"ತಂದೆ ಎನ್ನುವ ಪದವಿ" ಗಂಡು ಮಕ್ಕಳ ಕಣ್ಣಲ್ಲಿ...!!
"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ" ಎನ್ನುವ ಮಾತಿಗನುಸಾರವಾಗಿ, ನಮ್ಮ ಸಮಾಜದಲ್ಲಿ ತಾಯಿಗೆ ಒಂದು ಉತ್ತಮವಾದ ಸ್ಥಾನಮಾನವನ್ನು ಕಲ್ಪಿಸಿದ್ದೇವೆ. ಆದರೆ ತಂದೆಗೆ ತಾಯಿಯಷ್ಟು ಮಹತ್ವವನ್ನು ನಮ್ಮ ಸಮಾಜ ಕೊಟ್ಟಂತೆ ಕಾಣುತ್ತಿಲ್ಲಾ. ಅದರಲ್ಲೂ ಗಂಡು ಮಕ್ಕಳಿಗೆ ತಂದೆ ಒಬ್ಬ ವಿಲನ್. ತಂದೆ ಅನ್ನುವುದು ಒಂದು ಅಧಿಕಾರ,ಅದೊಂದು ಪದವಿ,ಅದೊಂದು ಜವಾಬ್ಧಾರಿ. ಒಂದು ಒಳ್ಳೆಯ ಗಂಡು ಮಗನಾಗಿ ತಂದೆ ಬಗ್ಗೆ ಹೇಳುವ ಒಂದು ಸಣ್ಣ ಪ್ರಯತ್ನ. ತಂದೆ ಎನ್ನುವ ಪದ,ಮಗುವಿನ ಜನನದೊಂದಿಗೆ ಜನ್ಮ ತಾಳುತ್ತೆ. ಅದರ ಜೊತೆ ಒಂದು ಜೀವದ ಜವಾಬ್ಧಾರಿಯೂ ಆ ಪದವಿಯ ಮೇಲೆ ಬೀಳುತ್ತೆ. ಆ ಕ್ಷಣದಲ್ಲಿ ತಂದೆಗೆ ಮಗನಾಗಿದ್ದವನು ತನ್ನ ಮಗುವಿಗೆ ತಂದೆ ಆಗುತ್ತಾನೆ. ಇಷ್ಟು ದಿನಗಳ ಕಾಲ ತಾನು ನಿಂತು ವೀಕ್ಷಿಸುತ್ತಿದ್ದಂತಹ ಸ್ಥಾನದಲ್ಲಿ ಕೂರುವ ಸರದಿ ಇವನದ್ದಾಗಿರುತ್ತದೆ. ಅದರಲ್ಲೂ ಹೆಣ್ಣು ಮಗು ಹುಟ್ಟಿತು ಅಂತಾ ಬೇಜಾರು ಮಾಡಿಕೊಳ್ಳುವವರು ಒಂದು ಕಡೆ ಆದರೆ, "ಮಗು ಯಾವುದಾದರೂ ಆಗಲಿ, ಹೆಂಡತಿ ಮಗು ಚೆನ್ನಾಗಿದ್ದರೆ ಸಾಕು" ಅಂತಾ ಸಂತೋಷ ಪಡುವವರು ಒಂದು ಕಡೆ. ಹಾಗೆಯೇ "ನನಗೆ ತಂದೆ ಆಗುವ ಭಾಗ್ಯ ಯಾವಾಗ ಕರುಣಿಸುತ್ತಿಯಪ್ಪ" ಅಂತಾ ದೇವರ ಬಳಿ ಬೇಡಿಕೊಳ್ಳುವವರೂ ಒಂದು ಕಡೆ. "ಬೇಜವ್ಧಾರಿ ಹುಡುಗ,ಸಮಯಕ್ಕೆ ಸರಿಯಾಗಿ ಮನೆಗೆ ಬರುವುದಿಲ್ಲಾ", ಅಂತೆಲ್ಲಾ ಬೈಯಿಸಿಕೊಳ್ಳ