ ಗೆಳೆಯರೆಲ್ಲಾ ಸೇರಿದ್ವಿ. ಅದಕ್ಕೆ ಸರಿಯಾಗಿ ಅವತ್ತು ಮಂಗಳೂರಿನಲ್ಲಿ ಜೋರು ಮಳೆ ಬೇರೆ. ಎಲ್ಲರೂ ಒಳ್ಳೆಯ ಹುಡುಗರೇ, ಆದ್ದರಿಂದ ಮಿರಿಂಡ,ಥಮ್ಸಪ್, ಕೋಲಾ, ಕುರ್ ಕುರೆ, ಪೊಟೆಟೋ ಚಿಪ್ಸ್ ಹಾಗೆಯೇ ಸ್ವಲ್ಪ ಮಾತು ಬಿಟ್ರೆ ಬೇರೆ ಏನು ಇರಲಿಲ್ಲಾ. ಒಬೊಬ್ಬರೇ ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಳ್ಳುತ್ತಾ ಇದ್ದರು. ಕೆಲವರು ಇನ್ನೊಬ್ಬರ ಕಾಲು ಏಳಿತಾ ಇದ್ದರೇ, ಕೆಲವರು ತಮ್ಮ ಡ್ರಿಮ್ಸ್, ಡ್ರಿಮ್ ಗರ್ಲ್ ಬಗ್ಗೆ ಹೇಳುತ್ತಾ ಇದ್ದರು. ಇವೆಲ್ಲವನ್ನು ಕೇಳಿಯೂ ಕೇಳದಂತೆ ಮಳೆ ತನ್ನಷ್ಟಕ್ಕೆ ತಾನು ಸುರಿಯುತ್ತಲಿತ್ತು.           4 ಬಾಟಲಿ ಮಿರಿಂಡ ಖಾಲಿಯಾಯ್ತು. ತಂದ ಚಿಪ್ಸ್ ಪ್ಯಾಕೆಟ್ ಗಳೆಲ್ಲಾ ಖಾಲಿಯಾಯ್ತು. ಡ್ಯಾನ್ಸ್ ಕೂಡ ಮಾಡಿಯಾಯ್ತು. ಅದ...

70 ವರ್ಷ ತುಂಬಿದ ಸ್ವತಂತ್ರ ಭಾರತೀಯ.

Image
                  ಭಾರತ ಸ್ವಾತಂತ್ರ್ಯವನ್ನು ಪಡೆದು ಇಲ್ಲಿಗೆ ಎಪ್ಪತ್ತು ವರ್ಷ ತುಂಬಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆವಾಗ ದೇಶ ಎಲ್ಲಿತ್ತು, ಇವಾಗ ಎಲ್ಲಿ ಬಂದು ನಿಂತಿದೆ ಎನ್ನುವುದು ಮುಖ್ಯವಾದ ವಿಷಯ. 1947  ಆಗಸ್ಟ್ 14 ರ ಮಧ್ಯರಾತ್ರಿ ಅನೇಕ ದೇಶಪ್ರೇಮಿಗಳ ಪ್ರಾಣ ತ್ಯಾಗದಿಂದ , ಹಿಂಸೆ ಮತ್ತು ಅಹಿಂಸಾತ್ಮಕ ಚಳವಳಿಗಳಿಂದ ನಮ್ಮ ದೇಶ ಸ್ವತಂತ್ರ ಭಾರತವಾಯಿತು. ಅಬ್ಬ ಬ್ರಿಟಿಷರ ಕಾಲ ಕಳೆದಾಯಿತು ಅನ್ನುವಷ್ಟರಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ರಾಕ್ಷಸರ ಉದಯ . ಈ ಚಂಡ ಮುಂಡರ ಅಟ್ಟಹಾಸದ ನಡುವಲ್ಲಿ ಭಾರತಾಂಬೆ ಅಭಿವೃದ್ಧಿಯ ಪಥದತ್ತ ಸಿಂಹವನ್ನೇರಿ ತನ್ನ ನಡೆ ಆರಂಭಿಸಿದಳು. ತನ್ನ ಮೊದಲನೆಯ ಹೆಜ್ಜೆ ಪೂರ್ಣಗೊಳಿಸುವಷ್ಟರಲ್ಲಿ ರಾಮರಾಜ್ಯದ ಕನಸನ್ನು ಹೊತ್ತ, ಸ್ವಾತಂತ್ರ್ಯದ ರೂವಾರಿ ಗಾಂಧೀಜಿಯ ಅಗಲುವಿಕೆ ಆಘಾತವನ್ನೇ ನೀಡಿತು. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಯುದ್ಧ , ತುರ್ತು ಪರಿಸ್ಥಿತಿ, ರಾಜಕೀಯ ಅಸಮತೋಲನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿರಸ್ಕಾರ, ಭಯೋತ್ಪಾದಕರ ದಾಳಿ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲೂ ಏಳು ಬೀಳುಗಳನ್ನು ಕಂಡು ಎಪ್ಪತ್ತು ಹೆಜ್ಜೆಗಳನ್ನು ಪೂರ್ಣಗೊಳಿಸಿದೆ .           ಭಾರತದ ರಾಜಕೀಯ ವ್ಯವಸ್ಥೆ ಎನ್ನುವುದು ಭಾರತಾಂಬೆಯ ಸಿಂಹವಾಹನದಂ...

ನಿನ್ನ ಮದುವೆ ಯಾವಾಗ...?

Image
          ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರ ಮದುವೆಗೆ ತೆರಳಿದಾಗ ಒಂದು ಆಶ್ಚರ್ಯ ಕಾದಿತ್ತು. ಇಷ್ಟು ದಿನಾ "ನಿನಗೆ ಮಾರ್ಕ್ ಎಷ್ಟು ?", "ಏನು ಓದುತ್ತಾ ಇರೋದು ?", "ಯಾವ ಕಾಲೇಜು ?", "ಎಲ್ಲಿ ಕೆಲಸ ಮಾಡಿಕೊಂಡಿರೋದು ?", "ಸಂಬಳ ಎಷ್ಟು ?" ಅಂತೆಲ್ಲಾ ಕೇಳುತ್ತಿದ್ದ ಸಂಬಂಧಿಕರ ಪ್ರಶ್ನೆ ಅವತ್ತು ಬೇರೆ ಆಗಿತ್ತು. ಭೇಟಿಯಾದ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡಪ್ಪ, ದೊಡಮ್ಮ, ಅತ್ತೆ, ಮಾವ ಯಾರು ಸಿಕ್ಕಿದ್ರು "ಮುಂದೆ ನಿಂದೆ ಮದುವೆ", "ನಿನ್ನ ಮದುವೆ ಯಾವಾಗ ?", "ನೀನೆ ನೋಡಿಕೊಂಡಿದ್ಯೋ, ಅಥವಾ ತಂದೆ ತಾಯಿಗೆ ಬಿಟ್ಟಿದ್ಯೋ" ಅನ್ನೋ ಮಾತುಗಳು ಹೆಚ್ಚಾಗಿತ್ತು. ಇಂತಹಾ ಮಾತುಗಳನ್ನು ಕೇಳಿ ಮನಸ್ಸು ಕುಣಿತಾ ಇದ್ರೂ, ತೋರಿಸಿಕೊಳ್ಳಲಿಕ್ಕೆ ಆಗ್ತಾ ಇರಲಿಲ್ಲಾ.           ಇಂತಹಾ ಪ್ರಶ್ನೆಗಳು ನನಗೆ ಮಾತ್ರ ಅಲ್ಲಾ, ಶಿಕ್ಷಣ ಮುಗಿಸಿ ಒಳ್ಳೆಯ ಕೆಲಸದಲ್ಲಿರುವ, ೨೩ ರಿಂದ ೨೮ ವರ್ಷ ವಯಸ್ಸಿನಲ್ಲಿರುವ ಹುಡುಗ/ಹುಡುಗಿಯರಿಗೆ ಸರ್ವೇ ಸಾಮಾನ್ಯ. ನನ್ನಂತೆ ಈ ವಯೋಮಿತಿಯಲ್ಲಿರುವ ಅನೇಕರಿಗೆ ಕಾಡುತ್ತಿರುವ ಪ್ರಶ್ನೆ ಒಂದೇ "ಮದುವೆ ಆಗಲು ಸರಿಯಾದ ವಯಸ್ಸು ಯಾವುದು ?". ಈ ಸಮಯದಲ್ಲಿ ಶಿಕ್ಷಣ ಮುಗಿಸಿ, ಒಂದು ಕೆಲಸ ಹಿಡಿದು ಒಂದು ಹಂತಕ್ಕೆ ಬಂದ್ವೀ ಅಂತಾ ಹೇಳ್ಬೇಕಾದ್ರೆ "ಮದುವೆ" ಅನ್ನುವ ಪದ ನಮ್ಮ ಜೀವನದ...